ಮಲ್ಲೋಟಸ್ ಟೆಟ್ರಾಕಾಕ್ಕಸ್ (Roxb.) Kurz - ಯೂಫೊರ್ಬಿಯೇಸಿ

Synonym : ರಾಟ್ಲೆರ ಟೆಟ್ರಾಕಾಕ್ಕ Roxb. ;ಮಲ್ಲೋಟಸ್ ಆಲ್ಬಸ್ Muell.-Arg. Var. ಆಕ್ಸಿಡೆಂಟಾಲಿಸ್ J.Hk.

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 12 ಮೀ. ಎತ್ತರದವರೆಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕಂದು ಬಣ್ಣದಲ್ಲಿದ್ದು ವಾಯುವಿನಿಮಯ ಬೆಂಡು ರಂಧ್ರಗಳ ಸಮೇತವಿರುತ್ತದೆ; ಕಚ್ಚು ಮಾಡಿದ ಜಾಗ ಕೆನೆ ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ಚಪ್ಪಟೆಯಾಗಿದ್ದು ಕಂದು ಮಿಶ್ರಿತ ಹಳದಿ ಬಣ್ಣದ ದಟ್ಟ ಮೃದು ತುಪ್ಪಳದಿಂದ ಕೂಡಿರುತ್ತದೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ. ಕಾವಿನೆಲೆಗಳು ಉದುರಿಹೋಗುವ ಮಾದರಿಯಲ್ಲಿರುತ್ತವೆ; ತೊಟ್ಟುಗಳು 3 ರಿಂದ 12.5 ಸೆಂ.ಮೀ.ಉದ್ದವಿದ್ದು ದುಂಡಾಗಿರುತ್ತವೆ, ಕಾಲುವೆಗೆರೆ ಸಮೇತವಿದ್ದು ನಕ್ಷತ್ರ- ದಟ್ಟ ಮೃದು ತುಪ್ಪಳದಿಂದ ಕೂಡಿರುತ್ತದೆ ಹಾಗೂ ಎರಡೂ ತುದಿಯಲ್ಲಿ ಊದಿಕೊಂಡಿರುತ್ತವೆ ; ಪತ್ರಗಳು 8.5 -12.5 X 6.5 –20 ಸೆಂ. ಮೀ. ಗಾತ್ರದಲ್ಲಿದ್ದು,ವಿಶಾಲವಾದ ಅಂಡಾಕಾರದಿಂದ ವೃತ್ತದವರೆಗಿನ ಆಕಾರ ಹೊಂದಿರುತ್ತವೆ; ಪತ್ರಗಳು ಚೂಪಾಗಿರುವುದರಿಂದ ಕ್ರಮೇಣ ಚೂಪಾಗುವ ತುದಿ ಹೊಂದಿರುತ್ತವೆ ,ಬುಡ ಚೂಪಾದುದರಿಂದ ಕ್ರಮೇಣ ಚೂಪಾಗುವ ಮಾದರಿಯಲ್ಲಿರುತ್ತದೆ; ಎಲೆ ತೊಟ್ಟು ಎಲೆಬುಡದ ಮಧ್ಯದಲ್ಲಿ ಅಥವಾ ಉಪ-ಮಧ್ಯದಲ್ಲಿರುತ್ತದೆ;ಎಲೆಯ ಸಾಮಾನ್ಯವಾಗಿ ಅಂಚು ಸಾಮಾನ್ಯವಾಗಿ ನಯವಾಗಿರುತ್ತದೆ ಅಥವಾ ಎಳೆಯದಾಗಿದ್ದಾಗ 3- ಹಾಲೆಗಳನ್ನುಳ್ಳದ್ದಾಗಿರುತ್ತದೆ; ಮೇಲ್ಮೈ ತೊಗಲನ್ನೋಲುವ ಮಾದರಿಯದಾಗಿದ್ದು ಪತ್ರದ ತಳ ಭಾಗ ಬಿಳಿ ಬಣ್ಣದ ನಕ್ಷತ್ರ-ದಟ್ಟ ಮೃದು ತುಪ್ಪಳದಿಂದ ಕೂಡಿರುತ್ತದೆ; ಪತ್ರದ ತಳಭಾಗದಲ್ಲಿ 3 ನಾಳಗಳಿರುತ್ತವೆ; ಮೂರನೇ ದರ್ಜೆಯ ನಾಳಗಳು ಲಂಬ ರೇಖೆಗೆ ಸಮಕೋನದಲ್ಲಿದ್ದು ಎಲೆ ದಿಂಡಿಗೆ ಅಡ್ಡವಾಗಿ ಕೂಡುವಂತವು.
ಪುಷ್ಪಮಂಜರಿ/ಹೂಗಳು : ಹೂಗಳು ಏಕಲಿಂಗಿಗಳಾಗಿದ್ದು ಗಂಡು ಮತ್ತು ಹೆಣ್ಣು ಹೂಗಳು ಪ್ರತ್ಯೇಕ ಸಸ್ಯಗಳಲ್ಲಿದ್ದು ತುದಿಯಲ್ಲಿನ ಅಥವಾ ಅಕ್ಷಾಕಂಕುಳಿನಲ್ಲಿನಕ್ಷತ್ರ- ದಟ್ಟ ಮೃದುತುಪ್ಪಳವುಳ್ಳ ಪುನರಾವೃತ್ತಿಯಾಗಿ ಕವಲೊಡೆಯುವ ಪುಷ್ಪಮಂಜರಿಯಲ್ಲಿರುತ್ತದೆ.
ಕಾಯಿ /ಬೀಜ : ಸಂಪುಟ ಫಲಗಳು ಗೋಳಾಕಾರದಲ್ಲಿದ್ದು, ಮೆದುವಾದ ಉಣ್ಣೆ ಸಮೇತವಿರುವ ಗಡುಸಾದ ತರಕಲು ಗುಬುಟುಗಳನ್ನು ಹೊಂದಿರುತ್ತದೆ;ಬೀಜಗಳು 6.

ಜೀವಪರಿಸ್ಥಿತಿ :

1600 ಮೀ. ಎತ್ತರದವರೆಗಿನ ಪ್ರದೇಶಗಳ ನಿತ್ಯಹರಿದ್ವರ್ಣ ಕಾಡುಗಳ ಅಂಚಿನಲ್ಲಿಯ ಮರಗಳಾಗಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ಭಾರತ, ಶ್ರೀಲಂಕಾ, ಮ್ಯಾನ್ಮಾರ್; ಪಶ್ಚಿಮ ಘಟ್ಟದ ಎಲ್ಲಾ ಪ್ರದೇಶಗಳು.

ಗ್ರಂಥ ಸೂಚಿ :

Fl. Ind. 3:827.1832; Gamble, Fl.Madras 2:1322.1993 (rep.ed.); Sasidharan, Biodiversity documentation for Kerala – Flowering plants, part 6, 424.2004;Saldanha, Fl.Karnataka 2:152.1996.

Top of the Page