ಮ್ಯಾಮಿಯ ಸುರಿಗ (Buch.-Ham. ex Roxb.) Kosterm. - ಕ್ಲೂಸಿಯೇಸಿ

Synonym : ಕ್ಯಾಲೋಫಿಲ್ಲಮ್ ಸುರಿಗ Buch.-Ham. ex Roxb. ; ಓಕ್ರೋಕಾರ್ಪಸ್ ಲಾಂಜಿಫೋಲಿಯಸ್ (Wt.)Anders.

ಕನ್ನಡದ ಪ್ರಾದೇಶಿಕ ಹೆಸರು : ಪುಂಡಿ, ಸುರಗಿ, ಪುನ್ನಗ, ಸುರಂಗಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 15 ಮೀ ಎತ್ತರದವರೆಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕಂದು ಬಣ್ಣ ಹೊಂದಿದ್ದು ನಿಯತವಾಗಿ ಪೊರೆಗಳನ್ನು ಹೊಂದಿರುತ್ತದೆ; ಕಚ್ಚು ಮಾಡಿದ ಜಾಗ ಕೆಂಪು ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಕೃತಿಯಲ್ಲಿದ್ದು ರೋಮರಹಿತ -ವಾಗಿರುತ್ತವೆ; ಕಾಂಡದ ಅಂಕುರ (ತುದಿಮೊಗ್ಗು) ಸಾಮಾನ್ಯವಾಗಿ ನಾಲ್ಕರಿಂದ ಆರು ದುಂಡಾಕಾರದ ಇಂಬ್ರಿಕೇಟ್ ಮಾದರಿ -ಯಲ್ಲಿರುವ ಶಲ್ಕೆಗಳಿಂದ ಆವೃತವಾಗಿರುತ್ತವೆ.
ಜಿನುಗು ದ್ರವ : ಸಸ್ಯಕ್ಷೀರ ಹಳದಿ ಮಿಶ್ರಿತ ಕೆನೆ ಬಣ್ಣ ಹೊಂದಿರುತ್ತದೆ .
ಎಲೆಗಳು : ಎಲೆಗಳು ಸರಳವಾಗಿದ್ದು,ಕತ್ತರಿಯಾಕಾರದ ಅಭಿಮುಖ ಜೋಡನಾ ವ್ಯವಸ್ಥೆಯಲ್ಲಿ-ರುತ್ತವೆ; ಎಲೆತೊಟ್ಟುಗಳು 05 – 1.0 ಸೆಂ.ಮೀ, ಉದ್ದಹೊಂದಿದ್ದು, ಕಾಲುವೆಗೆರೆ ಸಮೇತವಾಗಿದ್ದು ರೋಮರಹಿತವಾಗಿರುತ್ತವೆ ; ಎಲೆಪತ್ರಗಳು 10 -23 X 4 – 7.5, ಚತುರಸ್ರಾಕಾರ,ಸಂಕುಚಿತ ಚತುರಸ್ರಾಕಾರದಿಂದ, ಸಂಕುಚಿತ ಬುಗುರಿಯಾಕಾರ-ದವರೆಗಿನ ಆಕಾರಹೊಂದಿದ್ದು,, ಚೂಪಲ್ಲದ ಮಾದರಿಯ ಅಥವಾ ಮೊಂಡಾಗಿ ಹಾಗೂ ಸಣ್ಣ ಪ್ರಮಾಣದಲ್ಲಿ ಕ್ರಮೇಣ ಚೂಪಾಗುವ ಮಾದರಿಯಲ್ಲಿದ್ದು,ಚೂಪಲ್ಲದ ಬುಡ ವನ್ನು ಹೊಂದಿರುತ್ತವೆ,ಎಲೆಗಳು ದಪ್ಪನೆಯ ತೊಗಲ್ಲನ್ನೋಲುವ ಮಾದರಿ-ಯಲ್ಲಿರುತ್ತವೆ; ಎರಡನೇ ದರ್ಜೆಯ ನಾಳಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು ಸಮಾಂತರವಾಗಿದ್ದು, ಮಧ್ಯನಾಳಕ್ಕೆ ಲಂಬವಾಗಿರುತ್ತವೆ; ಮೂರನೇ ದರ್ಜೆಯ ನಾಳಗಳು ಸೂಕ್ಷ್ಮವಾಗಿದ್ದು, ಜಾಲಬಂಧ ನಾಳ ವಿನ್ಯಾಸದಲ್ಲಿದ್ದು, ನಾಳಗಳ ನಡುವಣ ಜಾಗದ ಮಧ್ಯ ಭಾಗದಲ್ಲಿ ಪಾರದರ್ಶಕವಾದ ರಸಗ್ರಂಥಿಗಳನ್ನು ಹೊಂದಿರುತ್ತವೆ ಹಾಗೂ ಕೆಲವು ಸಂಧರ್ಭಗಳಲ್ಲಿ ಎಲೆಗಳ ಮೇಲಿನ ದಪ್ಪವಾದ ಹೊರಹೊದಿಕೆಯ ಕಾರಣದಿಂದ ಗೋಚರವಾಗುವುದಿಲ್ಲ.
ಪುಷ್ಪಮಂಜರಿ/ಹೂಗಳು : ಹೂಗಳು ಸಂಕೀರ್ಣಲಿಂಗಿಗಳಾಗಿದ್ದು,ಶ್ವೇತ ಬಣ್ಣದಲ್ಲಿದ್ದು, ಉದ್ದವಾದ ತೊಟ್ಟುಗಳ ಸಮೇತವಿದ್ದು ಅತಿ ವಯಸ್ಸಾದ ಕವಲುಗಳ ಮೇಲಿನ ಗುಚ್ಛಗಳಲ್ಲಿರುತ್ತವೆ.
ಕಾಯಿ /ಬೀಜ : ಬೆರ್ರಿ ಗಳು ಅಂಡಾಕಾರದಲ್ಲಿದ್ದು, ಅಗ್ರದಲ್ಲಿ ಕೊಕ್ಕು ಹೊಂದಿದ್ದು ಒಂದು ಬೀಜವನ್ನೊಳಗೊಂಡಿರುತ್ತವೆ.

ಜೀವಪರಿಸ್ಥಿತಿ :

700 ಮೀ ಎತ್ತರದವರೆಗಿನ ಪ್ರದೇಶಗಳಲ್ಲಿ ಕಂಡುಬರುವ ತೆರೆದ ನಿತ್ಯಹರಿದ್ವರ್ಣ ಕಾಡುಗಳಲ್ಲಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಭೇದ ಉತ್ತರ ಮಲಬಾರಿನ ಕರಾವಳಿಯಿಂದ ದಕ್ಷಿಣ ಕೊಂಕಣ ಕರಾವಳಿ ಮತ್ತು ಮಧ್ಯ ಸಹ್ಯಾದ್ರಿಯ ಉತ್ತರ ಭಾಗದ ಪ್ರದೇಶಗಳಲ್ಲಿ ವ್ಯಾಪಿಸಿದೆ.

ಗ್ರಂಥ ಸೂಚಿ :

Comm. For. Res. Inst. Indones. Bogor 72:33.1961; Gamble, Fl.Madras1:75.1997(re.ed.);Sasidharan, Biodiversity documentation for Kerala-Flowering Plants, part 6:42.2004; Saldanha, Fl. Karnataka 1:209.1996; ; Cooke, Fl.Bombay 1: 79. 1902.

Top of the Page