ಮೈಕ್ರೋಟ್ರೋಪಿಸ್ ಮೈಕ್ರೋಕಾರ್ಪ Wt. - ಸೆಲಾಸ್ಟ್ರೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 8 ಮೀ ಎತ್ತರಕ್ಕೆ ಬೆಳೆಯುವ ಸಣ್ಣ ಮರಗಳು.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಕತ್ತರಿಯಾಕಾರದ ಅಭಿಮುಖ ಮಾದರಿಯಲ್ಲಿ ಜೋಡಿತವಾಗಿದ್ದು ಅಂದಾಜು 0.7 ಸೆಂ.ಮೀ ಉದ್ದದ ತೊಟ್ಟು ಹೊಂದಿರುತ್ತವೆ;ಎಲೆಪತ್ರಗಳು 3 –9.3 X 1.6 - 4.7 ಸೆಂ.ಮೀ ಗಾತ್ರವಿದ್ದು ,ಅಂಡವೃತ್ತದಿಂದ ಅಂಡಾಕಾರದವರೆಗಿನ ಆಕಾರ, ಚೂಪಲ್ಲದ ಮಾದರಿಯ ತುದಿ, ದುಂಡಾಗಿರುವುದರಿಂದ ಬೆಣೆಯಾಕಾರದವರೆಗಿನ ಮಾದರಿಯ ಬುಡ, ತೊಗಲವನ್ನೋಲುವ ಮೇಲ್ಮೈ ಹೊಂದಿರುತ್ತವೆ ಎಲೆಗಳ ತಳಬಾಗ, ಮಸುಕಾಗಿದ್ದು ಒಣಗಿದಾಗ ಆಲಿವ್ ಬೂದು ಬಣ್ಣ ಹೊಂದಿರುತ್ತವೆ;ಎರಡನೇ ದರ್ಜೆಯ ನಾಳಗಳು ತೆಳುವಾಗಿದ್ದು 6 ರಿಂದ 8 ಜೋಡಿಗಳಿರುತ್ತವೆ ;ಮೂರನೇ ದರ್ಜೆಯ ನಾಳಗಳು ಎಲೆಯ ಅಕ್ಷದ ದಿಕ್ಕಿಗಿರುತ್ತವೆ
ಪುಷ್ಪಮಂಜರಿ/ಹೂಗಳು : ಪುಷ್ಪಮಂಜರಿಗಳು 4 ರಿಂದ 8 ಸೆಂ.ಮೀ ಉದ್ದವಿರುವ ಮಧ್ಯಾರಂಭಿ ಮಾದರಿಯವು. ಅಕ್ಷಾಕಂಕುಳಿನಲ್ಲಿದ್ದು ತೊಟ್ಟುರಹಿತ ಗುಚ್ಛಗಳಲ್ಲಿರುತ್ತವೆ.
ಕಾಯಿ /ಬೀಜ : ಸಂಪುಟ ಫಲಗಳು ಕಂದು ಬಣ್ಣ ಹೊಂದಿದ್ದು ಅಗ್ರದಲ್ಲಿ ಸೂಕ್ಮವಾದ ಮುಳ್ಳು ಸಮೇತವಿರುತ್ತವೆ;ಪುಷ್ಪ ಪಾತ್ರೆಯ ಪತ್ರಕಗಳು ಕಾಯಿಗಳಲ್ಲಿ ಶಾಶ್ವತವಾಗಿರುತ್ತವೆ;ಬೀಜ 1, ಪತ್ರ ಸಮೇತ.

ಜೀವಪರಿಸ್ಥಿತಿ :

ಉಪ ಛಾವಣಿಗಳಲ್ಲಿ ಕಂಡುಬರುವ ಈ ಪ್ರಭೇದ ಸಾಮಾನ್ಯವಾಗಿ ಅತಿ ಎತ್ತರದ (1600 ರಿಂದ 2300 ಮೀ) ಪ್ರದೇಶಗಳಲ್ಲಿನ ನಿತ್ಯಹರಿದ್ವರ್ಣ ಕಾಡುಗಳ ಅಂಚಿನಲ್ಲಿ ಬೆಳೆಯುತ್ತದೆ..

ವ್ಯಾಪನೆ :

ಪಶ್ಚಿಮ ಘಟ್ಟ ಪ್ರದೇಶಗಳಿಗೆ ಸೀಮಿತವಾದ ಈ ಸಸ್ಯ ಸಾಮಾನ್ಯವಾಗಿ ನೀಲಗಿರಿ ಪ್ರದೇಶದಲ್ಲಿ ಕಂಡುಬರುತ್ತದೆ, ಅಲ್ಲದೆ ಪಳನಿ ಮತ್ತು ಅಗಸ್ತ್ಯಮಲೈ ಬೆಟ್ಟಗಳಿಂದಲೂ ಈ ಪ್ರಭೇದವನ್ನು ದಾಖಲಿಸಲಾಗಿದೆ.

ಗ್ರಂಥ ಸೂಚಿ :

Wt. Ic. 3: 7.975.1875;Gamble, Fl.Madras1:207.1997(re.ed.); Sasidharan, Biodiversity documentation for Kerala-Flowering Plants, part 6:97.2004;Cooke, Fl. Bombay 1:229.1902

Top of the Page