ಜೂಲೋಸ್ಟೈಲಿಸ್ ಪಾಲಿಯಾಂಡ್ರ Ravi & Anilkumar - ಮಾಲ್ವೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 12 ಮೀ. ಎತ್ತರದವರೆಗೆ ಬೆಳೆಯುವ ಸಣ್ಣ ಗಾತ್ರದ ಮರಗಳು.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿರುತ್ತವೆ ಮತ್ತು ಎಳೆಯದಾಗಿದ್ದಾಗ ತುಕ್ಕು ಬಣ್ಣದ ನಕ್ಷತ್ರ-ದಟ್ಟ ಮೃದು ತುಪ್ಪಳದಿಂದ ಕೂಡಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು, ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯ -ಲ್ಲಿರುತ್ತವೆ;ಕಾವಿನೆಲೆಗಳು ಉದುರು ಮಾದರಿಯವು;ತೊಟ್ಟುಗಳು 1 ರಿಂದ 8 ಸೆಂ.ಮೀ. ಉದ್ದವಿರುತ್ತವೆ ಮತ್ತು ದುಂಡಾಗಿದ್ದು ನಕ್ಷತ್ರ-ದಟ್ಟ ಮೃದು ತುಪ್ಪಳದಿಂದ ಕೂಡಿರುತ್ತವೆ ; ಪತ್ರಗಳು 4-21 X 2 – 18 ಸೆಂ.ಮೀ ಗಾತ್ರ ಹೊಂದಿದ್ದು ಉಪದುಂಡಾಕಾರದಿಂದ ದುಂಡಾಕಾರದಲ್ಲಿರುತ್ತವೆ;ತುದಿ ಚೂಪಾಗಿರುತ್ತದೆ ಅಥವಾ ಆಳ ಹೊಂದಿರದ 3-ಹಾಲೆಗಳುಳ್ಳ ಹಸ್ತರೂಪದಲ್ಲಿರುತ್ತವೆ, ಪತ್ರದ ಬುಡ ದುಂಡಾಗಿರುತ್ತದೆ ಅಥವಾ ಬೆಣೆಯಾಕಾರದವುಗಳಾಗಿರುತ್ತವೆ, ಅಂಚು ಸೂಕ್ಷ್ಮವಾದ ದುಂಡೇಣಿನ ದಂತಗಳನ್ನು ಹೊಂದಿರುತ್ತದೆ, ಪತ್ರಗಳ ಎರಡೂ ಬದಿಗಳು ವಿರಳವಾದ ನಕ್ಷತ್ರ-ದಟ್ಟ ಮೃದು ತುಪ್ಪಳದಿಂದ ಕೂಡಿರುತ್ತವೆ ಮತ್ತು ಎಳೆಯದಾಗಿದ್ದಾಗ ಕೆಂಪಾಗಿರುತ್ತವೆ;ಪತ್ರಗಳು ಹಸ್ತರೂಪಿಗಳಾದ 5 ನಾಳಗಳನ್ನು ಹೊಂದಿರುತ್ತವೆ; ಮಧ್ಯನಾಳ ಮೇಲ್ಭಾಗದಲ್ಲಿ ಉಬ್ಬಿರುತ್ತದೆ; ಮೂರನೇ ದರ್ಜೆಯ ನಾಳಗಳು ಅಂತರ ಹೊಂದಿದ್ದು ಲಂಬರೇಖೆಗೆ ಸಮಕೋನದಲ್ಲಿದ್ದು ಎಲೆ ದಿಂಡಿಗೆ ಅಡ್ಡವಾಗಿ ಕೂಡುವಂತವು.
ಪುಷ್ಪಮಂಜರಿ/ಹೂಗಳು : ಪುಷ್ಪಮಂಜರಿಗಳು ಪುನರಾವೃತ್ತಿಯಾಗಿ ಕವಲೊಡೆಯುವ ಮಾದರಿಯವುಗಳಾಗಿದ್ದು ಹೆಚ್ಚು ಹೂಗಳನ್ನು ಹೊಂದಿರುತ್ತವೆ;ಹೂಗಳು ಹಳದಿ ಬಣ್ಣ ಹೊಂದಿದ್ದು 1.5 ಸೆಂ.ಮೀ. ಉದ್ದ ತೊಟ್ಟುಗಳನ್ನು ಹೊಂದಿರುತ್ತವೆ;ಹೊರಪುಷ್ಪಪಾತ್ರೆ ವೃದ್ಧಿಗೊಂಡಿರುವುದಿಲ್ಲ.
ಕಾಯಿ /ಬೀಜ : ಕಾಯಿಗಳು ಶೈಜೊಕಾರ್ಪ್ ಮಾದರಿಯಲ್ಲಿದ್ದು ಬಿರಿಯುವುದಿಲ್ಲ; ಕಾಯಿಗಳು ಅಂದಾಜು 0.5 ಸೆಂ.ಮೀ. ಉದ್ದವಿದ್ದು ಕಿರು ಕೊಕ್ಕು ಹೊಂದಿರುತ್ತದೆ ಮತ್ತು ದಟ್ಟವಾದ ನಕ್ಷತ್ರರೋಮ ಮತ್ತು ಸರಳವಾದ ರೋಮಗಳಿಂದ ಆವೃತವಾಗಿರುತ್ತವೆ;ಬೀಜಗಳು 4 ಇದ್ದು ಮೂತ್ರಪಿಂಡದ ಆಕಾರದಲ್ಲಿರುತ್ತವೆ.

ಜೀವಪರಿಸ್ಥಿತಿ :

800 ಮತ್ತು 1000 ಮೀ. ಎತ್ತರದವರೆಗಿನ ಮಧ್ಯಮ ಎತ್ತರದ ಪ್ರದೇಶಗಳ ತೇವಾಂಶವುಳ್ಳ ನಿತ್ಯ ಹರಿದ್ವರ್ಣ ಕಾಡುಗಳ ಅಂಚಿನಲ್ಲಿ ಈ ಪ್ರಭೇದ ಕಂಡು ಬರುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಗಳಿಗೆ ಸೀಮಿತವಾದ ಈ ಪ್ರಭೇದ ಅಗಸ್ತ್ಯಮಲೈ,ಬೆಟ್ಟಗಳು ಮತ್ತು ಪೆರಿಯಾರ್ ಪ್ರದೇಶಗಳಲ್ಲಿ ವ್ಯಾಪಿಸಿದೆ.

ಗ್ರಂಥ ಸೂಚಿ :

Jbnhs 87:260.1990; Sasidharan, Biodiversity documentation for Kerala Plants, part 6, 15.2004.

Top of the Page