ಶೆಫ್ಲೆರ ರೆಸಿಮೋಸ Harms - ಅರಾಲಿಯೇಸಿ

:

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 15ಮೀ ಎತ್ತರದವರೆಗೆ ಬೆಳೆಯುವ ಮಧ್ಯಮ ಗಾತ್ರದ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಬೂದು ಬಣ್ಣ ಹಾಗೂ ನಯವಾದ ಮೇಲ್ಮೈ ಹೊದಿರುತ್ತದೆ ಮತ್ತು ಕಚ್ಚು ಮಾಡಿದ ಜಾಗ ಶ್ವೇತ ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ಧೃಢ ಹಾಗೂ ದುಂಡಾಕಾರದಲ್ಲಿದ್ದು ರೋಮರಹಿತವಾಗಿರುತ್ತವೆ.
ಜಿನುಗು ದ್ರವ :
ಎಲೆಗಳು : ಎಲೆಗಳು ಹಸ್ತರೂಪಿ ಸಂಯುಕ್ತ ಎಲೆ ಮಾದರಿಯವು. ಪರ್ಯಾಯ ಹಾಗೂ ಸುತ್ತು ಜೋಡನಾ ವ್ಯವಸ್ಥೆಯಲ್ಲಿದ್ದು ಕುಡಿಕೊಂಬೆಗಳ ತುದಿಯಲ್ಲಿ ಗುಂಪಾಗಿರುತ್ತವೆ. ಬುಡ ಉಬ್ಬಿ-ಕೊಂಡಿರುತ್ತವೆ; ಅಕ್ಷದಿಂಡು 8 ರಿಂದ 25ಸೆಂ.ಮೀ. ಉದ್ದ, ದುಂಡಾಗಿದ್ದು ಸೂಕ್ಷ್ಮವಾದ ಉಬ್ಬುಸಾಲುಗಳನ್ನು ಹೊಂದಿರುತ್ತದೆ. ಅಕ್ಷದಿಂಡಿನ ಬುಡಭಾಗ ಊದಿಕೊಂಡಿರುತ್ತದೆ. ಹಾಗೂ ಎಲೆತೊಟ್ಟಿಗೆ ಅಂಟಿಕೊಂಡಿರುತ್ತದೆ. ಕಿರುತೊಟ್ಟುಗಳು 1.3 ರಿಂದ 6ಸೆಂ.ಮೀ. ಉದ್ದ ಹೊಂದಿರುತ್ತದೆ. ಕಿರುಪತ್ರಗಳು 5 ರಿಂದ 9 ಇದ್ದು ಕ್ರಮೇಣವಾಗಿ ಗಾತ್ರದಲ್ಲಿ ಹೆಚ್ಚುತ್ತಾ ಹೋಗುತ್ತವೆ. ಪತ್ರ 5.5ರಿಂದ 17ಸೆಂ.ಮೀ. ಉದ್ದ 3 ರಿಂದ 6 ಸೆಂ.ಮೀ. ಅಗಲ ಇದ್ದು ಇಕ್ಕಟ್ಟಾದ ಅಂಡವೃತ್ತಾಕಾರದಿಂದ ಹಿಡಿದು ಅಂಡವೃತ್ತ-ಚತುರಸ್ರಾಕಾರದವರೆಗಿನ ಆಕಾರ ಹೊಂದಿರುತ್ತವೆ. ಕ್ರಮೇಣ ಚೂಪು ಮಾದರಿಯ ತುದಿ ಹಾಗೂ ಚೂಪಾದುದರಿಂದ ಹಿಡಿದು ಗುಂಡಾದ ಬುಡಭಾಗವನ್ನು ಪತ್ರಗಳು ಹೊಂದಿರುತ್ತವೆ. ಪತ್ರದ ಅಲೆಯಾಕಾರದ ಅಂಚು ತೆಳುವಾದ ತೊಗಲನ್ನೋಲುವ ಹಾಗೂ ರೋಮರಹಿತವಾದ ಮೇಲ್ಮೈ ಹಾಗೂ ಸ್ವಲ್ಪಮಟ್ಟಿಗೆ ಮಾಸಲು ಬೂದಿ ಹಸಿರು ಹೊಂದಿದ ತಳಭಾಗವನ್ನು ಹೊಂದಿರುತ್ತವೆ. ಮಧ್ಯನಾಳ ಹೆಚ್ಚೂ ಕಡಿಮೆ ಸಪಾಟಾಗಿರುತ್ತದೆ. ಎರಡನೇ ದರ್ಜೆಯ ನಾಳಗಳು 7 ರಿಂದ 9 ಜೋಡಿಗಳಿದ್ದು ಮೂರನೇ ದರ್ಜೆಯ ನಾಳಗಳು ಜಾಲಬಂಧ ನಾಳ ವಿನ್ಯಾಸ ಸಮೇತವಾಗಿದ್ದು ಎಲೆದಿಂಡಿಗೆ ಅಡ್ಡವಾಗಿ ಕೂಡುವಂತಹವುಗಳಾಗಿರುತ್ತವೆ.
ಪುಷ್ಪಮಂಜರಿ/ಹೂಗಳು : ಹೂಗಳು ಪಾರ್ಶ್ವವಾಗಿರುವ ಕವಲೊಡೆದ ಮಧ್ಯಾಭಿಸರ ಪುಷ್ಪಮಂಜರಿಯಲ್ಲಿರುತ್ತವೆ.
ಕಾಯಿ /ಬೀಜ : ಕಾಯಿಗಳು ಡ್ರೂಪ್ ಮಾದರಿಯವಾಗಿದ್ದು ಉಬ್ಬು-ತಗ್ಗು ಗೆರೆಗಳನ್ನೊಳಗೊಂಡಿರುತ್ತವೆ. ಬೀಜಗಳು ಸಂಕುಚಿತವಾಗಿರುತ್ತವೆ.

ಜೀವಪರಿಸ್ಥಿತಿ :

900 ರಿಂದ 2300ಮೀ ವರೆಗಿನ ಪ್ರದೇಶಗಳ ಕುಂಠಿತ ಬೆಳವಣಿಗೆಯುಳ್ಳ ನಿತ್ಯಹರಿದ್ವರ್ಣ ಕಾಡುಗಳಲ್ಲಿ ಮೇಲ್ಛಾವಣಿ ಮರಗಳಾಗಿ ಈ ಪ್ರಬೇಧಕಾಣಸಿಗುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟ ಪ್ರದೇಶಕ್ಕೆ ಸೀಮಿತ- ದಕ್ಷಿಣ ಸಹ್ಯಾದ್ರಿಯ ಏಲಮಲೈ ಮತ್ತು ತಮಿಳುನಾಡಿನ ನೀಲಗಿರಿ ಪ್ರದೇಶ.

ಗ್ರಂಥ ಸೂಚಿ :

Engler & Prantl, Naturl. Pflanzenfam.3 (8):38. 1894; Gamble, Fl. Madras 1: 570.1997 (re.ed); Sasidharan, Biodiversity documentation for Kerala- Flowering Plants, part 6: 207. 2004.

Top of the Page