ರೋಡೋಮಿರ್ಟಸ್ ಟೊಮೆಂಟೋಸ (Aiton) Hassk. - ಮಿರ್ಟೇಸಿ

ಪರ್ಯಾಯ ನಾಮ : ಮಿರ್ಟಸ್ ಟೊಮೆಂಟೋಸ Aiton

Vernacular names : Tamil: ಕೊರಟ್ಟ, ತವಟ್ಟುಕೊಯ್ಯ,ತವೋಂಟೇ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 5 ಮೀ. ಎತ್ತರದವರೆಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕಂದು ಬಣ್ಣದಲ್ಲಿದ್ದು, ಪೊರೆ ರೂಪ ಹೊಂದಿರುತ್ತವೆ;ಕಚ್ಚು ಮಾಡಿದ ಜಾಗ ಕೆನೆ ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆ ಕಿರುಕೊಂಬೆಗಳು ದುಂಡಾಗಿದ್ದು,ಬೂದು ಬಣ್ಣದ ದಟ್ಟ ಮೃದು ತುಪ್ಪಳದಿಂದ ಕೂಡಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಅಭಿಮುಖವಾಗಿ ಜೋಡನೆಗೊಂಡಿದ್ದು ಕಾಂಡದ ಎರಡೂ ಕಡೆ ಎದುರು ಬದರಿನ ಲಂಬ ಸಾಲಿನಲ್ಲಿರುತ್ತವೆ;ತೊಟ್ಟುಗಳು 0.5-0.8 ಸೆಂ.ಮೀ. ಉದ್ದ ಹೊಂದಿದ್ದು ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯದ ಆಕಾರದಲ್ಲಿರುತ್ತವೆ,ಹಾಗೂ ಬೂದು ಬಣ್ಣದ ದಟ್ಟ ಮೃದು ತುಪ್ಪಳದಿಂದ ಕೂಡಿರುತ್ತವೆ;ಪತ್ರಗಳು 3-7.5 X1.3-4.5 ಸೆಂ.ಮೀ.ನ ಗಾತ್ರವಿದ್ದು ಅಂಡವೃತ್ತದ ಆಕಾರ ಹೊಂದಿದ್ದು ಮೊನಚು ಮುಳ್ಳನ್ನುಳ್ಳ ತುದಿ, ಚೂಪಾದುದರಿಂದ ಹಿಡಿದು ಚೂಪಲ್ಲದ ರೀತಿಯವರೆಗಿನ ಬುಡ, ನಯವಾದ ಮತ್ತು ಹಿಂಬಾಗಿದ ಅಂಚನ್ನು ಹೊಂದಿರುತ್ತವೆ,ಪತ್ರಗಳು ತಳಭಾಗದಲ್ಲಿ ಬೂದು ಬಣ್ಣದ ದಟ್ಟ ಮೃದು ತುಪ್ಪಳದಿಂದ ಆವೃತವಾಗಿರುತ್ತವೆ ಮತ್ತು ತೊಗಲನ್ನೋಲುವ ಮೇಲ್ಮೈ ಹೊಂದಿರುತ್ತವೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಚಪ್ಪಟೆಯಾಗಿರುತ್ತದೆ;ಅಗ್ರ ಆಧಾರ ನಾಳಗಳು 3;ಪಾರ್ಶ್ವ ನಾಳಗಳು ಎಲೆಯ ತುದಿಯನ್ನು ಮುಟ್ಟುತ್ತವೆ;ಅಂತರ ಅಂಚಿನ ನಾಳಗಳು ಇರುತ್ತವೆ; ಮೇಲ್ದರ್ಜೆಯ ನಾಳಗಳು ಪ್ರಮುಖವಾದ ಜಾಲಬಂಧ ನಾಳ ವಿನ್ಯಾಸದಲ್ಲಿರುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ಅಕ್ಷಾಕಂಕುಳಿನ ಮಧ್ಯಾರಂಭಿ ಮಾದರಿಯಲ್ಲಿದ್ದು 8 ಸಂಖ್ಯೆವರೆಗೆ ಹೂಗಳನ್ನು ಹೊಂದಿರುತ್ತವೆ;ಹೂಗಳು ದೊಡ್ಡ ಗಾತ್ರದವು;ಹೂ ತೊಟ್ಟುಗಳು 0.5 ಸೆಂ.ಮೀ ಉದ್ದವಿರುತ್ತವೆ;ಪುಷ್ಪ ದಳಗಳು ಗುಲಾಬಿ ಮಿಶ್ರಿತ ಬಿಳಿ ಬಣ್ಣದವು;ಕೇಸರಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು ಗುಲಾಬಿ ಮಿಶ್ರಿತ ನಸುಗೆಂಪು ಬಣ್ಣ ಹೊಂದಿರುತ್ತವೆ.
ಕಾಯಿ / ಬೀಜ : ಬೆರ್ರಿ ಫಲಗಳು ಉಪಗೋಳಾಕಾರದಲ್ಲಿದ್ದು,1 ಸೆಂ.ಮೀ. ಅಡ್ಡಗಲತೆಯನ್ನು ಹೊಂದಿರುತ್ತವೆ ಮತ್ತು ಮುಕುಟದಲ್ಲಿ ಪುಷ್ಪ ಪಾತ್ರೆಯ ಎಸಳುಗಳ ಸಮೇತವಿರುತ್ತವೆ;ಬೀಜಗಳು ಹಲವಾರು ಇದ್ದು,ಮೂತ್ರ ಪಿಂಡದ ಆಕಾರದಲ್ಲಿರುತ್ತವೆ ಹಾಗೂ ಸಂಕುಚಿತಗೊಂಡಿರುತ್ತದೆ.

ಜೀವಪರಿಸ್ಥಿತಿ :

ಹೆಚ್ಚಿನ ಎತ್ತರದ ಪ್ರದೇಶಗಳ ನಿತ್ಯಹರಿದ್ವರ್ಣ ಕಾಡುಗಳ ಅಂಚಿನಲ್ಲಿ ಮತ್ತು 1600 ಮೀ. ಗಿಂತ ಹೆಚ್ಚಿನ ಎತ್ತರದ ಪ್ರದೇಶಗಳಲ್ಲಿನ ತೆರೆದ ಪೊದೆಗಳಲ್ಲಿ ಈ ಪ್ರಭೇದ ಕಂಡು ಬರುತ್ತದೆ.

ವ್ಯಾಪನೆ :

ಇಂಡೋಮಲೇಸಿಯ ಮತ್ತು ಚೈನ;ಪಶ್ಚಿಮ ಘಟ್ಟದಲ್ಲಿ ನೀಲಗಿರಿ,ಅಣ್ಣಾಮಲೈ ಮತ್ತು ಪಳನಿ ಬೆಟ್ಟಪ್ರದೇಶಗಳಲ್ಲಿ ಈ ಪ್ರಭೇದ ವ್ಯಾಪಿಸಿದೆ.

ಗ್ರಂಥ ಸೂಚಿ :

Flora 25: 35. 1842; Gamble, Fl. Madras 1: 471.1997 (re.ed); Sasidharan, Biodiversity documentation for Kerala- Flowering Plants, part 6: 175. 2004.

Top of the Page