ಮಿಯೋಗೈನ್ ಪ್ಯಾನ್ನೋಸ (Dalz.) Sinclair - ಅನೋನೇಸಿ

Synonym : ಯುನೋನ ಪ್ಯಾನ್ನೋಸ Dalz.

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 8 ಮೀ ಎತ್ತರದವರೆಗೂ ಬೆಳೆಯುವ ದೊಡ್ಡ ಪೊದೆಗಳು ಅಥವಾ ಸಣ್ಣ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಬೂದಿ ಬಣ್ಣ ಹಾಗೂ ಸೂಕ್ಷ್ಮ ಬೆಂಡು ರಂಧ್ರಸಹಿತವಾಗಿದ್ದು ಕೆನೆಯ ಬಣ್ಣ ಕಚ್ಚುಗಳನ್ನು ಹೊಂದಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ಬೆಳ್ಳಗಿದ್ದು ಅಚ್ಚೊತ್ತಿದ ಉದ್ದುದ್ದವಾದ ಜಾಲಬಂಧ ವಿನ್ಯಾಸ ಹೊಂದಿದ್ದು ಮೃದುತುಪ್ಪಳ ಸಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು, ಪರ್ಯಾಯ ಜೋಡನಾ ವ್ಯವಸ್ಥೆಯಲ್ಲಿದ್ದು ಕಾಂಡದ ಎರಡೂ ಕಡೆ ಎದುರು ಬದರಿನ ಲಂಬಸಾಲಿನಲ್ಲಿರುತ್ತವೆ. ತೊಟ್ಟುಗಳು 0.3 ರಿಂದ 0.8 ಸೆಂ.ಮೀ. ಉದ್ದವಿದ್ದು, ಎಳೆಯದಾಗಿದ್ದಾಗ ಮೃದುತುಪ್ಪಳದಿಂದ ಕೂಡಿದ್ದು ಬಲಿತ ಎಲೆತೊಟ್ಟುಗಳು ಉಪರೋಮರಹಿತವಾಗಿರುತ್ತವೆ. ಎಲೆ ಪತ್ರ 10 - 4.6 - 12 × 1.5 - 3.6 ಸೆಂ.ಮೀ. ಗಾತ್ರವಿದ್ದು, ಪತ್ರಗಳು ಭರ್ಜಿಯಾಕಾರದಿಂದ, ಇಕ್ಕಟ್ಟಾದ ಅಂಡಾಕಾರದಲ್ಲಿದ್ದು ಬಾಲರೂಪಿ – ಕ್ರಮೇಣ ಚೂಪಾಗುವ (ಮೊನಚುಭಾಗ 2 ಸೆಂ.ಮೀ. ಉದ್ದವರೆವಿಗೆ) ತುದಿ, ಚೂಪಾದ ಬುಡಭಾಗವನ್ನು ಹೊಂದಿರುತ್ತದೆ; ಅಂಚು ನಯವಾಗಿರುತ್ತದೆ; ಪತ್ರಗಳ ಮೇಲಿನ ಭಾಗದಲ್ಲಿ ರೋಮರಹಿತವಾಗಿರುತ್ತವೆ. ತಳಭಾಗ ಅಗೋಚರವಾದ ಪ್ರಕಾರಭೇದ್ಯ ಮಚ್ಚೆಗಳಿಂದ ಕೂಡಿದ್ದು ನಾಳಗಳ ಮೇಲೆ ಮೃದುತುಪ್ಪಳವನ್ನು ಹೊಂದಿರುತ್ತವೆ; ಎರಡನೇ ದರ್ಜೆಯ ನಾಳಗಳು 5 ರಿಂದ 9 ಜೊಡಿಗಳಿದ್ದು ಮೂರನೇ ದರ್ಜೆಯ ನಾಳಗಳು ದಾರದಂತಿದ್ದು, ಹತ್ತಿರದ ಅಂತರಹೊಂದಿದ್ದು ಸಮಾಂತರದಿಂದ ಉಪಸಮಾಂತರವಾಗಿರುತ್ತವೆ.
ಪುಷ್ಪಮಂಜರಿ/ಹೂಗಳು : ಹೂಗಳು ತೊಟ್ಟು ರಹಿತ ಒಂಟಿಯಾಗಿ ಅಕ್ಷಾಕಂಕುಳಿನಲ್ಲಿ ಅಥವಾ ಅಗ್ರಸ್ಥಾನದಲ್ಲಿರುತ್ತವೆ. ಹೂಗಳು ಹಳದಿ ಮಿಶ್ರಿತ ಹಸಿರು ಅಥವಾ ಕೊಳಕು ಬಿಳಿ ಬಣ್ಣದಲ್ಲಿದ್ದು ದಟ್ಟ ಮೃದು ತುಪ್ಪಳ ಸಹಿತವಾಗಿರುತ್ತವೆ.
ಕಾಯಿ /ಬೀಜ : ಅಂಡ ವೃತ್ತಾಕಾರದ, ತೊಟ್ಟು ರಹಿತವಾದ, ಮಖಮಲ್ಲಿನಷ್ಟು ಮೃದುವಾದ ದಟ್ಟ ತುಪ್ಪಳವನ್ನು ಹೊಂದಿದ 1 ರಿಂದ 3 ಬೆರ್ರಿಗಳು ಗುಂಪಾಗಿರುತ್ತವೆ.

ಜೀವಪರಿಸ್ಥಿತಿ :

ಸಮುದ್ರಮಟ್ಟದ 400 ರಿಂದ 1370ಮೀ. ಕಡಿಮೆ ಮತ್ತು ಮಧ್ಯಮ ಎತ್ತರವುಳ್ಳ ನಿತ್ಯ ಹರಿದ್ವರ್ಣ ಕಾಡುಗಳ ಒಳಛಾವಣಿ (ನಾಲ್ಕನೇ ಸಮಗ್ರ ಸಮೂಹ) ಯಲ್ಲಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ಪಶ್ಚಿಮಘಟ್ಟದ ಪ್ರದೇಶಗಳಿಗೆ ಈ ಪ್ರಭೇದ ಸೀಮಿತವಾಗಿದ್ದು ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿಯಲ್ಲಿ ಸಾಮಾನ್ಯ ವಾಗಿಯೂ, ಮಹಾರಾಷ್ಟ್ರದ ಸಹ್ಯಾದ್ರಿ ಪ್ರದೇಶದಲ್ಲಿ ಅಪರೂಪವಾಗಿಯೂ ಈ ಸಸ್ಯ ಕಂಡು ಬರುತ್ತದೆ

ಗ್ರಂಥ ಸೂಚಿ :

Sinclair, Sarawak Mus. J. 5: 604.1951; Gamble, Fl. Madras 1: 14.1997 (re.ed); Cook, Fl. Bombay 1:11. 1902; Sasidharan, Biodiversity documentation for Kerala- Flowering Plants, part 6: 17. 2004; Saldanha, Fl. Karnataka 1: 44. 1996.

Top of the Page