ಲಿಟ್ಸಿಯ ಟ್ರವಂಕೊರಿಕ Gamble - ಲಾರೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಸ್ಥಿತಿ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 4 ಮೀ.ವರೆವಿಗೆ ಬೆಳೆಯುವ ಮರಗಳು.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ಉಪ-ದುಂಡಾಗಿದ್ದು ತುಕ್ಕಿನ ಬಣ್ಣದ ದಟ್ಟ ಮೃದು ತುಪ್ಪಳದಿಂದ ಕೂಡಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಸಾಮಾನ್ಯವಾಗಿ ಉಪ-ಅಭಿಮುಖಿಗಳಾಗಿದ್ದು ಕಿರುಕೊಂಬೆಗಳ ತುದಿಯಲ್ಲಿ ಗುಂಪಾಗಿರುತ್ತವೆ;ತೊಟ್ಟುಗಳು 1 ಸೆಂ.ಮೀ. ಉದ್ದ ಹೊಂದಿದ್ದು ಮೇಲ್ಭಾಗದಲ್ಲಿ ಕೊಂಚವಾಗಿ ಕಾಲುವೆಗೆರೆಯನ್ನು ಹೊಂದಿದ್ದುಕಂದು ದಟ್ಟ ಮೃದು ತುಪ್ಪಳ ಸಮೇತವಿರುತ್ತವೆ; ಪತ್ರಗಳು 8-18 X2.5 – 5.5 ಸೆಂ.ಮೀ.ವರೆಗಿನ ಗಾತ್ರ ಹೊಂದಿದ್ದು ಅಂಡವೃತ್ತ-ಚತುರಸ್ರದಿಂದ ಬುಗುರಿವರೆಗಿನ ಆಕಾರ ಹೊಂದಿರುತ್ತವೆ ಮತ್ತು ಕ್ರಮೇಣ ಚೂಪಾಗುವ ತುದಿ, ಚೂಪಲ್ಲದುದರಿಂದ ಚೂಪುವರೆಗಿನ ಬುಡ, ಕಾಗದವನ್ನೋಲುವ ಮೇಲ್ಮೈ ಸಮೇತವಿರುತ್ತವೆ; ಪತ್ರದ ತಳಭಾಗದಲ್ಲಿ ನಾಳಗಳ ಮೇಲಾದರೂ ನಸುಗೆಂಪಿನಿಂದ ಕೂಡಿದ ಹಳದಿ ಬಣ್ಣದ ಮೃದುತುಪ್ಪಳ ರುತ್ತದೆ;ಪತ್ರದ ತಳಭಾಗ ಮಾಸಿದ ಬೂದು ಹಸಿರು ಬಣ್ಣದಲ್ಲಿರುತ್ತದೆ; ಮಧ್ಯ ನಾಳ ಕಾಲುವೆಗೆರೆ ಸಮೇತವಿರುತ್ತದೆ;ಎರಡನೇ ದರ್ಜೆಯ ನಾಳಗಳು 8-12 ಕುಣಿಕೆಗೊಂಡ ಜೋಡಿಗಳಿರುತ್ತವೆ; ಮೂರನೇ ದರ್ಜೆಯ ನಾಳಗಳು ಅಂತರ ಹೊಂದಿದ್ದು ಎಲೆ ದಿಂಡಿಗೆ ಅಡ್ಡವಾಗಿ ಕೂಡುವಂತವು.
ಪುಷ್ಪಮಂಜರಿ/ಹೂಗಳು : ಹೂಗಳು ಹಳದಿ ಬಣ್ಣ ಹೊಂದಿದ್ದು ಅಕ್ಷಾಕಂಕುಳಿನಲ್ಲಿರುವ ಪೀಠಛತ್ರ ಪುಷ್ಪಮಂಜರಿ -ಯಲ್ಲಿರುತ್ತವೆ ಮತ್ತು ತೊಟ್ಟು ರಹಿತವಾಗಿರುತ್ತವೆ.
ಕಾಯಿ /ಬೀಜ : ಬೆರ್ರಿ ಅಂದಾಜು 1 ಸೆಂ.ಮೀ. ಅಡ್ಡಗಳತೆ ಹೊಂದಿದ್ದು ಗೋಳಾಕಾರದಲ್ಲಿರುತ್ತದೆ ಮತ್ತು ಬಟ್ಟಲು ಆಕಾರದ ಕಿರಿದಾದ ಹಾಲೆಗಳನ್ನುಳ್ಳ ಪುಷ್ಪಾವರಣದ ನಳಿಕೆಗಳ ಮೇಲಿರುತ್ತದೆ.

ಜೀವಪರಿಸ್ಥಿತಿ :

600 ಮೀ. ಎತ್ತರದ ಪ್ರದೇಶಗಳ ತೇವಾಂಶದಿಂದ ಕೂಡಿದ ನಿತ್ಯ ಹರಿದ್ವರ್ಣ ಕಾಡುಗಳ ಒಳಛಾವಣಿಯಲ್ಲಿ ಅಪರೂಪವಾಗಿ ಈ ಪ್ರಭೇದ ಕಂಡುಬರುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಸಸ್ಯ ಅಗಸ್ತ್ಯ ಮಲೈ ಪ್ರದೇಶದಲ್ಲಿ ಗಾಳಿ ಬೀಸುವ ದಿಕ್ಕಿನಲ್ಲಿ ಈ ಪ್ರಭೇದ ವ್ಯಾಪಿಸಿದೆ.

ಸ್ಥಿತಿ :

ದುರ್ಬಲ ಸ್ಥಿತಿ (IUCN 2000).

ಗ್ರಂಥ ಸೂಚಿ :

Kew Bull. 132. 1925; J. Econ. Taxon. Bot. Vol. 29 (4): 828-830; Gamble, Fl. Madras 2: 1237.1993 (re. ed); Sasidharan, Biodiversity documentation for Kerala- Flowering Plants, part 6: 400. 2004.