ನೋತೋಪೀಜಿಯ ಟ್ರವಂಕೂರಿಕ Bedd. ex J. Hk. - ಅನಕಾರ್ಡಿಯೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ಚಿಕ್ಕಗಾತ್ರದಲ್ಲಿರುವ ಈ ಮರಗಳು 5 ಮೀ ಎತ್ತರದವರೆಗೂ ಬೆಳೆಯುತ್ತವೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ತೆಳುವಾಗಿದ್ದು ಕಿಲುಬು ಬಣ್ಣದ ಮೃದು ತುಪ್ಪಳದಿಂದ ಆವೃತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು, ಪರ್ಯಾಯ ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ. ಎಲೆ ತೊಟ್ಟುಗಳು 0.5 ರಿಂದ 1.5ಸೆ.ಮೀ. ಉದ್ದವಿದ್ದು ಕಾಲುವೆಯಾಕಾರದ ಗೆರೆ ಹೊಂದಿದ್ದು, ಮೃದು ತುಪ್ಪಳದಿಂದ ಕೂಡಿರುತ್ತವೆ. ಎಲೆ ಪತ್ರ 1-22 × 2-5 ಸೆ.ಮೀ. ಗಾತ್ರ, ಅಂಡವೃತ್ತ – ದೀರ್ಘ ಚತುರಸ್ರಾಕಾರದಿಂದ ಬುಗುರಿ-ಈಟಿ ಸಮ್ಮಿಶ್ರದ ಆಕಾರ ಹೊಂದಿದ್ದು ಕ್ರಮೇಣವಾಗಿ ಚೂಪಾಗುವದರಿಂದ ಹಿಡಿದು ಬಾಲರೂಪದ ತುದಿ, ಹಾಗೂ ಚೂಪಾದ ಬುಡವನ್ನೊಳಂಡಿರುತ್ತದೆ; ಅಂಚು ಅಲೆಯಾಕಾರದಲ್ಲಿದ್ದು, ಸ್ಪಂದನಾಶೀಲ ಕೂದಲುಗಳನ್ನು ಹೊಂದಿರುತ್ತದೆ. ಪತ್ರ ತೊಗಲಿನಂತಹ, ಮೇಲ್ಮೈ ಹೊಂದಿದ್ದು, ತಳಭಾಗ ಬೂದು ಹಸಿರಾಗಿರುತ್ತದೆ. ಮಧ್ಯನಾಳ ಚಪ್ಪಟೆಯಾಗಿ ಅಥವಾ ತೆಳುವಾಗಿ ಉಬ್ಬಿರುತ್ತದೆ. ಎರಡನೇ ದರ್ಜೆಯ ನಾಳಗಳು 20-30 ಜೋಡಿಗಳಿದ್ದು, ಎದ್ದು ಕಾಣುವಂತಹವುಗಳಾಗಿದ್ದು ಬಹುಪಾಲು ಸಮಾಂತರದಲ್ಲಿರುತ್ತವೆ; ತೃತೀಯ ದರ್ಜೆಯ ನಾಳಗಳು ಎಲೆದಿಂಡಿಗೆ ಅಡ್ಡವಾಗಿ ಕೂಡುತ್ತವೆ.
ಪುಷ್ಪಮಂಜರಿ/ಹೂಗಳು : ಪುಷ್ಪಮಂಜರಿ ಅಕ್ಷಾ ಕಂಕುಳಿನಲ್ಲಿ ಅಥವಾ ಅಗ್ರ-ಅಕ್ಷಾಕಂಕುಳಿನಲ್ಲಿರುವ ಅನಿಯತ ಮಧ್ಯಾಭಿಸರ ಮಾದರಿಯಲ್ಲಿದ್ದು ಸಂಕೀರ್ಣಲಿಂಗಿಯಾದ ಬಿಳಿಬಣ್ಣದ ಹೂಗಳನ್ನು ಹೊಂದಿರುತ್ತವೆ.
ಕಾಯಿ /ಬೀಜ : ಕಾಯಿಗಳು ಡ್ರೂಪ್ ಮಾದರಿಯವು. ಆಕಾರದಲ್ಲಿ ಧೃವ-ಚಪ್ಪಟೆಯಾಗಿದ್ದು ಉಬ್ಬು-ತಗ್ಗು ಗೆರೆಗಳನ್ನೊಳಗೊಂಡ ಮೇಲ್ಮೈ ಹಾಗೂ ಒಂದು ಬೀಜಗಳನ್ನೊಳಗೊಂಡಿದ್ದು, 1 ಸೆ.ಮೀ. ಉದ್ದವಿದ್ದು ರೋಮ ರಹಿತವಾಗಿರುತ್ತವೆ.

ಜೀವಪರಿಸ್ಥಿತಿ :

ಒಳ ಛಾವಣಿ ಮರಗಳಾಗಿ ಕಡಿಮೆ ಅಥವಾ ಮಧ್ಯಮ (ಸಮುದ್ರಮಟ್ಟಕ್ಕಿಂತ 1200ಮೀವರೆಗಿನ) ಎತ್ತರದ ಪ್ರದೇಶಗಳಲ್ಲಿರುವ, ತೇವಾಂಶವುಳ್ಳ ನಿತ್ಯಹರಿದ್ವರ್ಣದ ಕಾಡುಗಳಲ್ಲಿ ಈ ಸಸ್ಯ ಬೆಳೆಯುತ್ತವೆ.

ಗ್ರಂಥ ಸೂಚಿ :

Fl. Brit. Ind. 2: 40.1876; Gamble, Fl. Madras 1: 265.1997 (re.ed); Saldanha, Fl. Karnataka 2: 207-208. 1996.; Sasidharan, Biodiversity documentation for Kerala- Flowering Plants, part 6: 113. 2004

Top of the Page