ಓಟೊನೆಫೀಲಿಯಮ್ ಸ್ಟಿಪ್ಯುಲಾಸಿಮ್ (Bedd.) Radlk. - ಸ್ಯಾಪಿಂಡೇಸಿ

ಪರ್ಯಾಯ ನಾಮ : ನೆಫೀಲಿಯಮ್ ಸ್ಟಿಪ್ಯುಲಾಸಿಯಮ್ Bedd.

Vernacular names : Tamil: ಪೊರಿಪೂವಂ,ಪವಿರಿ ಮುಲೀ,ಕಲ್ಪೂವತ್ತಿ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 28 ಮೀ ಎತ್ತರದವರೆಗಿನ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕಂದು ಬಣ್ಣದಲ್ಲಿದ್ದು ನಯವಾಗಿರುವುದರಿಂದ ಬಲಿತಾಗ ಅನಿಯತವಾಗಿ ಚಕ್ಕೆಯೇಳುವರೆಗಿನ ರೀತಿಯಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ಕೋನಯುಕ್ತವಾಗಿದ್ದು ,ಕೊಂಚ ಮಟ್ಟಿಗೆ ಮೃದು ತುಪ್ಪಳದಿಂದ ಕೂಡಿದ್ದು,ನಂತರ ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸಂಯುಕ್ತವಾಗಿದ್ದು ಸಾಮಾನ್ಯವಾಗಿ ಸಮಗರಿ ರೂಪಿಗಳಾಗಿರುತ್ತವೆ, ಕೆಲವೊಮ್ಮೆ ಅಸಮಗರಿ ರೂಪಿಗಳಾಗಿರುತ್ತವೆ,40 ಸೆಂ.ಮೀ.ಉದ್ದ ಹೊಂದಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ;ಅಕ್ಷದಿಂಡು ಕೋನಯುಕ್ತವಾಗಿರುತ್ತದೆ,ಉಬ್ಬಿದ ಬುಡದ ಸಮೇತವಿದ್ದು,ರೋಮರಹಿತವಾಗಿರುತ್ತದೆ;ಉಪತೊಟ್ಟು 0.3 ರಿಂದ 0.6 ಸೆಂ.ಮೀ.ಉದ್ದವಿದ್ದು, ದೃಢವಾಗಿದ್ದು,ಎಳೆಯದಾಗಿದ್ದಾಗ ಸೂಕ್ಷ್ಮ ಮೃದುತುಪ್ಪಳದಿಂದ ಕೂಡಿರುತ್ತದೆ; ಉಪಪತ್ರಗಳು 3 ರಿಂದ 6 ಜೋಡಿಗಳಿದ್ದು, ಅಭಿಮುಖಿ,ಉಪ ಅಭಿಮುಖಿ ಅಥವಾ ಪರ್ಯಾಯ ರೀತಿಯಲ್ಲಿ ಜೋಡಣೆಯಾಗಿರುತ್ತವೆ;ತೀರಾ ಕೆಳಗಿನ ಉಪಪತ್ರಗಳು ಕಾವಿನೆಲೆಗಳನ್ನು ಹೋಲುತ್ತವೆ,ತೊಟ್ಟುರಹಿತವಾಗಿರುತ್ತವೆ ಹಾಗೂ ವಿಶಾಲವಾದ ಮೂತ್ರಪಿಂಡದ ಆಕಾರದಲ್ಲಿರುತ್ತವೆ;ಪತ್ರಗಳು 8-18(-26) X 5-8.5(-10.5) ಸೆಂ.ಮೀ. ಗಾತ್ರ ಹೊಂದಿದ್ದು,ಅಂಡವೃತ್ತ-ಚತುರಸ್ರದ ಆಕಾರ,ದುಂಡಾಗಿರುವುದರಿಂದ ಕ್ರಮೇಣ ಚೂಪಾಗುವವರೆಗಿನ ಮಾದರಿಯ ತುದಿ, ಅಸಮ್ಮಿತಿಯಾದ ಅಥವಾ ಸ್ವಲ್ಪಮಟ್ಟಿಗೆ ಒಳಬಾಗಿದ ಬುಡ,ನಯವಾದ ಅಂಚು,ತೊಗಲನ್ನೋಲುವ ಮೇಲ್ಮೈ ಹೊಂದಿದ್ದು ತಳಭಾಗದಲ್ಲಿ ಮಾಸಲು ಬೂದು ಹಸಿರು ಬಣ್ಣವನ್ನು ಹೊಂದಿರುತ್ತವೆ;ಮಧ್ಯನಾಳ ಮೇಲ್ಭಾಗದಲ್ಲಿ ಕೊಂಚ ಮೇಲೆದ್ದಿರುತ್ತದೆ;ಎರಡನೇ ದರ್ಜೆಯ ನಾಳಗಳು 9 ರಿಂದ 12 ಜೋಡಿಗಳಿದ್ದು,ಬಹುಮಟ್ಟಿಗೆ ನೇರವಾಗಿದ್ದು,ಅಂಚಿನ ಬಳಿ ಬಾಗಿರುತ್ತವೆ ಹಾಗೂ ಅಕ್ಷಾಕಂಕುಳಿನಲ್ಲಿ ಸಹಜೀವಿ ಗೂಡುಗಳ ಸಮೇತವಿರುತ್ತವೆ;ಮೂರನೇ ದರ್ಜೆಯ ನಾಳಗಳು ಓರೆಯಾಗಿ ಮತ್ತು ಹೆಚ್ಚಿನ ಅಂತರವನ್ನೊಳಗೊಂಡು ಎಲೆ ದಿಂಡಿಗೆ ಅಡ್ಡವಾಗಿ ಕೂಡುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ಅಕ್ಷಾಕಂಕುಳಿನಲ್ಲಿನ ಮತ್ತು ತುದಿಯಲ್ಲಿನ ಪುನಾರಾವೃತ್ತಿಯಾಗಿ ಕವಲೊಡೆಯುವ ಮಧ್ಯಾಭಿಸರ ಮಾದರಿಯವು;ಹೂಗಳು ಸಂಕೀರ್ಣಲಿಂಗಿಗಳಾಗಿದ್ದು ಉಪತೊಟ್ಟುಗಳ ಸಮೇತವಿರುತ್ತವೆ.
ಕಾಯಿ / ಬೀಜ : ಡ್ರೂಪ್ಗಳು1 ರಿಂದ 3 ಮರಿಫಲಗಳನ್ನೊಳಗೊಂಡಿದ್ದು,ಅಂಡವೃತ್ತದ ಆಕಾರ ಹೊಂದಿರುತ್ತವೆ ಮತ್ತು ಕಂಟಕ ಚರ್ಮದ ಸಮೇತವಿರುತ್ತವೆ;ಬೀಜಗಳು 1 ರಿಂದ 2 ಇದ್ದು,ಕಂದು ಬಣ್ಣ ಹೊಂದಿದ್ದು ನಯವಾದ ಪತ್ರೆಯ ಸಮೇತವಿರುತ್ತವೆ.

ಜೀವಪರಿಸ್ಥಿತಿ :

1000 ಮೀ. ಎತ್ತರದ ಪ್ರದೇಶಗಳ ತೇವಾಂಶದಿಂದ ಕೂಡಿದ ನಿತ್ಯ ಹರಿದ್ವರ್ಣ ಕಾಡುಗಳ ಮೇಲ್ಛಾವಣಿ ಅಥವಾ ಉಪಮೇಲ್ಛಾವಣಿಯಲ್ಲಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಬೇಧ ದಕ್ಷಿಣ ಸಹ್ಯಾದ್ರಿ ಮತ್ತು ಮಧ್ಯ ಸಹ್ಯಾದ್ರಿ ಪ್ರದೇಶಗಳಲ್ಲಿ ಈ ಪ್ರಬೇಧ ವ್ಯಾಪಿಸಿದೆ.

ಗ್ರಂಥ ಸೂಚಿ :

Radlk., Sapindac. Holl. Ind. 71. 1879; Gamble, Fl. Madras 1: 252. 1997 (re. ed); Sasidharan, Biodiversity documentation for Kerala- Flowering Plants, part 6:109. 2004; Saldanha, Fl. Karnataka 2: 195. 1996.

Top of the Page