ಹೆರಿಶಿಯೆರ ಪ್ಯಾಪಿಲಿಯೊ Bedd. - ಸ್ಟರ್ಕ್ಯೂಲಿಯೇಸಿ

:

Vernacular names : Tamil: ಚೋಲಚಡಚಿ,ಚೊಕ್ಲ ಮರಂಕನ್ನಡದ ಪ್ರಾದೇಶಿಕ ಹೆಸರು: ಸುಂದ್ರಿ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 30 ಮೀ ಎತ್ತರದವರೆಗಿನ,ಆನಿಕೆಗಳನ್ನುಳ್ಳ ಮರಗಳು.
ಕಾಂಡ ಮತ್ತು ತೊಗಟೆ : ಕಾಂಡ ಕೊರಕಲುಗಳನ್ನೊಳಗೊಂಡಿರುತ್ತದೆ;ತೊಗಟೆ ಕಂದು ಬಣ್ಣ ಹೊಂದಿದ್ದು, ಚಕ್ಕೆಯೇಳುವ ರೂಪದಲ್ಲಿರುತ್ತವೆ;ಕಚ್ಚು ಮಾಡಿದ ಜಾಗ ಕೆಂಪು ಛಾಯೆ ಹೊಂದಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದೃಢವಾಗಿದ್ದು,ಚಕ್ಕೆ ರೂಪದಲ್ಲಿರುತ್ತವೆ,ದಟ್ಟ ಮೃದು ತುಪ್ಪಳದಿಂದ ಕೂಡಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿದ್ದು ಕುಡಿ ಕೊಂಬೆಗಳ ತುದಿಯಲ್ಲಿ ಗುಂಪಾಗಿರುತ್ತವೆ; ಕಾವಿನೆಲೆಗಳು 0.3 ಸೆಂ. ಮೀ. ಉದ್ದವಿರುತ್ತವೆ,ಶಲ್ಕೆಗಳ ಸಮೇತವಿದ್ದು, ಭರ್ಜಿ ಅಥವಾ ದಬ್ಬಳದ ಆಕಾರ ಹೊಂದಿದ್ದು,ಪಾರ್ಶ್ವದಲ್ಲಿದ್ದು,ಉದುರಿಹೋಗುವ ಮಾದರಿಯವುಗಳಾಗಿದ್ದು ಉದುರಿದ ನಂತರ ಗುರುತುಗಳನ್ನು ಉಳಿಸುತ್ತವೆ; ತೊಟ್ಟುಗಳು 0.6 – 2.5 ಸೆಂ.ಮೀ. ವರೆಗಿನ ಉದ್ದವಿದ್ದು, ದುಂಡಾಗಿರುತ್ತವೆ, ಶಲ್ಕೆಗಳ ಸಮೇತವಿದ್ದು,ಎರಡೂ ಕಡೆ ಉಬ್ಬಿರುತ್ತವೆ; ಪತ್ರಗಳು 7.5 – 13(-21) X 2.6 – 6.5 ಸೆಂ.ಮೀ. ಗಾತ್ರ, ಅಂಡದಿಂದ ಅಂಡ-ಭರ್ಜಿವರೆಗಿನ ಆಕಾರ ಹೊಂದಿದ್ದು, ಚೂಪಾದುದರಿಂದ ಸಂಕುಚಿತ ಕ್ರಮೇಣವಾಗಿ ಚೂಪಾಗುವ ತುದಿ,ದುಂಡಾದ-ಉಪಹೃದಯಾಕಾರದ ಮಾದರಿಯ ಬುಡ, ನಯವಾದ ಅಂಚು, ತೆಳು ತೊಗಲನ್ನು ಹೋಲುವ ಮೇಲ್ಮೈ ಹೊಂದಿರುತ್ತವೆ ಹಾಗೂ ತಳಭಾಗದಲ್ಲಿಬೆಳ್ಳಿ ಬಣ್ಣದ ಸೂಕ್ಷ್ಮ ಹೊಟ್ಟನ್ನು ಹೊಂದಿದ್ದು ಮೇಲ್ಭಾಗದಲ್ಲಿ ರೋಮರಹಿತವಾಗಿರುತ್ತವೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಉಬ್ಬಿರುತ್ತದೆ; ಪತ್ರಗಳ ತಳಭಾಗದಲ್ಲಿ 3 ನಾಳಗಳಿರುತ್ತವೆ;ಎರಡನೇ ದರ್ಜೆಯ ನಾಳಗಳು 3-6(ಪಾರ್ಶ್ವದವುಗಳನ್ನು ಹೊರತು ಪಡಿಸಿ) ಜೋಡಿಗಳಿದ್ದು ಆರೋಹಣ ಮಾದರಿಯವುಗಳಾಗಿರುತ್ತವೆ;ಮೂರನೇ ದರ್ಜೆಯ ನಾಳಗಳು ಜಾಲಬಂಧ ನಾಳ ವಿನ್ಯಾಸದಲ್ಲಿದ್ದು ಎಲೆ ದಿಂಡಿಗೆ ಅಡ್ಡವಾಗಿ ಕೂಡುವ ಮಾದರಿಯವುಗಳಾಗಿರುತ್ತವೆ ಅಥವಾ ಕೆಲವು ವೇಳೆ ಅಸ್ಪಷ್ಟವಾಗಿರುತ್ತವೆ.
ಪುಷ್ಪಮಂಜರಿ / ಹೂಗಳು : ಹೂಗಳು ಅಕ್ಷಾಕಂಕುಳಿನಲ್ಲಿನ ಪುನರಾವೃತ್ತಿಯಾಗಿ ಕವಲೊಡೆಯುವ ಮಾದರಿಯವು; ಹೂಗಳು ಏಕಲಿಂಗಿಗಳು,ಸಣ್ಣ ಗಾತ್ರದವುಗಳಾಗಿದ್ದು ಕೆನೆ ಬಣ್ಣದಲ್ಲಿರುತ್ತವೆ.
ಕಾಯಿ / ಬೀಜ : ಫಲಗಳು ಸಮಾರಾ ಮಾದರಿಯವುಗಳಾಗಿದ್ದು ಕಂದು ಬಣ್ಣದಲ್ಲಿದ್ದು 3.6(-6.4) ಸೆಂ.ಮೀ. ಉದ್ದವಿರುತ್ತವೆ;ಬೀಜದ ಸಂಖ್ಯೆ 1.

ಜೀವಪರಿಸ್ಥಿತಿ :

400 ರಿಂದ 1400 ಮೀ. ವರೆಗಿನ ಎತ್ತರದ ಪ್ರದೇಶಗಳ ತೇವಾಂಶದಿಂದ ಕೂಡಿದ ನಿತ್ಯ ಹರಿದ್ವರ್ಣ ಕಾಡುಗಳ ಮೇಲ್ಛಾವಣಿಯಲ್ಲಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ಭಾರತ; ಪಶ್ಚಿಮ ಘಟ್ಟದ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿ ಪ್ರದೇಶಗಳು.

ಗ್ರಂಥ ಸೂಚಿ :

Fl. Sylv. t. 218. 1872; Gamble, Fl. Madras 1: 104. 1997 (re. ed); Sasidharan, Biodiversity documentation for Kerala- Flowering Plants, part 6: 57. 2004.

Top of the Page