ಹೊಮೊನೋಯಿಯ ರೈಪಾರಿಯ Lour. - ಯೂಫೊರ್ಬಿಯೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 5 ಮೀ. ಎತ್ತರದವರೆಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕಂದು ಬಣ್ಣದಲ್ಲಿದ್ದು ಚಕ್ಕೆ ರೂಪದಲ್ಲಿರುತ್ತದೆ;ಕಚ್ಚು ಮಾಡಿದ ಜಾಗ ಹಳದಿ ಬಣ್ಣದ್ದಾಗಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು ಎಳೆಯದಾಗಿದ್ದಾಗ ಮೃದುತುಪ್ಪಳದಿಂದ ಕೂಡಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದುಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ. ಕಾವಿನೆಲೆಗಳು ಜೋಡಿಗಳಾಗಿ ಇರುತ್ತವೆ ಮತ್ತು ಉದುರಿಹೋದ ನಂತರ ಗುರುತುಗಳನ್ನು ಉಳಿಸುತ್ತವೆ; ತೊಟ್ಟುಗಳು 1ಸೆಂ.ಮೀ.ವರೆಗಿನ ಉದ್ದವಿರುತ್ತವೆ; ಪತ್ರಗಳು 16.5 X 2 ಸೆಂ. ಮೀ. ವರೆಗಿನ ಗಾತ್ರ ಹೊಂದಿರುತ್ತವೆ ಮತ್ತು ರೇಖಾತ್ಮಕ – ಭರ್ಜಿಯ ಆಕಾರ, ಚೂಪಾದ ತುದಿ, ಬೆಣೆಯಾಕಾರದ ಬುಡ ಹೊಂದಿರುತ್ತವೆ;ಅಂಚು ನಯವಾಗಿರುತ್ತದೆ;ಪತ್ರದ ಮೇಲ್ಮೈ ತೊಗಲ್ಲನ್ನೋಲುವ ಮಾದರಿಯಲ್ಲಿದ್ದು ಪತ್ರದ ತಳಭಾಗ ರಸಗ್ರಂಥಿ ಸಮೇತವಿರುವ ಶಲ್ಕೆಗಳಿಂದ ಕೂಡಿರುತ್ತವೆ;ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಉಬ್ಬಿರುತ್ತದೆ;ಎರಡನೇ ದರ್ಜೆಯ ನಾಳಗಳು 15-19 ಜೋಡಿಗಳಿರುತ್ತವೆ;ಮೂರನೇ ದ್ರಜೆಯ ನಾಳಗಳು ಜಾಲಬಂಧ ನಾಳ ವಿನ್ಯಾಸದವು.
ಪುಷ್ಪಮಂಜರಿ/ಹೂಗಳು : ಪುಷ್ಪಮಂಜರಿ ಕದಿರು ಮಂಜರಿ ಮಾದರಿಯಲ್ಲಿದ್ದು ಅಕ್ಷಾಕಂಕುಳಿನಲ್ಲಿ ಇರುತ್ತವೆ; ಹೂಗಳು ಕೆಂಪಾಗಿರುತ್ತವೆ ಮತ್ತು ಏಕಲಿಂಗಿಗಳಾಗಿದ್ದು ಗಂಡು ಮತ್ತು ಹೆಣ್ಣು ಹೂಗಳು ಪ್ರತ್ಯೇಕ ಸಸ್ಯಗಳಲ್ಲಿ ಇರುತ್ತವೆ.
ಕಾಯಿ /ಬೀಜ : ಸಂಪುಟ ಫಲದಲ್ಲಿ ಮೂರು 2 ಕೋಶವುಳ್ಳ ಮರಿಫಲಗಳು; ಬೀಜಗಳು 3 ಇದ್ದು ಅಂಡಾಕಾರದವುಗಳಾಗಿರುತ್ತವೆ.

ಜೀವಪರಿಸ್ಥಿತಿ :

ನದಿಗಳ ತಳದಲ್ಲಿರುತ್ತವೆ.

ವ್ಯಾಪನೆ :

ಇಂಡೋಮಲೇಶಿಯದಿಂದ ಪ್ಯಾಸಿಫಿಕ್ ದ್ವೀಪಗಳು ಮತ್ತು ದಕ್ಷಿಣಚೀನಾ; ಪಶ್ಚಿಮ ಘಟ್ಟದಲ್ಲಿನ ಎಲ್ಲಾ ಭಾಗಗಳು.

ಗ್ರಂಥ ಸೂಚಿ :

Loureiro,Fl. Cochinc. 637.1790; Gamble, Fl.Madras 2:1333.1993 (rep.ed.) ; Sasidharan, Biodiversity documentation for Kerala – Flowering plants, part 6, 421.2004;Saldanha, Fl. Karnataka 2;147.1996.

Top of the Page