ಹಿಡ್ನೋಕಾರ್ಪಸ್ ಆಲ್ಪೈನ Wt. - ಫ್ಲಕೋರ್ಶಿಯೇಸಿ

ಕನ್ನಡದ ಪ್ರಾದೇಶಿಕ ಹೆಸರು : Tamil: ಮಲ್ಮುರುಟ್ಟಿ, ಮರವೆಟ್ಟಿ, ಪಿನೆರ್ವೆಟ್ಟಿ.Malayalam: ಕಾಸ್ತೆಲ, ಮರತುತ್ತಿ, ಸಣ್ಣ ಸೊಲ್ತಿ, ಸಣ್ಣ ಸುರಂಟೆ, ಸುರಂಟೆ, ತೊರಟ್ಟಿ.

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 8 ಮೀ. ಎತ್ತರದವರೆಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕಡು ಬೂದು ಬಣ್ಣ ಹೊಂದಿರುತ್ತದೆ ಮತ್ತು ಸ್ವಲ್ಪ ಒರಟಾಗಿರುತ್ತದೆ ಕಚ್ಚು ಮಾಡಿದ ಜಾಗ ತೆಳು ಕಿತ್ತಳೆ ಬಣ್ಣ ಹೊಂದಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ಉಪ-ದುಂಡಾಗಿದ್ದು ರೋಮರಹಿತವಾಗಿರುತ್ತವೆ ಮತ್ತು ಜೋತಾಡುತ್ತಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಮಾದರಿಯಲ್ಲಿ ಜೋಡಣೆಗೊಂಡಿದ್ದು ಕಾಂಡದ ಎರಡೂ ಕಡೆ ಎದುರು ಬದರಿನ ಸಾಲಿನಲ್ಲಿರುತ್ತವೆ.; ತೊಟ್ಟುಗಳು 0.7 -1.6 ಸೆಂ.ಮೀ. ವರೆಗಿನ ಉದ್ದ ಹೊಂದಿದ್ದು ಎರಡೂತುದಿಯಲ್ಲಿ ಊದಿಕೊಂಡಿರುತ್ತದೆ ಮತ್ತು ಕಾಲುವೆಗೆರೆ ಸಮೇತವಿದ್ದು ರೋಮರಹಿತವಾಗಿರುತ್ತವೆ;ಪತ್ರಗಳು9-26X2.5-8.5 ಸೆಂ.ಮೀ.ಗಾತ್ರ ಹೊಂದಿದ್ದುಸಾಮಾನ್ಯವಾಗಿ ಭರ್ಜಿಆಕಾರ ಹೊಂದಿದ್ದು,ಹಂತ ಹಂತವಾಗಿ ಕ್ರಮೇಣ- ಚೂಪಾಗುವ ಅಥವಾ ಉಪ-ಚೂಪಾದ ತುದಿ,ಚೂಪಾದ ದುಂಡಾದ ಅಥವಾ ಚೂಪಾದ ಕೆಲವು ವೇಳೆ ಉಪ-ಒಳಬಾಗಿದ ಬುಡ,ನಯವಾದ ಅಂಚು ಹೊಂದಿರುತ್ತವೆ; ಮೇಲ್ಮೈ ತೊಗಲನ್ನೋಲುವ ಮಾದರಿಯಲ್ಲಿದ್ದು ರೋಮರಹಿತವಾಗಿರುತ್ತದೆ;ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಮೇಲೆದ್ದಿರುತ್ತದೆ;ಎರಡನೇ ದರ್ಜೆಯ ನಾಳಗಳು 6-11 ಜೋಡಿಗಳಿದ್ದು ಅಗ್ರದ ಕಡೆಗೆ ಆರೋಹಣಗೊಳ್ಳುತ್ತವೆ;ಮೂರನೇ ದರ್ಜೆಯ ನಾಳಗಳು ಜಾಲಬಂಧ ನಾಳ ವಿನ್ಯಾಸದಲ್ಲಿದ್ದು ಎಲೆ ದಿಂಡಿಗೆ ಅಡ್ಡವಾಗಿ ಕೂಡುವಂತವು.
ಕಾಯಿ / ಬೀಜ : ಬೆರ್ರಿಗಳು ಗೋಳಾಕಾರದಲ್ಲಿದ್ದು 6.5 ಸೆಂ.ಮೀ.ವರೆಗಿನ ಅಡ್ಡಳತೆ ಹೊಂದಿರುತ್ತವೆ ಮತ್ತು ಕಂದು ಮೃದುತುಪ್ಪಳದಿಂದ ಕೂಡಿರುತ್ತವೆ;ಫಲಾವರಣ ದಾರುವಿನಂತಿರುತ್ತದೆ; ಬೀಜಗಳು ಅಸಂಖ್ಯ.

ಜೀವಪರಿಸ್ಥಿತಿ :

1600 ಮೀ. ಎತ್ತರದವರೆಗಿನ ನಿತ್ಯಹರಿದ್ವರ್ಣ ಕಾಡುಗಳ ಒಳ ಛಾವಣಿಯಲ್ಲಿ ಈ ಪ್ರಭೇದ ಕಂಡು ಬರುತ್ತದೆ.

ವ್ಯಾಪನೆ :

ದಕ್ಷಿಣ ಭಾರತ ಮತ್ತು ಶ್ರೀಲಂಕಾ; ಪಶ್ಚಿಮ ಘಟ್ಟದ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿಯ ಮಲೆನಾಡಿನಲ್ಲಿ ಈ ಪ್ರಭೇದ ವ್ಯಾಪಿಸಿದೆ.

ಗ್ರಂಥ ಸೂಚಿ :

Engl. & Prantl., Pflanzenf. 3(6a): 21.1893;Gamble, Fl. Madras 1:52.1997 (Rep. Ed.) Sasidharan, Biodiversity documentation for Kerala- Flowering Plants, part 6 ,33. 2004.

Top of the Page