ಓರೋಜೈಲಮ್ ಇಂಡಿಕಂ (L.) Benth. ex Kurz - ಬಿಗ್ನೋನಿಯೇಸಿ

Synonym : ಬಿಗ್ನೋನಿಯ ಇಂಡಿಕ L.

ಕನ್ನಡದ ಪ್ರಾದೇಶಿಕ ಹೆಸರು : ಅಲಂಗಿ, ಆನೆಮುಂಗು, ಬುನಪಾಲೆ, ಪರಗಣಿ, ಸೋನೆಪಟ್ಟ, ತಿಗಡೆ, ಬೇರು

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 12ಮೀ ಎತ್ತರದವರೆಗೆ ಬೆಳೆಯುವ ಸಣ್ಣ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕಂದು ಮಿಶ್ರಿತ ಬೂದು ಬಣ್ಣ ಹೊಂದಿದ್ದು, ಮೆದುವಾಗಿರುತ್ತದೆ, ಹಲವು ಸಂದರ್ಭದಲ್ಲಿ ವಾಯು ವಿನಿಮಯ ಬೆಂಡು ರಂಧ್ರಗಳನ್ನು ಹೊಂದಿರುತ್ತವೆ.
ಜಿನುಗು ದ್ರವ :
ಎಲೆಗಳು : ಎಲೆಗಳು ದ್ವಿಗರಿ-ತ್ರಿಗರಿರೂಪಿ ಸಂಯುಕ್ತ ಮಾದರಿಯಲ್ಲಿದ್ದು ಗರಿಗಳು ಅಭಿಮುಖಿ-ಗಳಾಗಿರುತ್ತವೆ. ಗರಿಗಳು ದೊಡ್ಡ ಗಾತ್ರದವುಗಳಾಗಿದ್ದು 90 ರಿಂದ 150ಸೆಂ.ಮೀ. ಉದ್ದವಿದ್ದು ಬಹುಮಟ್ಟಿಗೆ ತ್ರಿಕೋಣಾಕಾರದ ರೂಪರೇಖೆಯನ್ನು ಹೊಂದಿರುತ್ತದೆ. ಪ್ರಮುಖ ಅಕ್ಷದಿಂಡು ಧೃಡವಾಗಿದ್ದು ವರ್ತುಲ ಸ್ಥಂಭಾಕೃತಿಯಲ್ಲಿರುತ್ತವೆ. ಎರಡನೇ ಹಾಗೂ ಮೂರನೇ ದರ್ಜೆಯ ಅಕ್ಷಕಾಂಡಗಳು ಉಬ್ಬುಸಾಲಿನ ಗುರುತುಗಳನ್ನು ಹೊಂದಿರುತ್ತವೆ; ಎಲೆಯ ಕಿರುತೊಟ್ಟುಗಳು 5.5ಸೆಂ.ಮೀ. ಉದ್ದವಿದ್ದು ಉಬ್ಬು ಸಾಲಿನ ಗುರುತುಗಳನ್ನು ಹೊಂದಿರುತ್ತವೆ. ಕೆರು ಎಲೆಗಳು 3 ರಿಂದ 4 ಜೋಡಿಗಳಿದ್ದು ಅಗ್ರದಲ್ಲಿ ಒಂದು ಕಿರು ಎಲೆ ಸಮೇತವಿರುತ್ತವೆ ಹಾಗೂ ಅಭಿಮುಖಿಗಳಾಗಿರುತ್ತವೆ; ಪತ್ರಗಳು 7 ರಿಂದ 17 ಸೆಂ.ಮೀ. ಉದ್ದ ಹಾಗೂ 3.5 ರಿಂದ 10ಸೆಂ.ಮೀ. ಅಗಲ ಹೊಂದಿದ್ದು ಅಂಡಾಕಾರ ಅಥವಾ ಅಂಡವೃತ್ತಾಕೃತಿಯಲ್ಲಿದ್ದು ಬಾಲರೂಪಿ-ಕ್ರಮೇಣ ಚೂಪಾಗುವ ತುದಿ, ಗುಂಡಾದ ಅಥವಾ ಅಸಮ್ಮಿತಿಯಾದ ಬುಡ ಹೊಂದಿರುತ್ತದೆ ಹಾಗೂ ನಯವಾದ ಅಂಚು ಕಾಗದವನ್ನೋಲುವ ಹಾಗೂ ರೋಮ-ರಹಿವಾದ ಮೇಲ್ಮೈ ಹೊಂದಿರುತ್ತವೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಚಪ್ಪಟೆಯಾಗಿ-ರುತ್ತದೆ; ಒಂದರಿಂದ ಎರಡು ಜೋಡಿ ಎರಡನೇ ದರ್ಜೆಯ ನಾಳಗಳು ಪತ್ರದ ಬುಡ ಭಾಗದಿಂದ ಉದಯಿಸುತ್ತವೆ; ಮೂರನೇ ದರ್ಜೆಯ ನಾಳಗಳು ವಿಶಾಲವಾದ ಜಾಲಬಂಧ ನಾಳವಿನ್ಯಾಸದವು.
ಪುಷ್ಪಮಂಜರಿ/ಹೂಗಳು : ಹೂಗಳು ತುದಿಯಲ್ಲಿನ ಮಧ್ಯಾಭಿಸರ ಮಂಜರಿಯಲ್ಲಿರುತ್ತವೆ ಹಾಗೂ ಗಾತ್ರದಲ್ಲಿ ದೊಡ್ಡದಾಗಿರುತ್ತವೆ. ಹೂಗಳು ಕೆಂಪುಮಿಶ್ರಿತ ಕೆನ್ನೀಲಿ ಬಣ್ಣದವುಗಳಾಗಿದ್ದು ನಸುಗೆಂಪು ಮಿಶ್ರಿತ ಹಳದಿ ಬಣ್ಣದ ಒಳಾವರಣವನ್ನು ಹೊಂದಿರುತ್ತವೆ,
ಕಾಯಿ /ಬೀಜ : ಕಾಯಿಗಳು ಸಂಪುಟ ಫಲ ಮಾದರಿಯಲ್ಲಿದ್ದು ಹಾಗೂ 30 ರಿಂದ 90 ಸೆಂ.ಮೀ. ಉದ್ದವನ್ನು ಹೊಂದಿದ್ದು ಚಪ್ಪಟೆಯಾಗಿದ್ದು, ಕೆನ್ನೀಲಿ ಕಂದುಬಣ್ಣ ಮತ್ತು ಹಲವಾರು ಬೀಜಗಳ -ನ್ನೊಳಗೊಂಡಿರುತ್ತವೆ. ಬೀಜಗಳು ಚಪ್ಪಟೆಯಾಗಿದ್ದು ವಿಶಾಲವಾದ, ಪಾರದರ್ಶಕದವಾದ ತೆಳ್ಳನೆಯ ಪೊರೆಯಿಂದ ಆವೃತವಾಗಿರುತ್ತವೆ.

ಜೀವಪರಿಸ್ಥಿತಿ :

800ಮೀ ಎತ್ತರದ ಪ್ರದೇಶಗಳ ನಿತ್ಯಹರಿದ್ವರ್ಣ ಮತ್ತು ತೇವಾಂಶವುಳ್ಳ ಎಲೆಯುದುರು ಮಾದರಿಯ ಕಾಡುಗಳ ಅಂಚಿನಲ್ಲಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ಇಂಡೋಚೀನಾ ಮತ್ತು ಇಂಡೋಮಲೇಶಿಯಾ; ಪಶ್ಚಿಮ ಘಟ್ಟ: ದಕ್ಷಿಣದಿಂದ ಮಧ್ಯ ಮತ್ತು ದಕ್ಷಿಣ ಮಹಾರಾಷ್ಟ್ರದ ಸಹ್ಯಾದ್ರಿ ಮತ್ತು ಪಶ್ಚಿಮ ಕರಾವಳಿ ಪ್ರದೇಶಗಳು.

ಗ್ರಂಥ ಸೂಚಿ :

For. Fl. Burma 2: 237.1877; Gamble, Fl. Madras 2: 994.1997 (re.ed); Sasidharan, Biodiversity documentation for Kerala- Flowering Plants, part 6: 334. 2004; Keshava Murthy and Yoganarasimhan, Fl. Coorg (Kodagu) 321. 1990. Cook, Fl. Bombay 2. 327. 1902.

Top of the Page