ಲ್ಯಾಗೆರ್ಸ್ಟ್ರೋಮಿಯ ಮೈಕ್ರೋಕಾರ್ಪ Wt. - ಲೈತ್ರೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 25 ಮೀ.ವರೆಗೆ ಬೆಳೆಯುವ ಎಲೆಯುದುರು ಮಾದರಿಯ ದೊಡ್ಡ ಗಾತ್ರದ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ನಯವಾಗಿದ್ದು ಬಿಳಿ ಬಣ್ಣ ಹೊದಿದ್ದು ಸುಲಿಯುವ ಮಾದರಿಯಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿರುತ್ತವೆ ಮತ್ತು ಸೂಕ್ಷ್ಮವಾದ ಮೃದು ತುಪ್ಪಳದಿಂದ ಆವೃತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು,ಅಭಿಮುಖ ರೀತಿಯಿಂದ,ಉಪಅಭಿಮುಖ ರೀತಿಯವರೆಗಿನ ಮಾದರಿಯಲ್ಲಿರುತ್ತವೆ,ಕೆಲವು ವೇಳೆಮೇಲಿನ ಎಲೆಗಳು ಪರ್ಯಾಯ ಜೋಡನಾ ವ್ಯವಸ್ಥೆಯಲ್ಲಿರುತ್ತವೆ;ತೊಟ್ಟುಗಳು 0.5 ಸೆಂಮೀ. ಉದ್ದವಿದ್ದು ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯದ ಆಕಾರದಲ್ಲಿರುತ್ತವೆ ಮತ್ತು ಸೂಕ್ಷ್ಮವಾದ ಮೃದು ತುಪ್ಪಳದಿಂದ ಆವೃತವಾಗಿರುತ್ತವೆ. ಪತ್ರಗಳು 11 x 4.5 ಸೆಂ.ಮೀ ಗಾತ್ರ ಹೊಂದಿದ್ದು ಅಂಡವೃತ್ತ ಆಕಾರದಲ್ಲಿರುತ್ತವೆ. ಪತ್ರಗಳು ಚೂಪಾಗಿರುವುದರಿಂದ ಕ್ರಮೇಣ ಚೂಪಾಗುವ ತುದಿಯನ್ನು ಹೊಂದಿರುತ್ತವೆ ಮತ್ತು ಚೂಪಾದ ಬುಡ ಹೊಂದಿದ್ದು ರೋಮರಹಿತವಾಗಿರುತ್ತವೆ ಮತ್ತು ತಳಬಾಗದಲ್ಲಿ ಮಾಸಿದ ಬೂದು ಹಸಿರು ಬಣ್ಣಹೊಂದಿರುತ್ತವೆ; ಮಧ್ಯನಾಳ ಮೇಲ್ಭಾಗದಲ್ಲಿ ತುಸುವಾಗಿ ಕಾಲುವೆ ಗೆರೆಯನ್ನು ಹೊಂದಿರುತ್ತದೆ; ಎರಡನೇ ದರ್ಜೆಯ ನಾಳಗಳು 8 ರಿಂದ 10 ಜೋಡಿಗಳಿರುತ್ತವೆ;ಮೂರನೇ ದರ್ಜೆಯ ನಾಳಗಳು ಸನಿಹವಾಗಿದ್ದು ಲಂಬ ರೇಖೆಗೆ ಸಮಕೋನದಲ್ಲಿದ್ದು ಎಲೆದಿಂಡಿಗೆ ಅಡ್ಡವಾಗಿ ಕೂಡುವಂತವು.
ಪುಷ್ಪಮಂಜರಿ/ಹೂಗಳು : ಹೂಗಳು ಅಕ್ಷಾಕಂಕುಳಿನಲ್ಲಿರುವ ಪುನರಾವೃತ್ತಿಯಾಗಿ ಕವಲೊಡೆಯುವ ಪುಷ್ಪಮಂಜರಿ -ಯಲ್ಲಿರುತ್ತವೆ; ಪುಷ್ಪದಳಗಳು ಬಿಳಿ ಬಣ್ಣ ಹೊಂದಿರುತ್ತವೆ.
ಕಾಯಿ /ಬೀಜ : ಸಂಪುಟ ಫಲಗಳು 1 ಸೆಂ.ಮೀ. ಉದ್ದವಿದ್ದು ಅಂಡವೃತ್ತಾಕಾರದಲ್ಲಿದ್ದು ದಾರುವಿನ ರೀತಿಯಲ್ಲಿ -ರುತ್ತವೆ ಮತ್ತು 4 ಕವಾಟಗಳನ್ನು ಹೊಂದಿರುತ್ತವೆ ಹಾಗೂ ಕೋಶದ ಬೆನ್ನಿನ ಮೂಲಕ ಬಿರಿಯುತ್ತವೆ; ಬೀಜಗಳು ಚಪ್ಪಟೆಯಾಗಿರುತ್ತವೆ ಮತ್ತು ನೆಟ್ಟಗಿದ್ದು ತುದಿಯಲ್ಲಿ ಕುಡುಗೋಲಿನಾಕಾರದ ರೆಕ್ಕೆ ಹೊಂದಿದ್ದು ಬಹು ಸಂಖ್ಯೆಯಲ್ಲಿರುತ್ತವೆ.

ಜೀವಪರಿಸ್ಥಿತಿ :

ಎಲೆಯುದುರು ಮತ್ತು ಅರೆ ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ನಿತ್ಯ ಹರಿದ್ವರ್ಣ ಕಾಡುಗಳ ಅಂಚಿನಲ್ಲಿ ಮತ್ತು ತೆರೆದ ಜಾಗಗಳಲ್ಲಿ ಆಗಾಗ್ಗೆ ಕಂಡುಬರುವ ಈ ಪ್ರಭೇದ 1000 ಮೀ. ಎತ್ತರದವರೆಗಿನ ಪ್ರದೇಶಗಳಲ್ಲಿ ಬೆಳೆಯುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಎಲ್ಲಾ ಪ್ರದೇಶಗಳಲ್ಲಿ ವ್ಯಾಪಿಸಿದೆ.

ಗ್ರಂಥ ಸೂಚಿ :

Wt., Ic.t. 109.1839;Gamble,Fl.Madras 2:513. 1993(rep.ed.); Saldanha, Fl. Karnataka 2:12.1996; Sasidharan, Biodiversity documentation for Kerala Plants, part 6, 188.2004.

Top of the Page