ನೋತೋಪೀಜಿಯ ರೆಸಿಮೋಸ (Dalz.) Ramam. - ಅನಕಾರ್ಡಿಯೇಸಿ

Synonym : ಗ್ಲೈಸಿಕಾರ್ಪಸ್ ರೆಸಿಮೋಸಸ್ Dalz.; ಮೋತಪೀಜಿಯ ಡಾಲ್ಜೆಲ್ಲಿಯೈ var. ಅಂಗುಸ್ಟಿಫೋಲಿಯ Gamble

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ಈ ಪ್ರಭೇಧವು 15 ಮೀ ಎತ್ತರದವರೆಗೂ ಬೆಳೆಯುವ ಮರಗಳಾಗಿರುತ್ತವೆ.
ಕಾಂಡ ಮತ್ತು ತೊಗಟೆ : ತೊಗಟೆಯು ಸೂಕ್ಷ್ಮವಾದ ಸೀಳಿಕೆಗಳನ್ನು ಹೊಂದಿದ್ದು ಕಂದು ಬಣ್ಣದ ಕಚ್ಚುಗಳನ್ನೊಳಗೊಂಡಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದೃಢವಾಗಿದ್ದು, ರೋಮರಹಿತವಾಗಿರುತ್ತವೆ.
ಜಿನುಗು ದ್ರವ : ಜಿನುಗುದ್ರವ ವಿರಳ ಹಾಗೂ ಕಪ್ಪು ಬಣ್ಣದ್ದಾಗಿರುತ್ತದೆ.
ಎಲೆಗಳು : ಎಲೆಗಳು ಸರಳರೂಪಿ. ಪರ್ಯಾಯ ಹಾಗೂ ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ಎಲೆತೊಟ್ಟು 1 – 2.7 ಸೆ.ಮೀ ಉದ್ದವಿದ್ದು, ದೃಢ ಹಾಗೂ ರೋಮರಹಿತವಾಗಿದ್ದು ಸಾಮಾನ್ಯವಾಗಿ ತಿರುಚಿಕೊಂಡಿರುತ್ತದೆ; ಪತ್ರ ಚತುರಸ್ರಾಕಾರದಿಂದ ಬುಗುರಿ – ಈಟಿ ಸಮ್ಮಿಶ್ರಾಕಾರದಲ್ಲಿದ್ದು, ಕ್ರಮೇಣ ಚೂಪಾಗುವ ಎಲೆತುದಿ ಮತ್ತು ಚೂಪಾದ ಎಲೆ ಬುಡ, ಅಲೆಯಾಕಾರದ ಅಂಚು, ತೊಗಲಿನಂತಹ ಮೇಲ್ಮೈ ಹೊಂದಿದ್ದು ರೋಮರಹಿತವಾಗಿರುತ್ತದೆ; ಎಲೆಯ ತಳಭಾಗದ ಬೂದು ಹಸಿರು ಬಣ್ಣದಲ್ಲಿರುತ್ತದೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಕೊಂಚ ಉಬ್ಬಿಕೊಂಡಿರುತ್ತದೆ; ಎರಡನೇ ದರ್ಜೆಯ ನಾಳಗಳು 9 ರಿಂದ 25 ಜೋಡಿಗಳಿದ್ದು ಸಮಾಂತರದಲ್ಲಿರುತ್ತವೆ; ಮೂರನೇ ದರ್ಜೆಯ ನಾಳಗಳು ದುರ್ಬಲವಾಗಿ ಎಲೆದಿಂಡಿಗೆ ಅಡ್ಡವಾಗಿ ಕೂಡುತ್ತವೆ.
ಪುಷ್ಪಮಂಜರಿ/ಹೂಗಳು : ಹೂಗಳು ಸಂಕೀರ್ಣ ಲಿಂಗಿಗಳಾಗಿದ್ದು ಅಕ್ಷಾಕಂಕುಳಿನಲ್ಲಿರುವ, 2 ರಿಂದ 4 ಸೆಮೀ ಉದ್ದದ, ಕಿಲುಬು ಬಣ್ಣದ ಮೃದು ತುಪ್ಪಳವನ್ನು ಹೊಂದಿರುವ ಅನಿಯತ ಮಧ್ಯಭಿಸರ ಪುಷ್ಪಮಂಜರಿಯಲ್ಲಿ ಇರುತ್ತವೆ.
ಕಾಯಿ /ಬೀಜ : ಕಾಯಿಗಳು ಡ್ರೂಪ್ ಮಾದರಿಯಲ್ಲಿದ್ದು 1 X 1.5 ಸೆಂ.ಮೀ. ಗಾತ್ರ, ಧೃವ ಚಪ್ಪಟೆ ಆಕಾರವಿದ್ದು, ಕಾಯಿಗಳ ತುದಿಯಲ್ಲಿ ಸೂಕ್ಷ್ಮವಾದ ಮೊನಚು ಮುಳ್ಳುನ್ನು ಹೊಂದಿರುತ್ತವೆ. ಕಾಯಿಗಳ ಬಣ್ಣ ಕೆಂಪು. ಬೀಜಗಳ ಸಂಖ್ಯೆ ಒಂದು.

ಜೀವಪರಿಸ್ಥಿತಿ :

ಈ ಪ್ರಭೇಧ ಕಡಿಮೆ ಎತ್ತರದಲ್ಲಿರುವ ನಿತ್ಯಹರಿದ್ವರ್ಣದಿಂದ ುಪ-ನಿತ್ಯಹರಿದ್ವರ್ಣ ಹಾಗೂ ಎರಡನೇ ದರ್ಜೆಯ ತೇವಾಂಶವುಳ್ಳ ಎಲೆಯುದುರು ಕಾಡುಗಳ ಒಳಛಾಚಣಿಯಲ್ಲಿ ಬೆಳೆಯುತ್ತವೆ.

ವ್ಯಾಪನೆ :

ಭಾರತ ಮತ್ತು ಶ್ರೀಲಂಕಾ; ಪಶ್ಚಿಮ ಘಟ್ಟದಲ್ಲಿ ಈ ಪ್ರಭೇಧ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿ ಪ್ರದೇಶಗಳಲ್ಲಿ ಬೆಳೇಯುತ್ತವೆ.

ಗ್ರಂಥ ಸೂಚಿ :

J. As. Soc. Bombay 3:69.1849; Gamble, Fl. Madras 1: 265.1997 (re.ed); Saldanha, Fl. Karnataka 2: 207. 1996.; Sasidharan, Biodiversity documentation for Kerala- Flowering Plants, part 6: 113. 2004

Top of the Page