ಮೈಕ್ರೋಟ್ರೋಪಿಸ್ ರಾಮಿಫ್ಲೋರ Wt. - ಸೆಲಾಸ್ಟ್ರೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 8 ಮೀ ಎತ್ತರಕ್ಕೆ ಬೆಳೆಯುವ ಸಣ್ಣ ಮರಗಳು.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು ರೋಮರಹಿತ ವಾಗಿರುತ್ತವೆ
ಎಲೆಗಳು : ಎಲೆಗಳು ಸರಳವಾಗಿದ್ದು ಕತ್ತರಿಯಾಕಾರದ ಅಭಿಮುಖ ಮಾದರಿಯಲ್ಲಿ ಜೋಡಿತವಾಗಿದ್ದು ಅಂದಾಜು 0.3 ರಿಂದ 0.4 ಸೆಂ.ಮೀ ಉದ್ದದ ತೊಟ್ಟು ಹೊಂದಿರುತ್ತವೆ; ಎಲೆಪತ್ರಗಳು 6.5 – 8.5 X 3.5 – 4.7 ಸೆಂ.ಮೀ ಗಾತ್ರವಿದ್ದು ವಿಶಾಲವಾದ ಅಂಡವೃತ್ತ ಅಥವಾ ಬುಗುರಿ ಆಕಾರ ಹೊಂದಿರುತ್ತವೆ.ಎಲೆತುದಿ ದುಂಡಾಗಿ ಅಥವಾ ಕೆಲವು ವೇಳೆ ದುಂಡನೆಯ ತುದಿಯಲ್ಲಿ ತಗ್ಗನ್ನು ಹೊಂದಿರುತ್ತದೆ, ಎಲೆಯ ಬುಡ ದುಂಡಗೆ ಅಥವಾ ಕೆಲವು ವೇಳೆ ಬೆಣೆಯಾಕಾರದಲ್ಲಿರುತ್ತದೆ, ಎಲೆಯ ಅಂಚು ಹಿಂಸುರುಳಿ ಯಾಗಿರುತ್ತದೆ, ಎಲೆಯ ಮೇಲ್ಮೈ ತೊಗಲವನ್ನೋಲುವ ಮಾದರಿಯಲ್ಲಿದ್ದು ಎಲೆಗಳ ತಳಬಾಗ ಮಸುಕಾಗಿರುತ್ತದೆ;ಎರಡನೇ ದರ್ಜೆಯ ನಾಳಗಳು 6 ರಿಂದ 8 ಜೋಡಿಗಳಿದ್ದು, ಎಲೆಯ ಮೇಲ್ಭಾಗದಲ್ಲಿ ಪ್ರಮುಖವಾಗಿರುವುದಿಲ್ಲ ;ಮೂರನೇ ದರ್ಜೆಯ ನಾಳಗಳ ಕವಲುಗಳು ಎಲೆಯ ಅಕ್ಷದ ದಿಕ್ಕಿಗಿರುತ್ತವೆ.
ಪುಷ್ಪಮಂಜರಿ/ಹೂಗಳು : ಹೂಗಳು ಅಕ್ಷಾಕಂಕುಳಿನಲ್ಲಿದ್ದು ತೊಟ್ಟುರಹಿತ ಗುಚ್ಛಗಳಲ್ಲಿ ಅಥವಾ ಬಲಿತ ಕವಲುಗಳ ಮೇಲಿರುತ್ತವೆ.
ಕಾಯಿ /ಬೀಜ : ಸಂಪುಟ ಫಲಗಳು ಒಂದು ಬೀಜವನ್ನೊಳಗೊಂಡಿದ್ದು, ಅಂಡವೃತ್ತಾಕಾರದಲ್ಲಿದ್ದು ಶಾಶ್ವತವಾದ ಶಲಾಕೆಯ ಸಮೇತವಾಗಿರುತ್ತವೆ.

ಜೀವಪರಿಸ್ಥಿತಿ :

ಅತಿ ಎತ್ತರದ (1800 ರಿಂದ 2400 ಮೀ) ಪ್ರದೇಶಗಳ ನಿತ್ಯಹರಿದ್ವರ್ಣ ಕಾಡುಗಳ ಮೇಲ್ಛಾವಣಿಯ ಸಸ್ಯವಾಗಿ ಈ ಪ್ರಭೇದ ಕಂಡು ಬರುತ್ತದೆ.

ವ್ಯಾಪನೆ :

ಭಾರತ ಮತ್ತು ಶ್ರೀಲಂಕಾ: ಪಶ್ಚಿಮ ಘಟ್ಟ ಪ್ರದೇಶದಲ್ಲಿನ ನೀಲಗಿರಿ,ಅಣ್ಣಾಮಲೈ ಮತ್ತು ಪಳನಿಬೆಟ್ಟಗಳಲ್ಲಿ ಸಾಮಾನ್ಯವಾಗಿ ವ್ಯಾಪಿಸಿದೆ.

ಗ್ರಂಥ ಸೂಚಿ :

Wt. Ic.t. 977. 1845; Gamble, Fl. Madras 1:206.1997(re.ed.); Sasidharan, Biodiversity documentation for Kerala-Flowering Plants, part 6:97.2004.

Top of the Page