ಪಿನಂಗ ಡಿಕ್ಸೋನಿಯೈ (Roxb.) Bl. - ಅರೆಕೇಸಿ

ಕನ್ನಡದ ಪ್ರಾದೇಶಿಕ ಹೆಸರು : ಕಂಗು, ಕಾಟಡಿಕೆ, ಕಾಡಡಿಕೆ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 5ಮೀ ಎತ್ತರದವರೆಗೆ ಬೆಳೆಯುವ ತಾಳೆ ಅಥವಾ ತೆಂಗು ಸಂಬಂಧಿ ಮರ. ಕಾಂಡವು ವಲಯಾಕಾರದ ಎಲೆಯುದುರಿದ ಗುರುತು ಸಮೇತವಿರುತ್ತದೆ. ಹುಗಳು ಏಕಲಿಂಗಿಗಳಾಗಿದ್ದು ಒಂದೇ ಸಸ್ಯದಲ್ಲಿ ಕಾಣಿಸಿಕೊಳ್ಳುತ್ತವೆ.
ಜಿನುಗು ದ್ರವ :
ಎಲೆಗಳು : ಎಲೆಗಳು ಸಂಯುಕ್ತ ಗರಿ ರೂಪಿಗಳಾಗಿದ್ದು 1.5ಮೀ ವರೆಗಿನ ಉದ್ದ ಹೊಂದಿರುತ್ತದೆ. ಒರೆಯ ಉದ್ದ 30ಸೆಂ.ಮೀ. ನವರೆಗಿರುತ್ತದೆ; ಕಿರುಪತ್ರಗಳು 50ಸೆಂ.ಮೀ. ಉದ್ದ 3ಸೆಂ.ಮೀ. ಅಗಲ ಹೊಂದಿದ್ದು ರೇಖಾತ್ಮಕ-ಭರ್ಜಿ ಆಕಾರದಲ್ಲಿದ್ದು ಅಭಿಮುಖಗಳಾಗಿರುತ್ತವೆ ಹಾಗೂ ರೋಮರಹಿತವಾಗಿರುತ್ತವೆ. ಪತ್ರಗಳ ತುದಿ ಮುರಿದುಹಾಕಿದ ಕೊನೆಯಂತೆ ತೋರುತ್ತದೆ.
ಪುಷ್ಪಮಂಜರಿ/ಹೂಗಳು : ಪುಷ್ಪಮಂಜರಿಯ ಉದ್ದ 35 ಸೆಂ.ಮೀ. ನವರೆಗಿರುತ್ತದೆ.
ಕಾಯಿ /ಬೀಜ : ಕಾಯಿಗಳು ಡ್ರೂಪ್ ಮಾದರಿಯವು, ಬೀಜಗಳು ಅಥವಾ ಅಂಡವೃತ್ತಾಕೃತಿ ಹೊಂದಿದ್ದು ರೂಮಿನೇಟ್ ಮಾದರಿ ಹೊಂದಿರುತ್ತವೆ.

ಜೀವಪರಿಸ್ಥಿತಿ :

ನಿತ್ಯ ಹರಿದ್ವರ್ಣ ಕಾಡುಗಳಲ್ಲಿನ ತೇವಾಂಶವುಳ್ಳ ಜಾಗಗಳಲ್ಲಿ ಸ್ಥಳೀಯವಾಗಿ ಹಾಗೂ ಸಾಮಾನ್ಯವಾಗಿ ಈ ಪ್ರಬೇಧ ಕಂಡುಬರುತ್ತವೆ.

ವ್ಯಾಪನೆ :

ಪಶ್ಚಿಮ ಘಟ್ಟ ಪ್ರದೇಶಗಳಿಗೆ ಸೀಮಿತ-ದಕ್ಷಿಣ ಹಾಗೂ ಮಧ್ಯ ಸಹ್ಯಾದ್ರಿ ಪ್ರದೇಶಗಳು.

ಗ್ರಂಥ ಸೂಚಿ :

Blume, Rumph. 2: 85. 1838; Gamble, Fl. Madras 3: 1556.1998 (re.ed); Cooke, Fl. Bombay 1:803. 1902; Sasidharan, Biodiversity documentation for Kerala- Flowering Plants, part 6: 507. 2004.

Top of the Page