ಶೆಫ್ಲೆರ ಸ್ಟೆಲ್ಲೇಟ (Gaertn.) Harms - ಅರಾಲಿಯೇಸಿ

Synonym : ಹೆಪ್ಟಾಪ್ಲೂರಮ್ ಸ್ಟೆಲ್ಲೇಟಮ್ Gaertn.

ಕನ್ನಡದ ಪ್ರಾದೇಶಿಕ ಹೆಸರು : ಬದ್ದಲೆ, ವೆಂಡಿಪೀಪ್ರಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ಸಣ್ಣಗಾತ್ರದ ಮರಗಳು ಅಥವಾ ಸ್ಪಷ್ಟವಾಗಿ ಕಾಣುವ ಹಾಗೂ ಅವ್ಯವಸ್ಥಿತವಾಗಿ ಹರಡಿ ಬೆಳೆಯುವ ಬಳ್ಳಿಗಳು.
ಜಿನುಗು ದ್ರವ :
ಎಲೆಗಳು : ಎಲೆಗಳು ಹಸ್ತರೂಪಿ ಸಂಯುಕ್ತ ಮಾದರಿಯವು ಹಾಗೂ ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುವಂತಹವು ಮತ್ತು ಉಬ್ಬಿದ ತಳಭಾಗ ಹೊಂದಿರುವಂತಹವು, ಕಾವಿನೆಲೆ ಎಲೆತೊಟ್ಟಿಗೆ ಅಂಟಿಕೊಂಡಿರುತ್ತವೆ. ಎಲೆ ಕಿರುತೊಟ್ಟುಗಳು 6 ರಿಂದ 20 ಸೆಂ.ಮೀ. ಉದ್ದ-ವಿದ್ದು ಬುಡದಲ್ಲಿ ಒರೆಯನ್ನು ಹೊಂದಿರುತ್ತವೆ. ಕಿರು ತೊಟ್ಟುಗಳು 3 ರಿಂದ 6ಸೆಂ.ಮೀ. ಉದ್ದವಿರುತ್ತದೆ. ಕಿರು ಎಲೆಗಳು 3 ರಿಂದ 6ರ ಸಂಖ್ಯೆಯಲ್ಲಿ (ಸಾಮಾನ್ಯವಾಗಿ 5) 4.2ರಿಂದ 10ಸೆಂ.ಮೀ. ಉದ್ದ, 3.5 ರಿಂದ 6.4ಸೆಂ.ಮೀ. ಅಗಲವಿರುವ ಪತ್ರಭಾಗವನ್ನು ಹೊಂದಿರುತ್ತವೆ. ಪತ್ರಗಳು ಬುಗುರಿಯಾರದಲ್ಲಿದ್ದು ಕೆಲವು ವೇಳೆ ಓರೆಯಾಗಿರುತ್ತದೆ, ಪತ್ರಗಳು ಗುಂಡಾಗಿರುವು- ರಿಂದ ಹಿಡಿದು ಕೊಂಚ ಚೂಪಲ್ಲದ ಅಥವಾ ದುಂಡನೆಯ ತುದಿಯಲ್ಲಿ ತಗುಳ್ಳ ತುದಿಯನ್ನೂ, ಒಳಭಾಗಿದ ತಳವನ್ನುಳ್ಳ ಬುಡಭಾಗವನ್ನೂ ಹೊಂದಿರುತ್ತವೆ. ಪತ್ರದ ಮೇಲ್ಮೈ ರೋಮರಹಿತ ಹಾಗೂ ಮೇಲ್ಭಾಗ ಹೊಳಪನ್ನೂ ಹೊಂದಿದ್ದು ಹಿಂಚಾಚಿದ ಅಂಚನ್ನು ಪಡೆದಿರುತ್ತವೆ. ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಅಚ್ಚೊತ್ತಿದ ಹಾಗಿರುತ್ತದೆ; ಎರಡನೇ ದರ್ಜೆಯ ನಾಳಗಳು 4 ರಿಂದ 6 ಜೋಡಿಗಳಿದ್ದು ಕುಣಿಕೆಗೊಂಡಿರುತ್ತದೆ; ಮೂರನೇ ದರ್ಜೆಯ ನಾಳಗಳು ವಿಶಾಲ ಜಾಲಬಂಧ ನಾಳವಿನ್ಯಾಸದವು.
ಪುಷ್ಪಮಂಜರಿ/ಹೂಗಳು : ಹೂಗಳು ಪೀಠಛತ್ರ ಮಂಜರಿಯಲ್ಲಿದ್ದು ಪೀಠಛತ್ರ ಮಂಜರಿಗಳು ಕವಲೊಡೆದ ಮಧ್ಯಾಭಿಸರ ಪುಷ್ಪಮಂಜರಿಯಲ್ಲಿರುತ್ತವೆ. ಪ್ರತಿ ಪೀಠಛತ್ರ ಮಂಜರಿಯಲ್ಲಿ 5 ರಿಂದ 8 ಹೂಗಳಿರುತ್ತವೆ.
ಕಾಯಿ /ಬೀಜ : ಕಾಯಿಗಳು ಉಪದುಂಡಾಕಾರದಲ್ಲಿದ್ದ ಡ್ರೂಪ್ ಮಾದರಿಯವು. ಕಾಯಿಗಳ ಗಾತ್ರ 0.4ರಿಂದ 0.5ಸೆಂ.ಮೀ. ವ್ಯಾಸ ಉಳ್ಳದ್ದಾಗಿದ್ದು ಶಲಾಕೆಯ ಅಗ್ರಭಾಗ ಕಾಯಿಗಳಲ್ಲಿ ಶಾಶ್ವತ-ವಾಗಿರುತ್ತದೆ. ಬೀಜಗಳು ಸಂಕುಚಿತವಾಗಿರುತ್ತವೆ.

ಜೀವಪರಿಸ್ಥಿತಿ :

ನೀರಿನ ಝರಿಗಳ ಬಳಿ ಅಥವಾ 200ಮೀ ಎತ್ತರ ಪ್ರದೇಶಗಳ ತೆರೆದ ನಿತ್ಯಹರಿದ್ವರ್ಣ ಕಾಡುಗಳಲ್ಲಿ ಈ ಪ್ರಬೇಧ ಕಾಣ ಸಿಗುತ್ತದೆ.

ವ್ಯಾಪನೆ :

ಭಾರತದ ಪ್ರರ್ಯಾಯ ದ್ವೀಪ ಪ್ರದೇಶ ಮತ್ತು ಶ್ರೀಲಂಕಾ; ಪಶ್ಚಿಮ ಘಟ್ಟದ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿಯಲ್ಲಿ ಈ ಪ್ರಬೇಧ ಬೆಳೆಯುತ್ತದೆ.

ಗ್ರಂಥ ಸೂಚಿ :

Engler & Prantl, Naturl Pflanzenfam. 3 (8): 39. 1894; Gamble, Fl. Madras 1: 570.1997 (re.ed); Sasidharan, Biodiversity documentation for Kerala- Flowering Plants, part 6: 207. 2004; Saldanha, Fl. Karnataka 2: 275. 1996.

Top of the Page