ಸರಕ ಅಸೋಕ (Roxb.) Wilde - ಸಿಸಾಲ್ಪೀನಿಯೇಸಿ

Synonym : ಜೊನೆಸಿಯ ಅಸೋಕ Roxb. ಸರಕ ಇಂಡಿಕ auct. non L.

ಕನ್ನಡದ ಪ್ರಾದೇಶಿಕ ಹೆಸರು : ಅಶೋಕ, ಅಭಂಗ, ಅಚಂಗ, ಕುಸಗೆ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಸ್ಥಿತಿ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 5 ಮೀ. ಎತ್ತರದವರೆಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ಕಾಂಡ ಹಲವು ಸಂದರ್ಭಗಳಲ್ಲಿ ಗುಬುಟುಗಳ ಸಮೇತವಾಗಿರುತ್ತದೆ; ತೊಗಟೆ ಮಸುಕು ಬಣ್ಣ ಹೊಂದಿದ್ದು ವಾಯುವಿನಿಮಯ ಬೆಂಡು ರಂಧ್ರ ಸಮೇತವಿದ್ದು, ಆಳವಿಲ್ಲದ ಸೀಳಿಕಾ ಮಾದರಿಯಲ್ಲಿರುತ್ತವೆ. ಕಚ್ಚು ಮಾಡಿದ ಜಾಗ ಕೆನ್ನೀಲಿ ಬಣ್ಣ ಹೊಂದಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ಗುಂಡಾಗಿದ್ದು ರೋಮರಹಿತವಾಗಿರುತ್ತದೆ.
ಎಲೆಗಳು : ಎಲೆಗಳು ಸಮಸಂಖ್ಯೆ ಗರಿರೊಪಿ ಸಂಯುಕ್ತ ಮಾದರಿಯವು ಹಾಗೂ ಪರ್ಯಾಯ ಜೋಡನಾ ವ್ಯವಸ್ಥೆಯಲ್ಲಿದ್ದು ಕಾಂಡದ ಎರಡೂ ಕಡೆ ಎದುರು ಬದರಿನ ಲಂಬ ಸಾಲಿನಲ್ಲಿರುತ್ತವೆ; ಕಾವಿನೆಲೆಗಳು ಉದುರಿ ಹೋಗುವ ರೀತಿಯವು; ಅಕ್ಷದಿಂಡು ಉಬ್ಬಿದ ಬುಡವನ್ನು ಹೊಂದಿದ್ದು, 7 ರಿಂದ 30 ಸೆಂ. ಮೀ. ಉದ್ದವಿರುತ್ತದೆ; ಕಿರು ಎಲೆಗಳು 4 ರಿಂದ 6 (12ರ ವರೆಗೆ) ಜೋಡಿಗಳಿದ್ದು ಅಭಿಮುಖಿಗಳಾಗಿರುತ್ತವೆ, ಪತ್ರಗಳು 6 – 31 x 1.5 – 9 ಸೆ.ಮೀ. ಗಾತ್ರ ಹೊಂದಿದ್ದು, ಇಕ್ಕಟ್ಟಾದ ಅಂಡವೃತ್ತ – ಚತುರಸ್ರ ಅಥವಾ ಭರ್ಜಿಯಾಕಾರದಲ್ಲಿದ್ದು ಚೂಪಾದುದರಿಂದ ಹಿಡಿದು ಕ್ರಮೇಣ ಚೂಪಾಗುವ ತುದಿ, ಚೂಪಾದುದರಿಂದ ಗುಂಡಾದ ಅಥವಾ ಉಪ ಹೃದಯಾಕಾರದ ಬುಡವನ್ನು ಹೊಂದಿದ್ದು, ಉಪತೊಗಲನ್ನೋಲುವ ರೀತಿಯದಾಗಿದ್ದು ರೋಮರಹಿತವಾಗಿರುತ್ತವೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಉಬ್ಬಿರುತ್ತದೆ; ಎರಡನೇ ದರ್ಜೆಯ ನಾಳಗಳು ಅಂದಾಜು 11 ಜೋಡಿಗಳಿದ್ದು ಕುಣಿಕೆಗೊಂಡಿರುತ್ತವೆ; ಮೂರನೇ ದರ್ಜೆಯ ನಾಳಗಳು ಜಾಲಬಂಧ ನಾಳ ವಿನ್ಯಾಸದವು.
ಪುಷ್ಪಮಂಜರಿ/ಹೂಗಳು : ಹೂಗಳು ಕಿತ್ತಳೆ ವರ್ಣ ಅಥವಾ ಕೆಲವು ವೇಳೆ ಶ್ವೇತ ವರ್ಣದವುಗಳಾಗಿದ್ದು ಸುವಾಸನೆ ಹೊಂದಿದ್ದು ದಟ್ಟವಾದ ನೀಳಛತ್ರ ಪುಷ್ಪಮಂಜರಿ-ಯಲ್ಲಿರುತ್ತವೆ.
ಕಾಯಿ /ಬೀಜ : ಪಾಡುಗಳು ಚಪ್ಪಟೆಯಾಗಿದ್ದು, ಚತುರಸ್ರಾಕಾರದಲ್ಲಿದ್ದು ಅಗ್ರದಲ್ಲಿ ಸೂಕ್ಷ್ಮವಾದ, ಸಣ್ಣಗಾತ್ರದ, ಚೂಪು ಮುಳ್ಳನ್ನು ಹೊಂದಿದ್ದು 1.5 x 4.5 ಸೆಂ.ಮೀ. ಗಾತ್ರದಲ್ಲಿರುತ್ತವೆ; ಬೀಜಗಳು ಬುಗುರಿ – ಬುಗುರಿಭರ್ಜಿ ಸಮ್ಮಿಶ್ರಾಕಾರವನ್ನು ಹೊಂದಿರುತ್ತವೆ.

ಜೀವಪರಿಸ್ಥಿತಿ :

600 ಮೀ.ವರೆಗಿನ ಎತ್ತರದ ನಿತ್ಯಹರಿದ್ವರ್ಣ ಹಾಗೂ ಅರೆನಿತ್ಯಹರಿದ್ವರ್ಣ ಕಾಡುಗಳ ಝರಿಗಳ ಸಮೀಪದಲ್ಲಿ ಒಳಛಾವಣಿ ಮರಗಳಾಗಿ ಈ ಪ್ರಭೇದ ಕಂಡುಬರುತ್ತದೆ.

ವ್ಯಾಪನೆ :

ಭಾರತ, ಶ್ರೀಲಂಕಾ, ಬಾಂಗ್ಲಾದೇಶ, ಮ್ಯಾನ್ಮಾರ್; ಪಶ್ಚಿಮ ಘಟ್ಟದ ದಕ್ಷಿಣ, ಮಧ್ಯಭಾಗ ಹಾಗೂ ಸಹ್ಯಾದ್ರಿಯ ದಕ್ಷಿಣ ಮಹಾರಾಷ್ಟ್ರ ಪ್ರದೇಶ.

ಸ್ಥಿತಿ :

ದುರ್ಬಲ ಸ್ಥಿತಿ (IUCN 2000)

ಗ್ರಂಥ ಸೂಚಿ :

Blumea 15: 393. 1968; Gamble, Fl. Madras 1: 409. 1997 (re. ed); Sasidharan, Biodiversity documentation for Kerala- Flowering Plants, part 6: 156. 2004; Cook, Fl. Bombay 1: 429. 1902; Saldanha, Fl. Karnataka 1: 393. 1996.

Top of the Page