ಲೆಪ್ಟೋನೈಖಿಯ ಕಾಡೇಟ (Wall. ex G. Don) Burrett - ಸ್ಟರ್ಕ್ಯೂಲಿಯೇಸಿ

Synonym : ಗ್ರೆವಿಯ ಕಾಡೇಟWall. ex G.Don; ಲೆಪ್ಟೋನೈಖಿಯ ಮೊವಕುರ್ರಾಯ್ಡಿಸ್ Bedd.

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 5 ಮೀ ಎತ್ತರದವರೆಗಿನ,ಸಣ್ಣ ಗಾತ್ರದ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಬೂದು ಬಣ್ಣ ಹೊಂದಿದ್ದು, ವಾಯುವಿನಿಮಯ ಬೆಂಡು ರಂಧ್ರಗಳ ಸಮೇತವಿರುತ್ತದೆ;ಕಚ್ಚು ಮಾಡಿದ ಜಾಗ ಕೆನೆ ಬಣ್ಣ ಹೊಂದಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ತೆಳುವಾಗಿದ್ದು,ಉಬ್ಬು ಸಾಲಿನ ಗುರುತುಗಳ ಸಮೇತವಿರುತ್ತವೆ, ದುಂಡಾಗಿರುತ್ತವೆ,ನಕ್ಷತ್ರ ರೂಪದ ರೋಮಗಳನ್ನು ಹೊಂದಿದ್ದು ನಂತರ ರೋಮರಹಿತವಾಗುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿದ್ದು ಕಾಂಡದ ಎರಡೂ ಕಡೆ ಎದುರು ಬದರಿನ ಲಂಬ ಸಾಲಿನಲ್ಲಿರುತ್ತವೆ ;ಕಾವಿನೆಲೆಗಳು ಪಾರ್ಶ್ವದಲ್ಲಿದ್ದು,ಉದುರಿಹೋಗುವ ಮಾದರಿಯವುಗಳಾಗಿದ್ದು ಉದುರಿದ ನಂತರ ಗುರುತುಗಳನ್ನು ಉಳಿಸುತ್ತವೆ; ತೊಟ್ಟುಗಳು 0.7 – 1.3 ಸೆಂ.ಮೀ. ವರೆಗಿನ ಉದ್ದವಿದ್ದು, ದುಂಡಾಗಿರುತ್ತವೆ ಅಥವಾ ಕೊಂಚಮಟ್ಟಿಗೆ ಅಗ್ರದಲ್ಲಿ ಕಾಲುವೆಗೆರೆಯನ್ನು ಹೊಂದಿರುತ್ತವೆ, ಎರಡೂ ತುದಿಯಲ್ಲಿ ಉಬ್ಬಿರುತ್ತವೆ, ಎಳೆಯದಾಗಿದ್ದಾಗ ವಿರಳವಾದ ನಕ್ಷತ್ರ ರೂಪದ ರೋಮಗಳಿಂದ ಕೂಡಿದ್ದು ನಂತರ ರೋಮರಹಿತವಾಗಿರುತ್ತವೆ; ಪತ್ರಗಳು 8 – 16 X 2.3 – 6.3 ಸೆಂ.ಮೀ. ಗಾತ್ರ, ಸಂಕುಚಿತ ಅಂಡವೃತ್ತ ಅಥವಾ ಸಂಕುಚಿತ ಅಂಡವೃತ್ತ-ಚತುರಸ್ರದವರೆಗಿನ ಆಕಾರ ಹೊಂದಿದ್ದು, ಬಾಲರೂಪಿ(ಅಗ್ರ 1.5 – 4 ಸೆಂ.ಮೀ. ಉದ್ದ)ತುದಿ,ಚೂಪಾದ ಅಥವಾ ದುಂಡಾದ ಮಾದರಿಯ ಬುಡ, ನಯವಾದ ಅಥವಾ ಕೊನೇ ಪಕ್ಷ ತುದಿಯ ಕಡೆಗಾದರೂ ಅಂತರವುಳ್ಳ,ಅನಿಯತವಾದ ಸೂಕ್ಷ್ಮ ದಂತಿತವಾದ ಅಂಚು, ಕಾಗದವನ್ನೋಲುವ ಮೇಲ್ಮೈ ಹೊಂದಿರುತ್ತವೆ,ಪತ್ರಗಳ ತಳಭಾಗ ರೋಮರಹಿತವಾಗಿರುತ್ತದೆ ಅಥವಾ ಎಳೆಯದಾಗಿದ್ದಾಗ ಅಲ್ಲಲ್ಲಿ ಚದುರಿದ ಕೆಲವು ನಕ್ಷತ್ರ ರೋಮಗಳ ಸಮೇತವಿರುತ್ತದೆ ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ತೆಳುವಾಗಿ ಉಬ್ಬಿರುತ್ತದೆ ಅಥವಾ ಚಪ್ಪಟೆಯಾಗಿರುತ್ತದೆ;ಪತ್ರಗಳ ಬುಡದಲ್ಲಿ 3-ನಾಳಗಳಿರುತ್ತವೆ;ಎರಡನೇ ದರ್ಜೆಯ ನಾಳಗಳು 4-6 ಜೋಡಿಗಳಿದ್ದು,ಆರೋಹಣ ಮಾದರಿಯವುಗಳಾಗಿದ್ದು ಕುಣಿಕೆಗೊಂಡಿರುತ್ತವೆ;ಮೂರನೇ ದರ್ಜೆಯ ನಾಳಗಳು ಹೆಚ್ಚಿನ ಅಂತರ ಹೊಂದಿದ್ದು ಲಂಬ ರೇಖೆಗೆ ಸಮಕೋನದಲ್ಲಿದ್ದು ಎಲೆಯ ದಿಂಡಿಗೆ ಅಡ್ಡವಾಗಿ ಕೂಡುವ ಮಾದರಿಯಲ್ಲಿರುತ್ತವೆ.
ಪುಷ್ಪಮಂಜರಿ / ಹೂಗಳು : ಹೂಗಳು ಅಕ್ಷಾಕಂಕುಳಿನಲ್ಲಿನ ಕಿರು ಗಾತ್ರದ ನೀಳ ಛತ್ರ ಮಾದರಿಯವು; ಹೂಗಳು ಹಸಿರು ಮಿಶ್ರಿತ-ಬಿಳಿ ಬಣ್ಣದಲ್ಲಿರುತ್ತವೆ;ತೊಟ್ಟುಗಳು 0.3 ಸೆಂ.ಮೀ.ಉದ್ದವಿರುತ್ತವೆ.
ಕಾಯಿ / ಬೀಜ : ಸಂಪುಟ ಫಲಗಳು ಬುಗುರಿ ಆಕಾರದಲ್ಲಿದ್ದು,1.8 ಸೆಂ.ಮೀ. ವರೆಗಿನ ಉದ್ದವಿರುತ್ತವೆ;ಬೀಜದ ಸಂಖ್ಯೆ 1 – 3 ಇದ್ದು ಕಿತ್ತಳೆ-ಕೆಂಪು ಬಣ್ಣದ ಪತ್ರೆಗಳ ಸಮೇತವಿರುತ್ತವೆ.

ಜೀವಪರಿಸ್ಥಿತಿ :

200 ಮತ್ತು 1100 ಮೀ. ವರೆಗಿನ ಎತ್ತರದ ಪ್ರದೇಶಗಳ ನಿತ್ಯ ಹರಿದ್ವರ್ಣ ಕಾಡುಗಳ ಒಳಛಾವಣಿಯಲ್ಲಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ಇಂಡೋಮಲೇಸಿಯ ; ಪಶ್ಚಿಮ ಘಟ್ಟದ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿ(ಕೊಡಗಿನವರೆಗೆ) ಪ್ರದೇಶಗಳು.

ಗ್ರಂಥ ಸೂಚಿ :

Burrett, Notizbl. Bot. Gart. Berlin-Dahlem. 9: 727.1926; Veldkamp & Flipphi, Blumea 32: 451. 1987; Gamble, Fl. Madras 1: 112. 1997 (re. ed); Sasidharan, Biodiversity documentation for Kerala- Flowering Plants, part 6: 57. 2004.

Top of the Page