ಹೋಪಿಯ ಯುಟಿಲಿಸ್ (Bedd.) Bole - ಡಿಪ್ಟೆರೋಕಾರ್ಪೇಸಿ

Synonym : ಬಲನೋಕಾರ್ಪಸ್ ಯುಟಿಲಿಸ್

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 25 ಮೀ ಎತ್ತರದವರೆಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕಡು ಕಂದು ಬಣ್ಣದಲ್ಲಿದ್ದು, ಉದ್ದುದ್ದವಾದ ಚಕ್ಕೆ ಮಾದರಿಯವು.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು, ಪರ್ಯಾಯ ಹಾಗೂ ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ;ತೊಟ್ಟುಗಳು ಅಂದಾಜು 1.2 ಸೆಂ.ಮೀ. ಉದ್ದವಿರುತ್ತವೆ;ಪತ್ರಗಳು 12.5 – 18 X 3.5- 5 ಸೆಂ. ಮೀ.ಗಾತ್ರ, ಭರ್ಜಿಯ ಕಾರ, ಮೊಂಡಾದ ಅಗ್ರವುಳ್ಳ ಕ್ರಮೇಣ ಚೂಪಾಗುವ ತುದಿ, ಚೂಪಾದ ಬುಡ ಹಾಗೂ ನಯವಾದ ಅಂಚನ್ನು ಹೊಂದಿರುತ್ತವೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಉಬ್ಬಿರುತ್ತದೆ;ಎರಡನೆ ದರ್ಜೆಯ ನಾಳಗಳು 10 ರಿಂದ 12 ಜೋಡಿಗಳಿರುತ್ತವೆ;ಮೂರನೇ ದರ್ಜೆಯ ನಾಳಗಳು ಲಂಬರೇಖೆಗೆ ಸಮಕೋನದಲ್ಲಿದ್ದು, ಸನಿಹವಾಗಿ ಎಲೆದಿಂಡಿಗೆ ಅಡ್ಡವಾಗಿ ಕೂಡುವಂತವು.
ಪುಷ್ಪಮಂಜರಿ/ಹೂಗಳು : ಪುಷ್ಪಮಂಜರಿ ಅಕ್ಷಾಕಂಕುಳಿನಲ್ಲಿರುವ ಪುನರಾವೃತ್ತಿಯಾಗಿ ಕವಲೊಡೆಯುವ ಮಾದರಿಯವು. ಹೂಗಳು ಹಳದಿ ಮಿಶ್ರಿತ ಬಿಳಿ ಬಣ್ಣ ಹೊಂದಿರುತ್ತವೆ.
ಕಾಯಿ /ಬೀಜ : ಕರಟಗಳು ಅಂದಾಜು 1.2 ಸೆಂ.ಮೀ. ಅಡ್ಡಗಲದ ಅಳತೆ ಹೊಂದಿದ್ದು ಗೋಳಾಕಾರದಲ್ಲಿರುತ್ತವೆ ಹಾಗೂ ಅಗ್ರದಲ್ಲಿ ಸಣ್ಣ ಮೊನಚು ಮುಳ್ಳಿನ ಸಮೇತವಿರುತ್ತವೆ ಹಾಗೂ ಮಂದವಾದ ಮತ್ತು ವೃಧ್ದಿಸಿದ ಪುಷ್ಪಪಾತ್ರೆಯ ಪತ್ರಗಳ ಬುಡದಲ್ಲಿಸುತ್ತುವರೆದಿರುತ್ತವೆ;ಬೀಜಗಳು ಒಂದು.

ಜೀವಪರಿಸ್ಥಿತಿ :

300 ರಿಂದ 600 ಮೀ. ನಡುವಿನ ಎತ್ತರದ ಪ್ರದೇಶಗಳಲ್ಲಿನ ಒಣ-ನಿತ್ಯಹರಿದ್ವರ್ಣ ಕಾಡುಗಳ ಮೇಲ್ಛಾವಣಿಯ ಮರಗಳಾಗಿ ಈ ಸಸ್ಯ ಬೆಳೆಯುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಮರ ಅಗಸ್ತ್ಯಮಲೆ ಬೆಟ್ಟಗಳ ಗಾಳಿಮರೆಯ ದಿಕ್ಕಿನಲ್ಲಿಯ ಪ್ರದೇಶಗಳಲ್ಲಿ ಮಾತ್ರ ಕಂಡುಬರುತ್ತದೆ.

ಗ್ರಂಥ ಸೂಚಿ :

Kew. Bull. 156.1951; Gamble, Fl. Madras 1:84.1997(rep.ed.);Sasidharan, Biodiversity documentation for Kerala- Flowering plants,part 6:45.2004

Top of the Page