ಸೈಖಾಟ್ರಿಯ ಅನ್ನಾಮಲಯಾನ Bedd. - ರೂಬಿಯೇಸಿ

:

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ದೊಡ್ಡ ಗಾತ್ರದ ಪೊದೆಗಳು ಅಥವಾ ಅಂದಾಜು 4 ಮೀ. ಎತ್ತರದವರೆಗಿನ ಸಣ್ಣ ಗಾತ್ರದ ಮರಗಳು.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ಸಾಮಾನ್ಯವಾಗಿ ತ್ರಿಕೋನಾಕಾರದಲ್ಲಿದ್ದು ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಕತ್ತರಿಯಾಕಾರದ ಅಭಿಮುಖ ಜೋಡನಾ ವ್ಯವಸ್ಥೆಯಲ್ಲಿರುತ್ತವೆ, ಕೆಲವು ವೇಳೆ 3 ಎಲೆಗಳು ಒಂದು ಗಿಣ್ಣಿನಲ್ಲಿರುತ್ತವೆ; ಕಾವಿನೆಲೆಗಳು ಭರ್ಜಿಯ ಆಕಾರ ಹೊಂದಿದ್ದು, 1.9 ರಿಂದ 2.5 ಸೆಂಮೀ. ಗಾತ್ರದಲ್ಲಿದ್ದು,ತೊಟ್ಟುಗಳ ನಡುವೆ ಇರುತ್ತವೆ ಹಾಗೂ ಒರೆಯ ಸಮೇತವಿರುತ್ತವೆ; ತೊಟ್ಟು 1.5 – 4 ಸೆಂ.ಮೀ.ವರೆಗಿನ ಉದ್ದವಿದ್ದು, ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯದ ಆಕಾರ ಹೊಂದಿದ್ದು, ರೋಮರಹಿತವಾಗಿರುತ್ತವೆ;ಪತ್ರಗಳು 15 -25 X4- 7.5 ಸೆಂ.ಮೀ. ಗಾತ್ರ ಹೊಂದಿದ್ದು, ಬುಗುರಿ ಭರ್ಜಿಯ ಆಕಾರ ಹೊಂದಿದ್ದು, ಕಿರಿದಾದ ಕ್ರಮೇಣ ಚೂಪಾಗುವವರೆಗಿನ ತುದಿ, ಬೆಣೆಯಾಕಾರದ-ತಳಭಾಗಕ್ಕೆ ವಿಸ್ತರಿಸಿದ ಬುಡ, ನಯವಾದ ಅಂಚು, ಉಪ-ತೊಗಲು ಮಾದರಿಯಿಂದ ತೊಗಲನ್ನೋಲುವವರೆಗಿನ ಮೇಲ್ಮೈ ಹೊಂದಿರುತ್ತವೆ ಹಾಗೂ ರೋಮರಹಿತವಾಗಿರುತ್ತವೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಉಬ್ಬಿರುತ್ತದೆ;ಎರಡನೇ ದರ್ಜೆಯ ನಾಳಗಳು 8 ರಿಂದ 13 ಜೋಡಿಗಳಿರುತ್ತವೆ;ಮೂರನೇ ದರ್ಜೆಯ ನಾಳಗಳು ವಿಶಾಲ ಜಾಲಬಂಧ ನಾಳ ವಿನ್ಯಾಸದಲ್ಲಿದ್ದು ಎಲೆ ದಿಂಡಿಗೆ ಅಡ್ಡವಾಗಿ ಕೂಡುವ ಮಾದರಿಯವು.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ತುದಿಯಲ್ಲಿನ ಮಧ್ಯಾರಂಭಿ ನೀಳಛತ್ರ ಮಾದರಿಯವು;ಹೂಗಳು ಬಿಳಿ ಬಣ್ಣದಲ್ಲಿರುತ್ತವೆ.
ಕಾಯಿ / ಬೀಜ : ಡ್ರೂಪ್ಗಳು ಚತರಸ್ರದ ಆಕಾರ ಹೊಂದಿದ್ದು ಕೆನ್ನೀಲಿ ಬಣ್ಣದಲ್ಲಿದ್ದು 3 ಸೆಂ.ಮೀವರೆಗಿನ ಉದ್ದವಿರುತ್ತವೆ.

ಜೀವಪರಿಸ್ಥಿತಿ :

700 ಮತ್ತು 1400 ಮೀ. ನಡುವಿನ ಎತ್ತರದ ಪ್ರದೇಶಗಳ ತೇವಾಂಶದಿಂದ ಕೂಡಿದ ನಿತ್ಯ ಹರಿದ್ವರ್ಣ ಕಾಡುಗಳ ಒಳಾವರಣದಲ್ಲಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಭೇದ ದಕ್ಷಿಣ ಸಹ್ಯಾದ್ರಿ ಪ್ರದೇಶಗಳಲ್ಲಿ ಕಂಡುಬರುತ್ತದೆ.

ಗ್ರಂಥ ಸೂಚಿ :

Bedd. Ic. t. 236. 1868-1874; Gamble, Fl. Madras 2: 641. 1993 (re. ed); Sasidharan, Biodiversity documentation for Kerala- Flowering Plants, part 6: 231. 2004.

Top of the Page