English   Kannada   Malayalam   Tamil   
ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಸ್ಥಿತಿ ಗ್ರಂಥ ಸೂಚಿ
ಪ್ರಕೃತಿ : | ದೊಡ್ಡದಾದ ಈ ಮರಗಳು 35 ಮೀ ಎತ್ತರದವರೆವಿಗೆ ಬೆಳೆಯುತ್ತವೆ. |
ಕಾಂಡ ಮತ್ತು ತೊಗಟೆ : | ತೊಗಟೆಯ ಮೇಲ್ಮೈ ನಯವಾಗಿರುತ್ತದೆ. |
ಕವಲುಗಳು ಮತ್ತು ಕಿರುಕೊಂಬೆಗಳು : | ಕಿರುಕೊಂಬೆಗಳು ಬಲಿಷ್ಟವಾಗಿದ್ದು,ಗುಂಡಾಕೃತಿಯಲ್ಲಿರುತ್ತವೆ. |
ಜಿನುಗು ದ್ರವ : | ಸಸ್ಯಕ್ಷೀರ ಕಪ್ಪುಬಣ್ಣವುಳ್ಳದಾಗಿರುತ್ತದೆ |
ಎಲೆಗಳು : | ಎಲೆಗಳು ಸರಳ, ಪರ್ಯಾಯ – ಸುತ್ತು ಜೋಡನಾ ವ್ಯವಸ್ಥೆಯಲ್ಲಿ ಕುಡಿಕೊಂಬೆಗಳ ತುದಿಯಲ್ಲಿ ಗುಂಪಾಗಿರುತ್ತವೆ.ಎಲೆತೊಟ್ಟು 3.8 ಸೆಂ.ಮಿ.ಉದ್ದವಾಗಿದ್ದು, ಕಾಲುವೆ ಆಕಾರದ ಗೆರೆಗಳನ್ನು ಹೊಂದಿದ್ದು, ತುಕ್ಕಿನ ಬಣ್ಣದ, ದಟ್ಟವಾದ ಮೃದುತುಪ್ಪಳದಿಂದ ಕೂಡಿರುತ್ತದೆ. ಚಾಚುಚೀಲಗಳು 1 ರಿಂದ 2 ಜೋಡಿಗಳಿದ್ದು , ಕಂದು ಬಣ್ಣದ ಮೃದುರೋಮಗಳಿಂದ ಆವೃತ್ತವಾಗಿದ್ದು, ದೃಢವಾಗಿರುತ್ತದೆ.ಎಲೆಪತ್ರ 19 – 44 x 7-20 ಸೆಂ.ಮಿ.ಗಾತ್ರದಲ್ಲಿದ್ದು,ಬುಗುರಿ-ಈಟಿ ಸಮ್ಮಿಶ್ರಾಕಾರವನ್ನು ಹೊಂದಿರುತ್ತದೆ; ಪತ್ರದ ಮೇಲಿನ ಅರ್ಧ ಭಾಗ ವಿಶಾಲವಾದ ಗುಂಡಾಕಾರ ಅಥವಾ ತ್ರಿಕೋನಾಕಾರವಾಗಿದ್ದು,ಉಪ-ಕ್ರಮೇಣವಾಗಿ ಚೂಪಾಗುವ ತುದಿಯನ್ನೂ, ಕೆಳಗಿನ ಅರ್ಧ ಭಾಗ ಬೆಣೆಯಾಕಾರದದಿಂದ ಹಿಡಿದು ಚೂಪಾಗುವ ಬುಡಭಾಗವನ್ನೂ ಹೊಂದಿರುತ್ತವೆ; ಅಂಚು ಕೂದಲುಯುಕ್ತವಾಗಿದ್ದು, ಮೇಲ್ಮೈ ತೊಗಲಿನ ತರಹವಿರುತ್ತದೆ. ಪತ್ರಗಳ ಎಳೆಯದಾಗಿದ್ದಗ ತುಕ್ಕಿನಬಣ್ಣ, ದಟ್ಟ ಮೃದುತುಪ್ಪಳದಿಂದ ಕೂಡಿರುತ್ತದೆ.ಬಲಿತ ಪತ್ರಗಳ ತಳಭಾಗ ಮೃದುತುಪ್ಪಳ ಸಹಿತವಾಗಿರುತ್ತದೆ; ಮಧ್ಯನಾಳ ಪತ್ರದ ಮೇಲ್ಭಾಗ ಚಪ್ಪಟೆಯಾಗಿದ್ದು, ಕೂದಲು ಸಹಿತವಾಗಿರುತ್ತದೆ; ಪತ್ರದಲ್ಲಿ ಸುಮಾರು 30 ಜೋಡಿ ಎರಡನೇ ದರ್ಜೆ ನಾಳಗಳಿದ್ದು ಮೂರನೇ ದರ್ಜೆ ನಾಳಗಳು ಜಾಲಬಂಧ ವಿನ್ಯಾಸ ಹೊಂದಿರುತ್ತವೆ. |
ಪುಷ್ಪಮಂಜರಿ/ಹೂಗಳು : | ಹೂಗಳು ಸಂಕೀರ್ಣಲಿಂಗಿಗಳಾಗಿದ್ದು ಅಕ್ಷಾಕಂಕುಳಿನ ಅಥವಾ ತುದಿಯಲ್ಲಿನ ಪುನರಾವೃತ್ತಿಯಾಗಿ ಕವಲೊಡೆದ ಪುಷ್ಪಮಂಜರಿಯಲ್ಲಿರುತ್ತವೆ |
ಕಾಯಿ /ಬೀಜ : | ಕಾಯಿಗಳು ಡ್ರೂಪ್ ಮಾದರಿಯವು ಹಾಗೂ ಒಂದು ಬೀಜವನ್ನು ಒಳಗೊಂಡಿದ್ದು ಅರ್ಧದಷ್ಟು ಭಾಗ ಹೈಪೋಕಾರ್ಪಿನಲ್ಲಿ ಹುದುಗಿಕೊಂಡಿರುತ್ತದೆ. |