ಪಾಲಿಯಾಲ್ತಿಯ ಫ್ರಾಗ್ರನ್ಸ್ (Dalz.) Bedd. - ಅನೋನೇಸಿ

Synonym : ಗ್ವಟ್ಟೇರಿಯ ಫ್ರಾಗ್ರನ್ಸ್ Dalz.

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 30ಮೀ ಎತ್ತರದವರೆವಿಗೂ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ನಯವಾಗಿದ್ದು ಹಸಿರು ಮಿಶ್ರಿತ ಬೂದುಬಣ್ಣ ಹೊಂದಿರುತ್ತದೆ ; ಕಚ್ಚುಗಳು ನಸುಗೆಂಪು ಬಣ್ಣದವು.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ಗುಂಡಾಕಾರವಾಗಿದ್ದು, ಎಳೆಯದಾಗಿದ್ದಾಗ ಉಣ್ಣೆಯಂತಹ ರೋಮದಿಂದ ಕೂಡಿರುತ್ತವೆ.
ಎಲೆಗಳು : ಎಲೆಗಳು ಸರಳ, ಪರ್ಯಾಯ ವ್ಯವಸ್ಥೆಯಲ್ಲಿದ್ದು ಕಾಂಡದ ಎರಡೂ ಕಡೆ ಎದುರು ಬದರಿನ ಲಂಬ ಸಾಲಿನಲ್ಲಿರುತ್ತವೆ. ಎಲೆ ತೊಟ್ಟು 0.4 ರಿಂದ 0.8 ಸೆಂ.ಮೀ. ಉದ್ದವಿದ್ದು ಧೃಢ ಹಾಗೂ ಸೂಕ್ಷ್ಮ ರೋಮವುಳ್ಳವುಗಳಾಗಿರುತ್ತವೆ. ಎಲೆಪತ್ರ 12-25 × 4-7.5ಸೆಂ.ಮೀ. ಗಾತ್ರ ಹೊಂದಿರುತ್ತವೆ. ಇಕ್ಕಟ್ಟಾದ ಧೀರ್ಘ ಚತುರಸ್ರಾಕಾರ, ಇಕ್ಕಟ್ಟಾದ ಅಂಡಾಕಾರ ಬುಗುರಿಯಾಕಾರ ಕೆಲವು ವೇಳೆ ಅಂಡವೃತ್ತಾಕೃತಿಯ ಆಕಾರಗಳ ವೈವಿಧ್ಯತೆಯಲ್ಲಿರುತ್ತವೆ. ಪತ್ರಗಳ ತುದಿ ಚೂಪಾದುದರಿಂದ ಕ್ರಮೇಣ ಚೂಪಾಗುವ ಮಾದರಿಯಲ್ಲಿರುತ್ತವೆ. ಪತ್ರದ ಬುಡ ಗುಂಡಾಕಾರದಲ್ಲಿರುತ್ತವೆ. ಕೆಲವು ವೇಳೆ ಅಸಮವಾಗಿರುತ್ತವೆ ; ಪತ್ರದ ಮೇಲ್ಭಾಗ ಹೊಳಪಾಗಿದ್ದು, ತಳಭಾಗದ ಮಧ್ಯನಾಳ ಸೂಕ್ಷ್ಮವಾದ ರೋಮಗಳಿಂದ ಕೂಡಿರುತ್ತದೆ. ಎರಡನೇ ದರ್ಜೆಯ ನಾಳಗಳು 15 ರಿಂದ 23 ಜೋಡಿಗಳಿದ್ದು ಪ್ರಾಮುಖ್ಯವಾಗಿ ಕಾಣುವಂತಹವು ಹಾಗೂ ಆರೋಹಣ ವ್ಯವಸ್ಥೆಯಲ್ಲಿರುವಂತಹವು ; ತೃತೀಯ ದರ್ಜೆಯ ನಾಳಗಳು ತೆಳುವಾಗಿದ್ದು ಎಲೆದಿಂಡಿಗೆ ಅಡ್ಡವಾಗಿ ಕೂಡುವಂತಹವು ಮತ್ತು ಹೆಚ್ಚೂ ಕಡಿಮೆ ಸಮಾಂತರದಲ್ಲಿರುತ್ತವೆ.
ಪುಷ್ಪಮಂಜರಿ/ಹೂಗಳು : ಹೂಗಳು ಸಾಮೂಹಿಕವಾಗಿರುತ್ತವೆ. ಕೆಲವು ವೇಳೆ ಹಳೆಯ ಕವಲುಗಳ ಮೇಲಿನ ಅನಿಯತ ಮಧ್ಯಾಭಿಸರ ಪುಷ್ಪಮಂಜರಿಯಲ್ಲಿರುತ್ತವೆ. .
ಕಾಯಿ /ಬೀಜ : ಬೆರ್ರಿಗಳು ಗುಂಡಾಗಿದ್ದು ಒಂದು ಬೀಜವನ್ನು ಹೊಂದಿರುತ್ತವೆ ಹಾಗೂ ಸಾಮೂಹಿಕವಾಗಿರುತ್ತವೆ.

ಜೀವಪರಿಸ್ಥಿತಿ :

ಮೇಲ್ಛಾವಣಿ ಮರಗಳಾಗಿ 100ಮೀ ಎತ್ತರದವರೆಗಿನ ಪ್ರದೇಶಗಳ ನಿತ್ಯಹರಿದ್ವರ್ಣದಿಂದ ಅರೆ ನಿತ್ಯ ಹರಿದ್ವರ್ಣ ಕಾಡುಗಳಲ್ಲಿ (ಸಾಮಾನ್ಯವಾಗಿ ಶಿಥಿಲಾವಸ್ಥೆಯಲ್ಲಿರುವ ಕಾಡುಗಳಲ್ಲಿ ಕಂಡುಬರುತ್ತವೆ.)

ವ್ಯಾಪನೆ :

ದಕ್ಷಿಣ ಹಾಗೂ ಮಧ್ಯ ಸಹ್ಯಾದ್ರಿಯ ಪ್ರದೇಶಗಳಲ್ಲಿ ಬೆಳೆಯುವ ಸಸ್ಯ ಪಶ್ಚಿಮ ಘಟ್ಟಗಳಿಗೆ ಸೀಮಿತ.

ಗ್ರಂಥ ಸೂಚಿ :

Gamble, Fl. Madras 1: 16.1997 (re.ed); Sasidharan, Biodiversity documentation for Kerala- Flowering Plants, part 6: 20. 2004; Saldanha, Fl. Karnataka 1: 48. 1984; Keshava Murthy and Yoganarasimhan, Fl. Coorg (Kodagu) 33. 1990.

Top of the Page