ಹೋಪಿಯ ಗ್ಳಾಬ್ರ Wt. & Arn. - ಡಿಪ್ಟೆರೋಕಾರ್ಪೇಸಿ

Synonym : ಹೊಪಿಯ ವೈಟಿಯಾನ Wall. ex Wt. var. ಗ್ಳಾಬ್ರ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ಅಂದಾಜು 20 ಮೀ. ಎತ್ತರದವರೆಗಿನ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕಂದು ಬಣ್ಣ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದಟ್ಟವಾದ ಬಣ್ಣ ಹೊಂದಿದ್ದು,ದುಂಡಗಿದ್ದು, ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು, ಪರ್ಯಾಯ ಹಾಗೂ ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ಕಾವಿನೆಲೆಗಳು ಉದುರಿಹೋಗುತ್ತವೆ;ತೊಟ್ಟುಗಳು ಅಂದಾಜು 2 ಸೆಂ.ಮೀ.ಉದ್ದವಿರುತ್ತವೆ;ಪತ್ರಗಳು 5.5-10 X 2-4 ಸೆಂ.ಮೀ ಗಾತ್ರ, ಅಂಡ-ಭರ್ಜಿಯ ಆಕಾರ,ಮೊಂಡು ಅಗ್ರವುಳ್ಳ ಕ್ರಮೇಣ ಚೂಪಾಗುವ ತುದಿ, ಚೂಪಾದ ಬುಡ ಹೊಂದಿದ್ದು ರೋಮರಹಿತವಾಗಿರುತ್ತವೆ;ಮಧ್ಯನಾಳಗಳು ಪತ್ರದ ಮೇಲ್ಭಾಗದಲ್ಲಿ ಚಪ್ಪಟೆಯಾಗಿರುತ್ತವೆ ;ಎರಡನೇ ದರ್ಜೆಯ ನಾಳಗಳು 8 ಜೋಡಿಗಳಿದ್ದು,ಓರೆಯಾಗಿರುತ್ತವೆ ಹಾಗೂ ಪತ್ರದ ಮೇಲ್ಭಾಗದಲ್ಲಿ ಪ್ರಮುಖವಾಗಿರುತ್ತವೆ; ಮೂರನೇ ದರ್ಜೆಯ ನಾಳಗಳು ಲಂಬರೇಖೆಗೆ ಸಮಕೋನದಲ್ಲಿದ್ದು, ಸನಿಹವಾಗಿ ಎಲೆದಿಂಡಿಗೆ ಅಡ್ಡವಾಗಿ ಕೂಡುವಂತವು.
ಪುಷ್ಪಮಂಜರಿ/ಹೂಗಳು : ಪುಷ್ಪಮಂಜರಿಗಳು ಪುನರಾವೃತ್ತಿಯಾಗಿ ಕವಲೊಡೆಯು ಮಾದರಿಯಲ್ಲಿದ್ದು ಅಕ್ಷಾಕಂಕುಳಿನಲ್ಲಿರುವ ಗುಚ್ಛಗಳಲ್ಲಿರುತ್ತವೆ, ಹಲವು ಬಾರಿ ಒಂದರಿಂದ ಮೂರು ಒಟ್ಟಿಗಿರುತ್ತವೆ;ಪುಷ್ಪಮಂಜರಿಗಳು ಎಲೆಗಳಷ್ಟು ಅಥವಾ ಅವುಗಳಿಗಿಂತ ಹೆಚ್ಚು ಉದ್ದವಿರುತ್ತವೆ;ಹೂಗಳು ಕೆನೆ ಮಿಶ್ರಿತ ಹಳದಿ ಬಣ್ಣದಲ್ಲಿದ್ದು ಅಂದಾಜು 0.6 ಸೆಂ.ಮೀ. ಉದ್ದವಿರುತ್ತವೆ.
ಕಾಯಿ /ಬೀಜ : ಕಾಯಿಗಳು ಕರಟ ಮಾದರಿಯಲ್ಲಿದ್ದು ಅಂದಾಜು 1.8 ಸೆಂ.ಮೀ. ಉದ್ದವಿದ್ದು, ಅಂಡಾಕಾರ ಅಥವಾ ಅಂಡವೃತ್ತಾಕಾರ ತುದಿಯಲ್ಲಿ ಸೂಕ್ಷ್ಮ ಮೊನಚು ಮುಳ್ಳನ್ನು ಹೊಂದಿದ್ದು ನಯವಾಗಿರುತ್ತವೆ. ಪುಷ್ಪಪಾತ್ರೆ ವೃದ್ಧಿಸಿದ್ದು 2 ಉದ್ದವಾದ ಹಾಗೂ ಮೂರು ಸಣ್ಣದಾದ ಹಾಲೆಗಳ ಸಮೇತವಾಗಿರುತ್ತದೆ ಹಾಗೂ ಒಂದು ಬೀಜವನ್ನೊಳಗೊಂಡಿರುತ್ತವೆ.

ಜೀವಪರಿಸ್ಥಿತಿ :

1000ಮೀ.ವರೆಗಿನ ಕೆಳ ಮತ್ತು ಮಧ್ಯಮ ಎತ್ತರದ ಪ್ರದೇಶಗಳಲ್ಲಿನ ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಅಪರೂಪವಾಗಿ ಒಳಛಾವಣಿ ಮರಗಳಾಗಿ ಈ ಸಸ್ಯ ಕಂಡುಬರುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಸಸ್ಯ ದಕ್ಷಿಣ ಸಹ್ಯಾದ್ರಿ ಮತ್ತು ಅಟ್ಟಪ್ಪಾಡಿ,ಪಾಲಕ್ಕಾಡು ಪ್ರದೇಶಗಳಲ್ಲಿ ವ್ಯಾಪಿಸಿದೆ.

ಗ್ರಂಥ ಸೂಚಿ :

Wight and Arnot; Prodr. 85:1834; Sasidharan, Biodiversity documentation for Kerala - Flowering Plants, part 6:44.2004.Saldanha, Fl. Karnataka 1: 192.1996.

Top of the Page