ಮೆಮೆಸಿಲಾನ್ ಗ್ರಾಸೈಲ್ Bedd. - ಮೆಲಾಸ್ಟೊಮಟೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಸ್ಥಿತಿ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ಪೊದೆಗಳು ಅಥವಾ ಸಣ್ಣಮರಗಳು.
ಕವಲುಗಳು ಮತ್ತು ಕಿರುಕೊಂಬೆಗಳು : ಕವಲುಗಳು ಪರ್ಯಾಯವಾಗಿ ಎಡ ಬಲ ಮುರುವುಗಳನ್ನು ಹೊಂದಿರುತ್ತವೆ; ಕಿರುಕೊಂಬೆಗಳು ತೆಳುವಾಗಿರುತ್ತವೆ ಮತ್ತು4 ಕೋನಗಳನ್ನು ಹೊಂದಿದ್ದು ರೋಮರಹಿತ -ವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು, ಕತ್ತರಿಯಾಕಾರದ ಅಭಿಮುಖ ಜೋಡನಾ ವ್ಯವಸ್ಥೆಯ -ಲ್ಲಿರುತ್ತವೆ; ತೊಟ್ಟುಗಳು 0.2 -0.4ಸೆಂ.ಮೀ. ರೋಮರಹಿತವಾಗಿದ್ದು ಕಾಲುವೆ ಗೆರೆಗಳ ಸಮೇತವಿರುತ್ತವೆ; ಪತ್ರಗಳು 3.5-6.7 X 1 –228 ಸೆಂ.ಮೀ ಗಾತ್ರ ಹೊಂದಿದ್ದು ಅಂಡ--ಭರ್ಜಿಯ ಆಕಾರದಲ್ಲಿದ್ದು ಬಾಲರೂಪಿ ಅಥವಾ ಕೆಲವು ವೇಳೆ ಮೊಂಡಾಗ್ರವುಳ್ಳ ಸಂಕುಚಿತ ಕ್ರಮೇಣ ಚೂಪಾಗುವ ತುದಿ, ಹಾಗೂ ಚೂಪಾದ ಬುಡವನ್ನುಹೊಂದಿರುತ್ತವೆ;ಅಂಚು ನಯವಾಗಿರುತ್ತದೆ;ಮೇಲ್ಮೈ ರೋಮರಹಿತವಾಗಿದ್ದು ತೊಗಲ್ಲನ್ನೋಲುವ ಮಾದರಿಯ ಲ್ಲಿರುತ್ತದೆ;-ಮಧ್ಯನಾಳ ಮೇಲ್ಭಾಗದಲ್ಲಿ ಅಂತರ ಅಂಚಿನ ನಾಳಗಳನ್ನೊಳಗೊಂಡು ಸ್ವಲ್ಪ ಮಟ್ಟಿಗೆ ಕಾಲುವೆಗೆರೆ ಸಮೇತವಾಗಿರುತ್ತದೆ; ಎರಡನೇ ಮತ್ತು ಮೂರನೇ ದರ್ಜೆಯ ನಾಳಗಳು ಅಸ್ಪಷ್ಟ.
ಪುಷ್ಪಮಂಜರಿ/ಹೂಗಳು : ಹೂಗಳು 3-ಹೂಗಳುಳ್ಳ ಅಕ್ಷಾಕಂಕುಳಿನಲ್ಲಿರುವ ಮಧ್ಯಾರಂಭಿ ಪುಷ್ಪಮಂಜರಿ -ಗಳಲ್ಲಿರುತ್ತವೆ;ತೊಟ್ಟುಗಳು ದಾರದ ರೂಪದಲ್ಲಿರುತ್ತವೆ;ಪುಷ್ಪ ದಳಗಳು ತೆಳು ನೀಲಿ ಬಣ್ಣ ಹೊಂದಿರುತ್ತವೆ.
ಕಾಯಿ /ಬೀಜ : ಬೆರ್ರಿ ಗೋಳಾಕಾರದಲ್ಲಿದ್ದು ಒಂದು ಬೀಜವನ್ನೊಳಗೊಂಡಿರುತ್ತದೆ.

ಜೀವಪರಿಸ್ಥಿತಿ :

700 ಮತ್ತು 1000 ಮೀ. ನಡುವಿನ ಮಧ್ಯಮ ಎತ್ತರದವರೆಗಿನ ಪ್ರದೇಶಗಳ ತೇವಾಂಶವುಳ್ಳ ನಿತ್ಯ ಹರಿದ್ವರ್ಣ ಕಾಡುಗಳ ಒಳಗೆ ಅಪರೂಪವಾಗಿ ಈ ಪ್ರಭೇದ ಕಂಡು ಬರುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಗಳಿಗೆ ಸೀಮಿತವಾದ ಈ ಪ್ರಭೇದವನ್ನು ಅಗಸ್ತ್ಯಮಲೈ ಮತ್ತು ಕೊಡಗು ಪ್ರದೇಶಗಳಿಂದ ದಾಖಲಿಸಲಾಗಿದೆ.

ಸ್ಥಿತಿ :

ಅಪರೂಪ (Nayar, 1997)

ಗ್ರಂಥ ಸೂಚಿ :

Beddome, Ic. t. 164. 1868-1874; Gamble, Fl. Madras 1: 504. 1997 (re. ed); Sasidharan, Biodiversity documentation for Kerala- Flowering Plants, part 6: 181. 2004.

Top of the Page