ಮ್ಯಾಂಜಿಫೆರ ಇಂಡಿಕ L. - ಅನಕಾರ್ಡಿಯೇಸಿ

ಕನ್ನಡದ ಪ್ರಾದೇಶಿಕ ಹೆಸರು : ಮಾವಿನಮರ, ಮಾವು, ಸಿಹಿಮಾವು

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 35 ಮೀ ಎತ್ತರದವರೆವಿಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ಕಾಂಡದ ಅಡಿಭಾಗ……fluted?.; ತೊಗಟೆ ಚಕ್ಕೆಯ ಮಾದರಿಯವು.
ಕವಲುಗಳು ಮತ್ತು ಕಿರುಕೊಂಬೆಗಳು : ಕವಲುಗಳು ಮತ್ತುಕಿರುಕೊಂಬೆಗಳು ಗುಂಡಾಕೃತಿಯವು.
ಜಿನುಗು ದ್ರವ : ಜಿನುಗು ದ್ರವ ಜಲರೂಪಿ ಹಾಗೂ ಕಾರ ಮತ್ತು ಕಹಿ ಗುಣವನ್ನು ಹೊಂದಿರುತ್ತದೆ.
ಎಲೆಗಳು : ಎಲೆಗಳು ಸರಳ, ಪರ್ಯಾಯ – ಸುತ್ತು ಜೋಡನಾ ವ್ಯವಸ್ಥೆಯಲ್ಲಿ ಕುಡಿಕೊಂಬೆಗಳ ತುದಿಯಲ್ಲಿ ಗುಂಪಾಗಿರುತ್ತವೆ;ಎಲೆತೊಟ್ಟು1.2 ರಿಂದ 6.2 ಸೆಂ.ಮೀ. ಉದ್ದವಾಗಿದ್ದು ತಳಭಾಗದಲ್ಲಿ ಉಬ್ಬಿಕೊಂಡಿರುತ್ತದೆ; ಎಲೆ ಪತ್ರ 8 – 25 x 1.7 -6 ಸೆಂ.ಮೀ ಗಾತ್ರವನ್ನು ಹೊಂದಿರುತ್ತದೆ. ಎಲೆಗಳ ಆಕಾರ ಸಂಕುಚಿತ ಧೀರ್ಘ ಚತುರಸ್ರಾಕಾರದ ಅಂಡವೃತ್ತಾಕೃತಿ ಅಥವಾ ಭರ್ಜಿಯಾಕಾರದಲ್ಲಿರುತ್ತದೆ. ಎಲೆತುದಿ ಕ್ರಮೇಣವಾಗಿ ಬಾಲರೂಪವಾಗುವಂತಹವು. ಎಲೆಬುಡ ಚೂಪು ಮಾದರಿಯಿಂದ ಹಿಡಿದು ಒಳಬಾಗಿದ ತಳವುಳ್ಳದ್ದಾಗಿರುತ್ತದೆ. ಅಂಚು ಕೊಂಚ ಅಲೆಯಾಕಾರದವು. ಮೇಲ್ಮೈ ಉಪ-ತೊಗಲಿನ ತರಹವಿದ್ದು ರೋಮರಹಿತವಾಗಿರುತ್ತದೆ; ಮಧ್ಯನಾಳ ಪತ್ರದ ಮೇಲ್ಬಾಗದಲ್ಲಿ ಉಬ್ಬಿರುತ್ತದೆ; ಎರಡನೇ ದರ್ಜೆ ನಾಳಗಳು ಹೆಚ್ಚು ಸಂಖ್ಯೆಯಲ್ಲಿದ್ದು(28 ರಿಂದ 30 ಜೋಡಿ) ನೇರವಾಗಿ ಅಥವಾ ಕೊಂಚ ತಿರುವು ರೂಪದಲ್ಲಿದ್ದು ಮೂರನೇ ದರ್ಜೆ ನಾಳಗಳು ಜಾಲಬಂಧ ವಿನ್ಯಾಸ ಹೊಂದಿರುತ್ತವೆ.
ಪುಷ್ಪಮಂಜರಿ/ಹೂಗಳು : ಪುಷ್ಪಮಂಜರಿ ಅಗ್ರಸ್ಥಾನದಲ್ಲಿರುವ ಕವಲೊಡೆದ ಮಾದರಿಯದಾಗಿದ್ದು, ಶ್ವೇತ ಬಣ್ಣದ ಹಾಗೂ ಸಂಕೀರ್ಣ ಲಿಂಗಿ ಹೂಗಳನ್ನುಹೊಂದಿರುತ್ತವೆ.
ಕಾಯಿ /ಬೀಜ : ಕಾಯಿಗಳು ಡ್ರೂಪ್ ಮಾದರಿಯವು ಹಾಗೂ ಮಾಂಸಲವಾಗಿರುವಂತಹವು; ಕಾಯಿಗಳು ಸಂಕುಚಿತವಾಗಿದ್ದು ಒಂದು ಬೀಜವನ್ನೊಳಗೊಂಡಿರುತ್ತದೆ.

ಜೀವಪರಿಸ್ಥಿತಿ :

ಈ ಪ್ರಭೇಧ ಮೇಲ್ಛಾವಣಿ ಮರಗಳಾಗಿ ನಿತ್ಯಹರಿದ್ವರ್ಣ ಹಾಗೂ ಅರೆ- ನಿತ್ಯಹರಿದ್ವರ್ಣ ಕಾಡುಗಳಲ್ಲಿ ಬೆಳೆಯುತ್ತವೆ.

ವ್ಯಾಪನೆ :

ಕೃಷಿ ಮಾಡಿ ಬೆಳೆಸದ ಅಥವಾ ಇಂಡೋಮಲೇಸಿಯಾದಲ್ಲಿ ಬೆಳೆಯುತ್ತವೆ. ಈ ಪ್ರಭೇಧದ ಹಲವು ಜಾತಿಗಳನ್ನು ಸಾಮಾನ್ಯವಾಗಿ ಉಷ್ಣವಲಯ ಪ್ರದೆಶಗಳಲ್ಲಿ ಬೆಳೆಯುತ್ತರೆ.

ಗ್ರಂಥ ಸೂಚಿ :

Sp.Pl. 1:200.1753 ; Gamble , Fl. Madras1:268- 269.1997(re.ed.); Saldanha , Fl. Karnataka 2:205.1996; Sasidharan, Bidiversity documentation for Kerala-Flowering plants, part 6: 112.2004; Keshava murthy and Yoganarasimhan, Fl. Coorg(Kodagu)126.1990; Cooke, Fl. Bombay1:281.1902

Top of the Page