ಪಾಲಿಯಾಲ್ತಿಯ ಕಾಫಿಯಾಯ್ಡಿಸ್ (Thw.) J. Hk. & Thoms. - ಅನೋನೇಸಿ

Synonym : ಗ್ವಟ್ಟೇರಿಯ ಕಾಫಿಯಾಯ್ಡಿಸ್ Thw.

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 20ಮೀ ವರೆವಿಗೂ ಬೆಳೆಯುವ ಮರಗಳು
ಕವಲುಗಳು ಮತ್ತು ಕಿರುಕೊಂಬೆಗಳು : ಕಾಂಡ ಗುಬುಟಗಳ ಸಮೇತವಾಗಿರುತ್ತವೆ. ತೊಗಟೆ ನಯಬಾಗಿದ್ದು, ಕೆನೆ ಬಣ್ಣದ ಕಚ್ಚುಗಳಿರುತ್ತವೆ. ಕಿರುಕೊಂಬೆಗಳು ಮೃದು ತುಪ್ಪಳ ಸಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳ, ಪರ್ಯಾಯ ವ್ಯವಸ್ಥೆಯಲ್ಲಿದ್ದು ಕಾಂಡದ ಎರಡೂ ಕಡೆ ಎದುರು ಬದರಿನ ಲಂಬ ಸಾಲಿನಲ್ಲಿರುತ್ತವೆ. ಎಲೆ ತೊಟ್ಟು 0.6 ರಿಂದ 1ಸೆಂ.ಮೀ. ಉದ್ದವಿದ್ದು ಧೃಢವಾಗಿರುತ್ತದೆ. ಎಲೆಪತ್ರ 10-27 × 3.5-8.5 ಸೆಂ.ಮೀ. ಗಾತ್ರ, ಸಾಮಾನ್ಯವಾಗಿ ಭರ್ಜಿಯ ಆಕಾರದಲ್ಲಿರುತ್ತದೆ. ಕೆಲವು ವೇಳೆ ಅಂಡವೃತ್ತಾಕೃತಿಯಲ್ಲಿರುತ್ತದೆ. ಎಲೆಯ ತುದಿ ಕ್ರಮೇಣವಾಗಿ ಚೂಪಾಗುವ ಮಾದರಿಯಲ್ಲಿದ್ದು, ಸಾಮಾನ್ಯವಾಗಿ ಚೂಪಾದ ಎಲೆ ಬುಡವನ್ನು ಹೊಂದಿರುತ್ತದೆ. ಕೆಲವು ವೇಳೆ ಒಂದು ಬದಿಯಲ್ಲಿ ಓರೆಯಾಗಿರುತ್ತದೆ. ಅಂಚು ಅಲೆಯಾಕಾರದಲ್ಲಿದ್ದು ಪತ್ರದ ಮೇಲ್ಭಾಗ ಹೊಳಪನ್ನು ಹೊಂದಿರುತ್ತದೆ. ಎರಡನೇ ದರ್ಜೆಯ ನಾಳಗಳು 9 ರಿಂದ 16 ಜೋಡಿಗಳಿದ್ದು; ಆರೋಹಣ ಮಾದರಿಯವು; ತೃತೀಯ ದರ್ಜೆಯ ನಾಳಗಳು ದಾರದ ರೀತಿಯಿದ್ದು, ಎಲೆದಿಂಡಿಗೆ ಅಡ್ಡವಾಗಿ ಕೂಡುವಂತಹವು.
ಪುಷ್ಪಮಂಜರಿ/ಹೂಗಳು : ಹೂಗಳು ಒಂಟಿಯಾಗಿ ಅಥವಾ ಗುಚ್ಛವಾಗಿದ್ದು ಕಿರುಕೊಂಬೆಗಳ ಮತ್ತು ಕಾಂಡದ ಮೇಲಿನ ಗುಬುಟಗಳ ಮೇಲಿರುತ್ತವೆ. ಹೂಗಳು ಕೆಂಪು ಛಾಯೆಯುಳ್ಳ ಹಳದಿ ಬಣ್ಣದಲ್ಲಿರುತ್ತವೆ.
ಕಾಯಿ /ಬೀಜ : ಕಾಯಿಗಳು ಒಂದು ಬೀಜವುಳ್ಳ ಬೆರ್ರಿಗಳನ್ನೊಂಡ ಸಾಮೂಹಿಕವಾಗಿರುತ್ತವೆ.

ಜೀವಪರಿಸ್ಥಿತಿ :

ಕಡಿಮೆ ಅಥವಾ ಮಧ್ಯಮ ಎತ್ತರದ ಪ್ರದೇಶಗಳ ನಿತ್ಯಹರಿದ್ವರ್ಣ ಕಾಡುಗಳ ಉಪಮೇಲ್ಛಾವಣಿಯಲ್ಲಿ (ಮೂರನೇ ಸಮಗ್ರ ಸಮೂಹ) ಈ ಪ್ರಭೇದ ಬೆಳೆಯುತ್ತವೆ.

ವ್ಯಾಪನೆ :

ಪಶ್ಚಿಮ ಘಟ್ಟಗಳು (ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿ) ಮತ್ತು ಶ್ರೀಲಂಕೆ

ಗ್ರಂಥ ಸೂಚಿ :

Hooker, Fl. Brit. India 1: 62. 1872; Gamble, Fl. Madras 1: 16.1997 (re.ed); Sasidharan, Biodiversity documentation for Kerala- Flowering Plants, part 6: 19. 2004; Saldanha, Fl. Karnataka 1: 48. 1984; Keshava Murthy and Yoganarasimhan, Fl. Coorg (Kodagu) 33. 1990.

Top of the Page