ಸ್ಕೊಲೋಪಿಯ ಕ್ರೆನೇಟ (Wt. & Arn.) Clos - ಫ್ಲಕೋರ್ಶಿಯೇಸಿ

Synonym : ಫೊಬೆರೋಸ್ ಕ್ರೆನೇಟ Wt. & Arn.

ಕನ್ನಡದ ಪ್ರಾದೇಶಿಕ ಹೆಸರು : ಪೊಟಾಟೊ ಪ್ಲಮ್ ಆಫ್ ಮೈಸೂರ್.

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 18 ಮೀ. ಎತ್ತರದವರೆಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ಕಾಂಡದ ಬುಡ ಹಲವು ಸಂಧರ್ಭದಲ್ಲಿ ಕವಲೊಡೆದ ದೊಡ್ಡ ಮುಳ್ಳುಗಳನ್ನುಹೊಂದಿರುತ್ತದೆ;ಬಲಿತ ಕವಲುಗಳು ರಕ್ಷಾವರಣರಹಿತವಾಗಿರುತ್ತವೆ ತೊಗಟೆ ಕಂದು ಬಣ್ಣದಲ್ಲಿರುತ್ತದೆ ಮತ್ತು ಚಕ್ಕೆ ಮಾದರಿಯಲ್ಲಿರುತ್ತದೆ;ಕಚ್ಚು ಮಾಡಿದ ಜಾಗ ಕೆನೆ ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು ರೋಮರಹಿತವಾಗಿರುತ್ತವೆ ಮತ್ತು ವಾಯು ವಿನಿಮಯ ಬೆಂಡು ರಂಧ್ರ ಸಮೇತವಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಮಾದರಿಯಲ್ಲಿ ಜೋಡಣೆಗೊಂಡಿದ್ದು ಕಾಂಡದ ಎರಡೂ ಕಡೆ ಎದುರು ಬದರಿನ ಸಾಲಿನಲ್ಲಿರುತ್ತವೆ;ಕಾವಿನೆಲೆಗಳು ಉದುರಿ ಹೋಗುವಂತವು; ತೊಟ್ಟುಗಳು 0.6 -1.3 ಸೆಂ.ಮೀ. ವರೆಗಿನ ಉದ್ದ ಹೊಂದಿದ್ದು ರೋಮರಹಿತವಾಗಿರುತ್ತವೆ; ಪತ್ರಗಳು 6-11.5X1.5-5ಸೆಂ.ಮೀ.ಗಾತ್ರ ಹೊಂದಿದ್ದು ಚತುರಸ್ರದಿಂದ ಭರ್ಜಿಯವರೆಗಿನ ಆಕಾರ ಹೊಂದಿದ್ದು, ಹಂತ ಹಂತವಾಗಿ ಕ್ರಮೇಣ ಚೂಪಾಗುವ ತುದಿ,ಚೂಪಾದ ಅಥವಾ ಬೆಣೆಯಾಕಾರದ ಹಾಗೂ ಸ್ವಲ್ಪ ಅಸಮವಾದಬುಡ ಮತ್ತು ದುಂಡೇಣು ದಂತಗಳುಳ್ಳ ಅಂಚನ್ನು ಹೊಂದಿರುತ್ತವೆ; ಮೇಲ್ಮೈ ತೊಗಲನ್ನೋಲುವ ಮಾದರಿಯಲ್ಲಿರುತ್ತದೆ ಮತ್ತು ರೋಮರಹಿತವಾಗಿರುತ್ತದೆ;ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಚಪ್ಪಟೆಯಾಗಿರುತ್ತದೆ;ಎರಡನೇ ದರ್ಜೆಯ ನಾಳಗಳು 6-8 ಜೋಡಿಗಳಿದ್ದು ಆರೋಹಣಗೊಳ್ಳುವ ಮಾದರಿಯಲ್ಲಿರುತ್ತವೆ , ತೀರಾ ತಳಗಿನ 2 ಜೋಡಿಗಳು ಸನಿಹವಾಗಿರುತ್ತವೆ ಮತ್ತು ಓರೆಯಾಗಿರುತ್ತವೆ;ಮೂರನೇ ದರ್ಜೆಯ ನಾಳಗಳು ಜಾಲ ಬಂಧ ನಾಳ ವಿನ್ಯಾಸದಲ್ಲಿದ್ದು ಎಲೆದಿಂಡಿಗೆ ಅಡ್ಡವಾಗಿ ಕೂಡುವಂತವು.
ಪುಷ್ಪಮಂಜರಿ/ಹೂಗಳು : ಹೂಗಳು ಬಿಳಿ ಬಣ್ಣ ಹೊಂದಿದ್ದು ಅಕ್ಷಾಕಂಕುಳಿನಲ್ಲಿನ ಮಧ್ಯಾಭಿಸರ ಪುಷ್ಪಮಂಜರಿಯಲ್ಲಿರುತ್ತವೆ ಮತ್ತು ಅನೇಕ ಕೇಸರಗಳನ್ನು ಹೊಂದಿರುತ್ತವೆ.
ಕಾಯಿ /ಬೀಜ : ಬೆರ್ರಿಗಳು ಗೋಳಾಕಾರದಲ್ಲಿದ್ದು 2 ಸೆಂ.ಮೀ.ವರೆಗಿನ ಅಡ್ಡಳತೆ ಹೊಂದಿರುತ್ತವೆ ಮತ್ತು ಹಾಗೂ ಅಗ್ರದಲ್ಲಿ ಸೂಕ್ಷ್ಮ ಕಿರು ಮುಳ್ಳನ್ನು ಹೊಂದಿರುತ್ತವೆ; ಬೀಜಗಳು 2 ರಿಂದ 6 ಇದ್ದು ಅರ್ಧ ಚಂದ್ರಾಕಾರದಲ್ಲಿರುತ್ತವೆ.

ಜೀವಪರಿಸ್ಥಿತಿ :

1800 ಮೀ. ವರೆಗಿನ ಎತ್ತರದ ಪ್ರದೇಶಗಳ ನಿತ್ಯಹರಿದ್ವರ್ಣದಿಂದ ಅರೆ ನಿತ್ಯಹರಿದ್ವರ್ಣ ಕಾಡುಗಳ ಉಪ-ಮೇಲ್ಛಾವಣಿಯಲ್ಲಿ ಈ ಸಸ್ಯ ಕಂಡುಬರುತ್ತದೆ.

ವ್ಯಾಪನೆ :

ಇಂಡೋಮಲೇಶಿಯ;ಪಶ್ಚಿಮ ಘಟ್ಟದ ದಕ್ಷಿಣ,ಮಧ್ಯ ಮತ್ತು ದಕ್ಷಿಣ ಮಹಾರಾಷ್ಟ್ರದ ಸಹ್ಯಾದ್ರಿಯಲ್ಲಿ ಪ್ರಭೇದ ಕಂಡು ಬರುತ್ತದೆ.

ಗ್ರಂಥ ಸೂಚಿ :

Ann. Sci. Nat. Bot. ser.4, 8250.1857; ;Gamble, Fl. Madras 1:52.1997 (Rep. Ed.);Sasidharan, Biodiversity documentation for Kerala- Flowering Plants, part 6 ,33. 2004;Saldanha, Fl. Karnataka 1:273. 1996.

Top of the Page