ಮಲ್ಲೋಟಸ್ ರೆಸಿನೋಸಸ್ (Blanco) Merr. - ಯೂಫೊರ್ಬಿಯೇಸಿ

Synonym : ಮಲ್ಲೋಟಸ್ ಇಂಟರ್ಮೀಡಿಯಸ್(Bail.) Balakri.; ಮಲ್ಲೋಟಸ್ ಮ್ಯೂರಿಕೇಟಸ್ (Wt.)Thw.

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 5 ಮೀ. ಎತ್ತರದವರೆಗೆ ಬೆಳೆಯುವ ಮರಗಳು.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ಉಪದುಂಡಾಕಾರದಲ್ಲಿದ್ದು ರೋಮರಹಿತವಾಗಿರುತ್ತವೆ ಮತ್ತು ವಾಯುವಿನಿಮಯ ಬೆಂಡುರಂಧ್ರ ಸಮೇತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಅಭಿಮುಖ – ಕತ್ತರಿಯಾಕಾರದ ಜೋಡನಾ ವ್ಯವಸ್ತೆಯಲ್ಲಿದ್ದು ಅಸಮ ಜೋಡಿಗಳನ್ನೊಳಗೊಂಡಿರುತ್ತವೆ; ಕಾವಿನೆಲೆಗಳು ಉದುರಿಹೋಗುತ್ತವೆ; ತೊಟ್ಟುಗಳು 0.5 ರಿಂದ 1 ಸೆಂ.ಮೀ.ಉದ್ದವಿದ್ದು ಕಾಲುವೆಗೆರೆ ಸಮೇತವಾಗಿರುತ್ತವೆ ಮತ್ತು ಎರಡೂ ತುದಿಯಲ್ಲಿ ಊದಿಕೊಂಡಿರುತ್ತವೆ; ಪತ್ರಗಳು 5.5 -16 X 2.7 – 4.5 ಸೆಂ. ಮೀ. ಗಾತ್ರದಲ್ಲಿದ್ದು, ಸಂಕುಚಿತವಾದ ವಜ್ರ-ಅಂಡವೃತ್ತದಿಂದ ಬುಗುರಿ-ಭರ್ಜಿಯವರೆಗಿನ ಆಕಾರ ಹೊಂದಿರುತ್ತವೆ; ಪತ್ರಗಳ ಬುಡ ಮತ್ತು ತುದಿ ಸಂಕುಚಿತವಾಗಿರುತ್ತವೆ, ತುದಿ ಚೂಪಾಗಿರುವುದರಿಂದ ಕ್ರಮೇಣ ಚೂಪಾಗುವ ಮಾದರಿಯಲ್ಲಿದ್ದು ಬುಡ ಬೆಣೆಯಾಕಾರದಲ್ಲಿರುತ್ತದೆ;ಅಂಚು ನಯಯಾಗಿರುವುದರಿಂದ ಹಿಡಿದು ವಂಕಿಯ ರೀತಿಯ ದಂತಿತವರೆಗಿನ ಮಾದರಿ ಹೊಂದಿರುತ್ತದೆ; ಪತ್ರದ ತಳಭಾಗ ಹಳದಿ ಬಣ್ಣದ ಅಂಟು ರಸ ಗ್ರಂಥಿಗಳ ಸಮೇತ ಇರುತ್ತವೆ;ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಸ್ವಲ್ಪಮಟ್ಟಿಗೆ ಮೇಲೆದ್ದಿರುತ್ತದೆ; ಎರಡನೇ ದರ್ಜೆಯ ನಾಳಗಳು ಅಂದಾಜು 7 ಜೋಡಿಗಳಿರುತ್ತವೆ; ಮೂರನೇ ದರ್ಜೆಯ ನಾಳಗಳು ಓರೆಯಾಗಿದ್ದು ಎಲೆ ದಿಂಡಿಗೆ ಅಡ್ಡವಾಗಿ ಕೂಡುವಂತವು.
ಪುಷ್ಪಮಂಜರಿ/ಹೂಗಳು : ಹೂಗಳು ಏಕಲಿಂಗಿಗಳಾಗಿರುತ್ತವೆ ಮತ್ತು ಅಕ್ಷಾಕಂಕುಳಿನಲ್ಲಿನ ಕದಿರುಮಂಜರಿಯಲ್ಲಿರುತ್ತವೆ.
ಕಾಯಿ /ಬೀಜ : ಸಂಪುಟ ಫಲಗಳು 3 ಮರಿಫಲಗಳನ್ನು ಹೊಂದಿದ್ದು ವಿರಳವಾಗಿ ಹಳದಿ ಬಣ್ಣದ ಅಂಟು ರಸ ಗ್ರಂಥಿಗಳ ಸಮೇತ ಇರುತ್ತವೆ ಮತ್ತು ಗಡುಸಾದ ತರಕಲು ಗುಬುಟುಗಳ ಸಮೇತವಿರುತ್ತವೆ.ಪ್ರತಿ ಮರಿಫಲದಲ್ಲಿ ಒಂದು ಬೀಜವಿರುತ್ತದೆ.

ಜೀವಪರಿಸ್ಥಿತಿ :

1300 ಮೀ. ಎತ್ತರದವರೆಗಿನ ಪ್ರದೇಶಗಳ ನಿತ್ಯಹರಿದ್ವರ್ಣ ಕಾಡುಗಳ ಒಳಛಾವಣಿಯಲ್ಲಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಭೇದ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿ ಪ್ರದೇಶಗಳಲ್ಲಿ ಕಂಡುಬರುತ್ತದೆ.

ಗ್ರಂಥ ಸೂಚಿ :

Sp. Blancoan. 222. 1918; Bull. Bot. Surv. Ind. 10:245. 1968; Gamble, Fl.Madras 2:1323.1993(rep.ed.);Sasidharan,Biodiversity documentation for Kerala – Flowering plants, part 6, 423.2004;Saldanha, Fl.Karnataka 2:152.1996.

Top of the Page