ಲಿಟ್ಸಿಯ ಸ್ಟಾಕ್ಸಿಯೈ (Meisner) J.Hk. - ಲಾರೇಸಿ

:

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 8 ಮೀ. ಎತ್ತರದವರೆಗಿನ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ನಯವಾಗಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ಉಪದುಂಡಾಗಿದ್ದು, ದಟ್ಟ ಮೃದು ತುಪ್ಪಳ ಸಹಿತವಾಗಿರುತ್ತವೆ, ಬಲಿತಾಗ ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು, ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ತೊಟ್ಟುಗಳು 1- 2 ಸೆಂ.ಮೀ. ವರೆಗಿನ ಉದ್ದವಿದ್ದು ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯದ ಆಕಾರ ಹೊಂದಿದ್ದು, ರೋಮರಹಿತವಾಗಿರುತ್ತವೆ ;ಪತ್ರಗಳು 5-20 X 2-4.5 ಸೆಂ.ಮೀ. ಗಾತ್ರ ಹೊಂದಿದ್ದು ಸಾಮಾನ್ಯವಾಗಿ ರೇಖಾತ್ಮಕ ಮಾದರಿಯಿಂದ ಸಂಕುಚಿತ ಅಂಡವೃತ್ತ-ಚತರಸ್ರದವರೆಗಿನ, ಕೆಲವು ವೇಳೆ ಸಂಕುಚಿತ ಬುಗುರಿಯ ಆಕಾರ ಹೊಂದಿದ್ದು, ಚೂಪಲ್ಲದ ರೀತಿಯಿಂದ ಮೊಂಡಾಗ್ರವುಳ್ಳ ಚೂಪಾದ ರೀತಿಯವರೆಗಿನ ತುದಿ, ಚೂಪಾದುದರಿಂದ ಬೆಣೆಯಾಕಾರದವರೆಗಿನ ಬುಡ, ನಯವಾದ ಅಂಚು ಹೊಂದಿದ್ದು, ರೋಮರಹಿತವಾಗಿದ್ದು, ಕೆಂಪು ಮಿಶ್ರಿತ ಮಾಸಲು ಬೂದು ಬಣ್ಣದ ತಳ ಭಾಗವನ್ನು ಹೊಂದಿರುತ್ತವೆ, ಪತ್ರಗಳ ಮೇಲ್ಮೈ ತೊಗಲನ್ನೋಲುವ ಮಾದರಿಯಲ್ಲಿರುತ್ತವೆ; ಮಧ್ಯ ನಾಳ ಮೇಲ್ಭಾಗದಲ್ಲಿ ಮೇಲೆದ್ದಿರುತ್ತದೆ;ಎರಡನೇ ದರ್ಜೆಯ ನಾಳಗಳು 8 ರಿಂದ 12 ಜೋಡಿಗಳಿರುತ್ತವೆ; ಮೂರನೇ ದರ್ಜೆಯ ನಾಳಗಳು ಅಸ್ಪಷ್ಟ ರೀತಿಯಲ್ಲಿನ ಜಾಲಬಂಧ ನಾಳ ವಿನ್ಯಾಸದಲ್ಲಿದ್ದು ಎಲೆಯ ದಿಂಡಿಗೆ ಅಡ್ಡವಾಗಿ ಕೂಡುವ ಮಾದರಿಯಲ್ಲಿರುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿ ಮಧ್ಯಾಭಿಸರ ಮಾದರಿಯವು;;ಹೂಗಳು ಏಕಲಿಂಗಿಗಳು.
ಕಾಯಿ / ಬೀಜ : ಬೆರ್ರಿಗಳು ಚತುಸ್ರಾಕಾರದಲ್ಲಿದ್ದು, 2 ಸೆಂ.ಮೀ. ಉದ್ದವಿರುತ್ತವೆ;ಬೀಜಗಳ ಸಂಖ್ಯೆ 1.

ಜೀವಪರಿಸ್ಥಿತಿ :

ತೇವಾಂಶದಿಂದ ಕೂಡಿದ ನಿತ್ಯಹರಿದ್ವರ್ಣ ಮತ್ತು ಅರೆ ನಿತ್ಯಹರಿದ್ವರ್ಣ ಕಾಡುಗಳಲ್ಲಿ ಪಶ್ಚಿಮ ಘಟ್ಟದ ಉದ್ದಗಲಕ್ಕೂ ಈ ಪ್ರಭೇದ ಕಂಡುಬರುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತ (ತಿರುವಂಕೂರಿನಿಂದ ದಕ್ಷಿಣ ಕೊಂಕಣ ಪ್ರದೇಶಗಳವರೆಗೆ).

ಗ್ರಂಥ ಸೂಚಿ :

Hooker, FBI 5 176. 1886;

Top of the Page