ಪಜನೆಲಿಯ ಲಾಂಜಿಫೋಲಿಯ (Willd.) K.Schum - ಬಿಗ್ನೋನಿಯೇಸಿ

Synonym : ಬಿಗ್ನೋನಿಯ ಲಾಂಜಿಫೋಲಿಯ Willd.; ಪಜನೆಲಿಯ ರೀಡಿಯೈ Wt.

ಕನ್ನಡದ ಪ್ರಾದೇಶಿಕ ಹೆಸರು : ಅಲಂಗಿ, ದೌಂಡಿ, ಮೊಕ್ಕುಡ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 30ಮೀ ಎತ್ತರಕ್ಕೆ ಬೆಳೆಯುವ ಎಲೆಯುದುರುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಚಕ್ಕೆಯುಕ್ತ ಮಾದರಿಯಲ್ಲಿದ್ದು ರೇಖಾತ್ಮಕ ವಾಯುವಿನಿಮಯ ಬೆಂಡುರಂಧ್ರಗಳನ್ನು ಹೊಂದಿರುತ್ತದೆ .ಕಚ್ಹು ಮಾಡಿದ ಜಾಗ ಶ್ವೇತ ಮಿಶ್ರಿತ ಕಂದು ಬಣ್ಣ ಹೊಂದಿರುತ್ತವೆ
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಕೃತಿಯವು. ಮೇಲ್ಮೈ ರೋಮರಹಿತವಾಗಿದ್ದು, ಬೆಂಡು ಮಾದರಿಹೊಂದಿದ್ದು ವಾಯುವಿನಿಮಯ ಬೆಂಡುರಂಧ್ರಗಳ ಸಮೇತವಿರುತ್ತವೆ.
ಜಿನುಗು ದ್ರವ :
ಎಲೆಗಳು : ಎಲೆಗಳು 120ಸೆಂ.ಮೀ. ವರೆಗಿನ ಉದ್ದ ಹೊಂದಿದ್ದು ಅಸಮ ಸಂಖ್ಯಾಸಂಯುಕ್ತ ಮಾದರಿಯವು; ಅಕ್ಷದಿಂಡು ತ್ರಿಕೋಣಾಕಾರವಾಗಿದ್ದು ರೋಮರಹಿತವಾಗಿರುತ್ತದೆ. ಕಿರುಎಲೆಗಳು ಅಭಿಮುಖಿಗಳು ಹಾಗೂ 9 ರಿಂದ 14 ಜೋಡಿಗಳಿದ್ದು ಅಗ್ರದಲ್ಲಿ ಒಂದು ಕಿರುಎಲೆ ಹೊಂದಿರುತ್ತವೆ. ಕಿರುತೊಟ್ಟು 0.6ಸೆಂ.ಮೀ. ಉದ್ದ; ಪತ್ರಗಳು 18 ರಿಂದ 24ಸೆಂ.ಮೀ. ಉದ್ದ, 3 ರಿಂದ 10 ಸೆಂ.ಮೀ. ಅಗಲವಿದ್ದು, ಅಂಡಾಕಾರವಾಗಿದ್ದು ತುದಿ ಕ್ರಮೇಣ ಚೂಪಾಗುವ ಮಾದರಿಯದಾಗಿದ್ದು. ಬುಡ ಅಸಮ್ಮಿತಿಯಾಗಿದ್ದು, ನಯವಾದ ಅಂಚು ಕಾಗದವನ್ನೋಲುವ ಹಾಗೂ ಮೇಲ್ಭಾಗದಲ್ಲಿ ಹೊಳಪನ್ನು ಮೇಲ್ಮೈ ಹೊಂದಿರುತ್ತವೆ ಹಾಗೂ ರೋಮರಹಿತವಾಗಿರುತ್ತವೆ; ಪ್ರಧಾನನಾಳ ಪತ್ರದ ಮೇಲ್ಭಾಗದಲ್ಲಿ ಚಪ್ಪಟೆಯಾಗಿ ಅಥವಾ ಲಘುವಾದ ಕಾಲುವೆಗೆರೆಗಳ ಸಮೇತವಿರುತ್ತದೆ; ಪತ್ರದ ಒಂದು ಭಾಗದ ಎರಡನೇ ದರ್ಜೆಯ ನಾಳಗಳು ಮತ್ತೊಂದು ಭಾಗದ ಎರಡನೇ ದರ್ಜೆಯ ನಾಳಗಳಿಗಿಂತ ಹೆಚ್ಚು ಚೂಪಾಗಿರುತ್ತವೆ. ತೃತೀಯ ದರ್ಜೆಯ ನಾಳಗಳು ವಿಶಾಲವಾದ ಜಾಲಬಂಧನಾಳ ವಿನ್ಯಾಸದಲ್ಲಿರುತ್ತವೆ.
ಪುಷ್ಪಮಂಜರಿ/ಹೂಗಳು : ಪುಷ್ಪ ಮಂಜರಿಗಳು ಕವಲೊಡೆದ ಮಧ್ಯಾಭಿಸರ ಮಾದರಿಯವು; ಹೂಗಳು ಹೊರ ಆವರಣದಲ್ಲಿ ಕೆನ್ನೀಲಿ ಬಣ್ಣವನ್ನೂ ಒಳಾವರಣದಲ್ಲಿ ಹಳದಿ ಬಣ್ಣವನ್ನೂ ಹೊಂದಿರುತ್ತದೆ. ಪುಷ್ಪದಳಗಳ ಅಂಚು ಉಣ್ಣೆಯಂತಹ ರೋಮಗಳ ಸಮೇತವಿರುತ್ತವೆ.
ಕಾಯಿ /ಬೀಜ : ಕಾಯಿಗಳು ಸಂಪುಟ ಫಲ ಮಾದರಿಯವು ಹಾಗೂ ಕಾಯಿಗಳು 30 ರಿಂದ 80 ಸೆಂ.ಮೀ. ಉದ್ದ, 6 ರಿಂದ 8 ಸೆಂ.ಮೀ. ಅಗಲವಿದ್ದು, ಕಂದುಬಣ್ಣ ಹೊಂದಿದ್ದು 2 ರೆಕ್ಕೆಗಳ ಸಮೇತವಿರುತ್ತದೆ. ಬೀಜಗಳು ಹಲವಾರು ಚಪ್ಪಟೆಯಾಗಿದ್ದು ಸೂಕ್ಷ್ಮ ಪೊರೆಯುಕ್ತ ರೆಕ್ಕೆಗಳ ಸಮೇತವಾಗಿರುತ್ತವೆ.

ಜೀವಪರಿಸ್ಥಿತಿ :

100ಮೀ ಎತ್ತರದ ಪ್ರದೇಶಗಳಲ್ಲಿನ ತೆರೆದ, ತೇವಾಂಶವುಳ್ಳ ನಿತ್ಯಹರಿದ್ವರ್ಣ ಕಾಡುಗಳಲ್ಲಿ ಹೊರಹೊಮ್ಮಿ ಕಾಣುವ ಪ್ರಬೇದ.

ವ್ಯಾಪನೆ :

ಭಾರತ ಮತ್ತು ಮ್ಯಾನ್ಮಾರ್; ಪಶ್ಚಿಮ ಘಟ್ಟದ ದಕ್ಷಿಣ ಮತ್ತು ಮಧ್ಯಸಹ್ಯಾದ್ರಿ ಪ್ರದೇಶಗಳು.

ಗ್ರಂಥ ಸೂಚಿ :

Engler & Prantl, Planzenf. 4(3b): 244.1895; Gamble, Fl. Madras 2: 1000.1997 (re.ed); Sasidharan, Biodiversity documentation for Kerala- Flowering Plants, part 6: 334. 2004; Keshava Murthy and Yoganarasimhan, Fl. Coorg (Kodagu) 321. 1990. Cooke, Fl. Bombay 2. 333. 1902.

Top of the Page