ಹಂಬೋಲ್ಟ್ ಶಿಯ ಯೂನಿಜುಗ Bedd. var. ಯೂನಿಜುಗ - ಸಿಸಾಲ್ಪಿನಿಯೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಸ್ಥಿತಿ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 6 ಮೀ. ಎತ್ತರದವರೆಗೆ ಬೆಳೆಯುವ ಮರಗಳು.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ದ್ವಿಗರಿರೂಪಿ ಸಂಯುಕ್ತ ಮಾದರಿಯವು. ಎಲೆಗಳು ಪರ್ಯಾಯ ಜೋಡನಾ ವ್ಯವಸ್ಥೆಯಲ್ಲಿದ್ದು ಕಾಂಡದ ಎರಡೂ ಕಡೆಯ ಎದುರು ಬದರಿನ ಲಂಬ ಸಾಲಿನಲ್ಲಿರುತ್ತವೆ; ಅಕ್ಷದಿಂಡು ಸಣ್ಣ ಗಾತ್ರದಲ್ಲಿದ್ದು 0.5 ಸೆ.ಮೀ. ಉದ್ದ ಹೊಂದಿದ್ದು ಮೇಲ್ಭಾಗದಲ್ಲಿ ಬುಗುರಿ ಆಕಾರದ ರಸಗ್ರಂಥಿಯನ್ನು ಹೋಲುವ ರಚನೆಯನ್ನು ಹೊಂದಿರುತ್ತದೆ ; ಕಾವಿನೆಲೆಗಳು ಜೋಡಿಯಾಗಿದ್ದು, ಎಲೆಗಳನ್ನುಹೋಲುವಂತಿದ್ದು, ಭರ್ಜಿಯಾಕಾರದಲ್ಲಿದ್ದು ಶಾಶ್ವತವಾಗಿರುತ್ತವೆ; ಕಿರು ಎಲೆಗಳು ಸೂಕ್ಷ್ಮವಾದ ತೊಟ್ಟುಗಳನ್ನು ಹೊಂದಿರುತ್ತವೆ; ಪತ್ರಗಳು 7-15 x 2-5 ಸೆ.ಮೀ. ಗಾತ್ರ, ಭರ್ಜಿಯ ಆಕಾರ, ಕ್ರಮೇಣ ಚೂಪಾಗುವ ತುದಿ, ಓರೆಯಾದ ಬುಡವನ್ನು ಹೊಂದಿರುತ್ತವೆ; ಎರಡನೇ ದರ್ಜೆಯ ನಾಳಗಳು 6 ರಿಂದ 9 ಜೋಡಿಗಳಿದ್ದು ಮೂರನೇ ದರ್ಜೆಯ ನಾಳಗಳು ಜಾಲಬಂಧ ನಾಳ ವಿನ್ಯಾಸದಲ್ಲಿದ್ದು ಎಲೆದಿಂಡಿಗೆ ಅಡ್ಡವಾಗಿರುತ್ತದೆ.
ಪುಷ್ಪಮಂಜರಿ/ಹೂಗಳು : ಹೂಗಳು ವಯಸ್ಸಾದ ಕೊಂಬೆಗಳ ಮೇಲಿನ ಮಧ್ಯಾಭಿಸರ ಪುಷ್ಪಮಜರಿಯಲ್ಲಿರುತ್ತವೆ.
ಕಾಯಿ /ಬೀಜ : ಪಾಡ್ಗಳು ಚಪ್ಪಟೆಯಾಗಿದ್ದು, ಓರೆಯಾದ ತುದಿಯಲ್ಲಿರುತ್ತವೆ.

ಜೀವಪರಿಸ್ಥಿತಿ :

900 ರಿಂದ 1300 ಮೀ. ಎತ್ತರದ ಪ್ರದೇಶಗಳಲ್ಲಿನ ಕುಂಠಿತಗೊಂಡ ನಿತ್ಯಹರಿದ್ವರ್ಣ ಕಾಡುಗಳ ಒಳಛಾವಣಿಯಲ್ಲಿ ಈ ಪ್ರಭೇದ ಕಂಡು ಬರುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಸಸ್ಯ ಸ್ಥಳಿಯವಾಗಿ ದಕ್ಷಿಣ ಸಹ್ಯಾದ್ರಿಯ ಪಶ್ಚಿಮ ಅಗಸ್ತ್ಯಮಲೈ ಬೆಟ್ಟಗಳಲ್ಲಿ ಬೆಳೆಯುತ್ತದೆ.

ಸ್ಥಿತಿ :

ಉಳಿವಿನ ಆತಂಕಕಾರಿ ಸ್ಥಿತಿ (IUCN 2000)

ಗ್ರಂಥ ಸೂಚಿ :

Beddome, Fl. Sylv. 1. 183. 1872; J. Bombay Nat. Hist. Soc., 81(3): 729 (1984 publ. 1985); Gamble, Fl. Madras 1: 411. 1997 (re. ed); Sasidharan, Biodiversity documentation for Kerala- Flowering Plants, part 6: 155. 2004.

Top of the Page