ಲಿಟ್ಸಿಯ ಬೋರ್ಡಿಲ್ಲೋನಿಯೈ Gamble - ಲಾರೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 18 ಮೀ.ವರೆವಿಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ನಯವಾಗಿದ್ದು ಕಂದು ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು ದಟ್ಟವಾದ ಕಂದು ಅಪ್ಪು-ರೋಮಗಳಿಂದ ಕೂಡಿರುತ್ತದೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿ -ರುತ್ತವೆ; ತೊಟ್ಟುಗಳು 1-2 ಸೆಂ.ಮೀ. ಉದ್ದವಿದ್ದು ಕಂದು ದಟ್ಟ ಮೃದು ತುಪ್ಪಳದಿಂದ ಕೂಡಿರುತ್ತದೆ; ಪತ್ರಗಳು 7-23 X4-11 ಸೆಂ.ಮೀ.ವರೆಗಿನ ಗಾತ್ರ ಹೊಂದಿದ್ದು ಬುಗುರಿ-ಚತುರಸ್ರದ ಆಕಾರ ಹೊಂದಿರುತ್ತವೆ;ಸಾಮಾನ್ಯವಾಗಿ ತುದಿ ಥಟ್ಟನೆ ಕ್ರಮೇಣ ಚೂಪಾಗುವ ಮಾದರಿ ಹೊಂದಿದ್ದು ಚೂಪಾದ-ಬೆಣೆಯಾಕಾರದ ಬುಡವನ್ನು ಹೊಂದಿರುತ್ತವೆ;ಅಂಚು ನಯವಾಗಿರುತ್ತದೆ; ಮೇಲ್ಮೈ ಉಪ-ತೊಗಲನ್ನೋಲುವ ಮಾದರಿಯಲ್ಲಿರುತ್ತದೆ;ಪತ್ರದ ತಳಭಾಗದ ಮಧ್ಯ ನಾಳ ಮತ್ತು ಇತರೆ ನಾಳಗಳು ಕಂದು ದಟ್ಟ ಮೃದು ತುಪ್ಪಳವನ್ನು ಹೊಂದಿರುತ್ತವೆ;ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಕಾಲುವೆಗೆರೆ ಸಮೇತವಿರುತ್ತದೆ; ಎರಡನೇ ದರ್ಜೆಯ ನಾಳಗಳು 8-16 ಪ್ರಮುಖವಾದ ಜೋಡಿಗಳಿದ್ದು ದೃಢವಾಗಿರುತ್ತವೆ ಹಾಗೂ ಅಂಚಿನವರೆಗೆ ಸಮಾಂತರವಾಗಿರುತ್ತವೆ; ಮೂರನೇ ದರ್ಜೆಯ ನಾಳಗಳು ಹೆಚ್ಚಿನ ಅಂತರ ಹೊಂದಿದ್ದು ಎಲೆ ದಿಂಡಿಗೆ ಅಡ್ಡವಾಗಿ ಕೂಡುತ್ತವೆ
ಪುಷ್ಪಮಂಜರಿ/ಹೂಗಳು : ಹೂಗಳು ವೃಂತರಹಿತ ಅಥವಾ ಉಪ-ವೃಂತರಹಿತವಾದ ಅಕ್ಷಾಕಂಕುಳಿನಲ್ಲಿನ ಅಥವಾ ಹಳೆಯ ಕವಲುಗಳ ಪಾರ್ಶ್ವದ ಮೇಲಿನ ಮರಿ-ಪೀಠಛತ್ರ ಪುಷ್ಪಮಂಜರಿಯಲ್ಲಿರುತ್ತವೆ.
ಕಾಯಿ /ಬೀಜ : ಬೆರ್ರಿ ಚತುರಸ್ರ ಆಕಾರದಲ್ಲಿದ್ದು 1.2 ಸೆಂ.ಮೀ. ಅಡ್ಡಗಳತೆ ಹೊಂದಿದ್ದು ತೊಟ್ಟು ರಹಿತವಾದ ಪುಷ್ಪಾವರಣದ ಬಟ್ಟಲಿನ ಮೇಲೆ ಆಸೀನವಾಗಿರುತ್ತದೆ ಮತ್ತು ಒಂದು ಬೀಜವನ್ನು ಒಳಗೊಂಡಿರುತ್ತದೆ.

ಜೀವಪರಿಸ್ಥಿತಿ :

ತೇವಾಂಶವುಳ್ಳ ನಿತ್ಯ ಹರಿದ್ವರ್ಣ ಕಾಡುಗಳಲ್ಲಿನ ಒಳಛಾವಣಿ ಅಥವಾ ಉಪ-ಮೇಲ್ಛಾವಣಿ ಮರಗಳಾಗಿ ಕಂಡುಬರುವ ಈ ಪ್ರಭೇದ 300 ರಿಂದ 1800 ಮೀ.ನಡುವಿನ ಎತ್ತರದ ಪ್ರದೇಶಗಳಲ್ಲಿ ಕಂಡುಬರುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಸಸ್ಯ ದಕ್ಷಿಣ ಸಹ್ಯಾದ್ರಿಯಲ್ಲಿ ಆಗಾಗ್ಗೆ ಮತ್ತು ಮತ್ತು ಉತ್ತರ -ಮಧ್ಯ ಸಹ್ಯಾದ್ರಿಯಲ್ಲಿ ಅಪರೂಪವಾಗಿ ಬೆಳೆಯುತ್ತದೆ.

ಗ್ರಂಥ ಸೂಚಿ :

Bull.Misc. Inform. Kew 131:1925;Gamble,Fl.Madras 2:1237. 1993(rep.ed.); Sasidharan, Biodiversity documentation for Kerala Flowering Plants, part 6: 398. 2004; Saldanha, Fl. Karnataka 1:66.1996.

Top of the Page