ಮಕರಂಗ ಇಂಡಿಕ Wt. - ಯೂಫೊರ್ಬಿಯೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 16 ಮೀ. ಎತ್ತರದವರೆಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಬೂದು ಬಣ್ಣದಲ್ಲಿದ್ದು ನಯವಾಗಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು ಸೂಕ್ಷ್ಮವಾದ ಬೂದು ಬಣ್ಣದ ಮೃದುತುಪ್ಪಳದಿಂದ ಕೂಡಿರುತ್ತವೆ ಮತ್ತು ಮಾಸಲು ಬೂದು ಹಸಿರು ಬಣ್ಣ ಹೊಂದಿರುತ್ತವೆ..
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ. ಕಾವಿನೆಲೆಗಳು ದೊಡ್ಡ ಗಾತ್ರದಲ್ಲಿದ್ದು ಉದುರಿ ಹೋಗುವಂತವು;ತೊಟ್ಟುಗಳು 5 – 31 ಸೆಂ.ಮೀ.ವರೆಗಿನ ಉದ್ದವಿರುತ್ತವೆ ಮತ್ತು; ಪತ್ರಗಳು 13.5 -30 X 10.5-18.5 ಸೆಂ. ಮೀ. ವರೆಗಿನ ಗಾತ್ರ ಹೊಂದಿರುತ್ತವೆ ಮತ್ತು ಎಲೆಪತ್ರದ ತಳಭಾಗದ ಮಧ್ಯದಲ್ಲಿತೊಟ್ಟನ್ನು ಹೊಂದಿರುತ್ತವೆ ಹಾಗೂ ವೃತ್ತ – ಅಂಡದ ಆಕಾರ, ಕ್ರಮೇಣವಾಗಿ ಚೂಪಾಗುವ ತುದಿ, ದುಂಡಾದ ಬುಡ ಹೊಂದಿರುತ್ತವೆ;ಪತ್ರದ ಮೇಲ್ಮೈ ಉಪ- ತೊಗಲ್ಲನ್ನೋಲುವ ಮಾದರಿಯಲ್ಲಿದ್ದು ಕಂದುಮಿಶ್ರಿತ ಹಳದಿ ಬಣ್ಣದ ಮೃದು ತುಪ್ಪಳದಿಂದ ಆವೃತವಾಗಿರುತ್ತವೆ ಮತ್ತು ಪತ್ರದ ತಳಭಾಗದಲ್ಲಿ ಹಳದಿ ಬಣ್ಣದ ಅಂಟು ರಸಗ್ರಂಥಿಗಳಿರುತ್ತವೆ ;ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಉಬ್ಬಿರುತ್ತದೆ;ನಾಳಗಳು 8-9 ಇದ್ದು ಮಧ್ಯದಿಂದ ಹರಡುತ್ತವೆ.
ಪುಷ್ಪಮಂಜರಿ/ಹೂಗಳು : ಹೂಗಳು ಏಕಲಿಂಗಿಗಳಾಗಿದ್ದು ಪ್ರತ್ಯೇಕ ಸಸ್ಯಗಳಲ್ಲಿರುತ್ತವೆ;ಪುಷ್ಪಮಂಜರಿಗಳು ಪರ್ಯಾಯವಾಗಿ ಎಡಬಲ ಮುರುವುಗಳುಳ್ಳ ಮತ್ತು ಪುನರಾವೃತ್ತಿಯಾಗಿ ಕವಲೊಡೆಯುವ ಮಾದರಿಯವುಗಳಾಗಿರುತ್ತವೆ;ಹೂಗಳ ಪತ್ರಕಗಳು ರೇಖಾತ್ಮಕವಾಗಿದ್ದು ದೊಡ್ಡ ಗಾತ್ರದ ರಸಗ್ರಂಥಿಯುಕ್ತ ಉಪಾಂಗವನ್ನು ಹೊಂದಿರುತ್ತವೆ; ಗಂಡು ಹೂಗಳು ಪ್ರತಿ ಹೂ-ಪತ್ರಕದಲ್ಲಿನ ಗುಚ್ಛಗಳಲ್ಲಿ ಇರುತ್ತವೆ; ಪ್ರತಿ ಹೂ -ಪತ್ರಕ್ಕೆ ಕೆಲವು ಹೆಣ್ಣು ಹೂಗಳನ್ನೊಳಗೊಂಡ ಗುಚ್ಛಗಳು ಇರುತ್ತವೆ.
ಕಾಯಿ /ಬೀಜ : ಸಂಪುಟ ಫಲ ಗೋಳಾಕಾರದಲ್ಲಿದ್ದು ಒಂದು ಬೀಜವನ್ನು ಒಳಗೊಂಡಿರುತ್ತದೆ.

ಜೀವಪರಿಸ್ಥಿತಿ :

900 ರಿಂದ 2000 ಮೀ. ಎತ್ತರದವರೆಗಿನ ನಿತ್ಯ ಹರಿದ್ವರ್ಣ ಕಾಡುಗಳ ತೆರೆದ ಭಾಗಗಳಲ್ಲಿ ಸೂರ್ಯವರ್ತ ಮರಗಳಾಗಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ಭಾರತ ಮತ್ತು ಶ್ರೀ ಲಂಕಾ;ಪಶ್ಚಿಮ ಘಟ್ಟದ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿ ಪ್ರದೇಶಗಳು.

ಗ್ರಂಥ ಸೂಚಿ :

Wight, Ic. t. 1883. 18852;Gamble, Fl.Madras 2:1326.1993 (rep.ed.) ; Sasidharan, Biodiversity documentation for Kerala – Flowering plants, part 6, 421.2004;Saldanha, Fl. Karnataka 2;150.1996.

Top of the Page