ಹಂಬೋಲ್ಟ್ ಶಿಯ ಬೋರ್ಡಿಲೋನಿ Prain - ಸಿಸಾಲ್ಪಿನಿಯೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಸ್ಥಿತಿ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 15 ಮೀ. ಎತ್ತರದವರೆಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕಪ್ಪು ಬಣ್ಣದ್ದು.
ಎಲೆಗಳು : ಎಲೆಗಳು ಸಮಸಂಖ್ಯಾ ಗರಿರೂಪಿ ಸಂಯುಕ್ತ ಮಾದರಿಯವು; ಕಾವಿನೆಲೆಗಳು ಅಂಡಾಕಾರದವು, ಉಪಾಂಗಗಳು ಸಣ್ಣ ಗಾತ್ರ ಹೊಂದಿದ್ದು ಕುಡುಗೋಲಿನ ಆಕಾರದಲ್ಲಿರುತ್ತವೆ; ಎಲೆಗಳ ಅಕ್ಷದಿಂಡು ಚಪ್ಪಟೆಯಾಗಿದ್ದು ರೆಕ್ಕೆಯುಕ್ತವಾಗಿರುತ್ತದೆ; ಕಿರು ಎಲೆಗಳು 3 ರಿಂದ 4 ಜೋಡಿಗಳು; ಪತ್ರಗಳು 7.6 - 10.2 x 2.5 - 3.8 ಸೆ.ಮೀ. ಗಾತ್ರ ಹೊಂದಿದ್ದು ಭರ್ಜಿ - ಬುಗುರಿ ಹಾಗೂ ಭರ್ಜಿಯ ಸಮ್ಮಿಶ್ರಾಕಾರದಲ್ಲಿದ್ದು, ಅನುಕ್ರಮವಾಗಿ ಕ್ರಮೇಣ ಚೂಪಾಗುವುದರಿಂದ ಹಿಡಿದು, ಬಾಲರೂಪವನ್ನು ಹೋಲುವ ತುದಿ ಹಾಗೂ ಅಸಮ್ಮಿತಿಯಾದ ಬುಡವನ್ನು ಹೊಂದಿರುತ್ತವೆ, ಪತ್ರ ಕಾಗದವನ್ನೋಲುವ ಮೇಲ್ಮೈ ಹೊಂದಿರುತ್ತದೆ; ಎರಡನೇ ದರ್ಜೆಯ ನಾಳಗಳು ಅಂದಾಜು 10 ಜೋಡಿಗಳಿದ್ದು ಮೇಲ್ಪಂಕ್ತಿಯ ಜೋಡಿಗಳು ಕುಣಿಕೆಗೊಂಡಿರುತ್ತವೆ; ಮೂರನೇ ದರ್ಜೆಯ ನಾಳಗಳು ಜಾಲಬಂಧ ನಾಳ ವಿನ್ಯಾಸ ಮಾದರಿ- ಯಲ್ಲಿದ್ದು ಎಲೆದಿಂಡಿಗೆ ಅಡ್ಡವಾಗಿ ಕೂಡುತ್ತವೆ.
ಪುಷ್ಪಮಂಜರಿ/ಹೂಗಳು : ಪುಷ್ಪಮಂಜರಿ ಕಾಂಡಜನ್ಮಿ ಗುಚ್ಛಗಳನ್ನು ಹೊಂದಿರುವ ಮಧ್ಯಾಭಿಸರ ಮಂಜರಿಯಲ್ಲಿರುತ್ತದೆ, ಪುಷ್ಪಮಂಜರಿ ಕಂದು ಮಿಶ್ರಿತ ಹಳದಿ ಬಣ್ಣ ಹೊಂದಿದ ಮಖಮಲ್ಲನ್ನು ಹೊಂದಿರುತ್ತದೆ, ಪುಷ್ಪದಳ ನಸುಗೆಂಪು ಎಳೆಗಳನ್ನು ಹೊಂದಿದ ಶ್ವೇತ ವರ್ಣದವು; ಪುಷ್ಪ ಪತ್ರಕಗಳು ಕಡುಗೆಂಪು ಬಣ್ಣದಲ್ಲಿರುತ್ತವೆ.
ಕಾಯಿ /ಬೀಜ : ಪಾಡುಗಳು ಅರುಣ ವರ್ಣದಲ್ಲಿದ್ದು ಮೃದು ತುಪ್ಪಳದಿಂದ ಆವೃತವಾಗಿರುತ್ತವೆ.

ಜೀವಪರಿಸ್ಥಿತಿ :

900 ರಿಂದ 1000 ಮೀ. ಮಧ್ಯಮ ಎತ್ತರದ ಪ್ರದೇಶಗಳ ತೇವಾಂಶವುಳ್ಳ ನಿತ್ಯಹರಿದ್ವರ್ಣಕಾಡುಗಳ ಒಳಛಾವಣಿಯಲ್ಲಿ ಈ ಪ್ರಭೇದ ಕಂಡು ಬರುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತ - ದಕ್ಷಿಣ ಸಹ್ಯಾದ್ರಿಯ ಅಗಸ್ತ್ಯ ಮಲೈ ಮತ್ತು ಏಲಮಲೈ ಬೆಟ್ಟಗಳು.

ಸ್ಥಿತಿ :

ಉಳಿವಿನಂಚಿನ ಅಪಾಯ ಸಂಭವ ಸ್ಥಿತಿ. (IUCN 2000)

ಗ್ರಂಥ ಸೂಚಿ :

J. Asiat. Soc. Bengal 73: 200. 1904; Gamble, Fl. Madras 1: 411. 1997 (re. ed); Sasidharan, Biodiversity documentation for Kerala- Flowering Plants, part 6: 155. 2004.

Top of the Page