ಫೋಬೆ ಪ್ಯಾನಿಕ್ಯುಲೇಟ Nees - ಲಾರೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 15 ಮೀ.ವರೆವಿಗೆ ಬೆಳೆಯುವ ಮರಗಳು.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ತೊಟ್ಟುಗಳು 1 - 2 ಸೆಂ.ಮೀ. ಉದ್ದ ಹೊಂದಿದ್ದು ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯದ ಆಕಾರದಲ್ಲಿರುತ್ತವೆ ಮತ್ತು ಎಳೆಯದಾಗಿದ್ದಾಗ ಬೂದು ಬಣ್ಣದ ಮೃದು ತುಪ್ಪಳದಿಂದ ಕೂಡಿರುತ್ತವೆ;ಪತ್ರಗಳು 9-21 X 4-9 ಸೆಂ.ಮೀ.ವರೆಗಿನ ಗಾತ್ರ ಹೊಂದಿದ್ದು ಸಾಮಾನ್ಯವಾಗಿ ಬುಗುರಿ-ಭರ್ಜಿಯ ಆಕಾರ ಹೊಂದಿರುತ್ತವೆ;ಪತ್ರಗಳು ಥಟ್ಟನೆ ಕ್ರಮೇಣ ಚೂಪಾಗುವ ಮತ್ತು ಉದ್ದ ಹೊಂದಿದ ತುದಿ ಮತ್ತು ಬೆಣೆಯಾಕಾರದ ಎಲೆಯ ಬುಡ ವನ್ನು ಹೊಂದಿರುತ್ತವೆ ;ಪತ್ರದ ತಳ ಭಾಗ ಕನಿಷ್ಟ ಪಕ್ಷ ಎಳೆಯದಾಗಿರುವಾಗಲಾದರೂ ಬೂದು ಬಣ್ಣದ ಮೃದು ತುಪ್ಪಳವನ್ನು ಹೊಂದಿರುತ್ತವೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಸ್ವಲ್ಪ ಉಬ್ಬಿರುತ್ತದೆ; ಎರಡನೇ ದರ್ಜೆಯ ನಾಳಗಳು ಅಂದಾಜು 7 ಜೋಡಿಗಳಿರುತ್ತವೆ;ಮೂರನೇ ದರ್ಜೆಯ ನಾಳಗಳು ಅಂತರ ಹೊಂದಿದ್ದು ಎಲೆ ದಿಂಡಿಗೆ ಅಡ್ಡವಾಗಿ ಕೂಡುತ್ತವೆ .
ಪುಷ್ಪಮಂಜರಿ/ಹೂಗಳು : ಪುಷ್ಪಮಂಜರಿ ಅಕ್ಷಾಕಂಕುಳಿನಲ್ಲಿರುವ ತೆಳುವಾಗಿರುವ ಪುನರಾವೃತ್ತಿಯಾಗಿ ಕವಲೊಡೆಯುವ ಮಾದರಿಯಲ್ಲಿರುತ್ತವೆ ಮತ್ತು ಬೂದು ಬಣ್ಣದ ಮೃದು ತುಪ್ಪಳದಿಂದ ಕೂಡಿರುತ್ತದೆ.
ಕಾಯಿ /ಬೀಜ : ಬೆರ್ರಿ ಅಂಡಾಕಾರದಲ್ಲಿದ್ದು 1 ಸೆಂ.ಮೀ.ಅಡ್ಡಗಳತೆ ಹೊಂದಿರುತ್ತದೆ;ಬೀಜ 1.

ಜೀವಪರಿಸ್ಥಿತಿ :

1200 ಮತ್ತು 1500 ಮೀ. ನಡುವಿನ ಕಡಿಮೆ ಮತ್ತು ಉನ್ನತ ಎತ್ತರದ ಪ್ರದೇಶಗಳ ನಿತ್ಯ ಹರಿದ್ವರ್ಣ ಕಾಡುಗಳ ಮೇಲ್ಛಾವಣಿಯಲ್ಲಿ ಈ ಪ್ರಭೇದ ಕಂಡುಬರುತ್ತದೆ.

ವ್ಯಾಪನೆ :

ಭಾರತ ಮತ್ತು ಮ್ಯಾನ್ಮಾರ್; ಪಶ್ಚಿಮ ಘಟ್ಟದಲ್ಲಿ ಈ ಸಸ್ಯ ಪಳನಿ ಬೆಟ್ಟ ಪ್ರದೇಶಗಳಲ್ಲಿ ವ್ಯಾಪಿಸಿದೆ.

ಗ್ರಂಥ ಸೂಚಿ :

DC., Prodr. 15:38.1864;Gamble, Fl. Madras 2:1228.1993 (rep.ed.).

Top of the Page