ಸೆಮೆಕಾರ್ಪಸ್ ಕತಲೇಕಾನೆನ್ಸಿಸ್ Dassapa & Swaminath - ಅನಕಾರ್ಡಿಯೇಸಿ

ಕನ್ನಡದ ಪ್ರಾದೇಶಿಕ ಹೆಸರು : ದೊಡ್ಡೆಲೆ ಹೋಲೆಗಾರ, ಹೆಡಗಲು

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 25 ಮೀ ಎತ್ತರದವರೆಗೂ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ನಯವಾಗಿದ್ದು ಕಂದು ಮಿಶ್ರಿತ ಬೂದುಬಣ್ಣ ಹೊಂದಿದ್ದು, ಅನೇಕ ಪ್ರಮುಖವಾಗಿ ಕಾಣುವ ವಾಯು ವಿನಿಮಯ ಬೆಂಡು ರಂಧ್ರಗಳನ್ನೊಳಗೊಂಡಿರುತ್ತವೆ. ಕಚ್ಚುಗಳು ಮಂದವಾದ ಕಂದುಬಣ್ಣ ಹೊಂದಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದೃಢ ಹಾಗೂ ರೋಮರಹಿತವಾಗಿದ್ದು ನಯವಾದ ಮೇಲ್ಮೈ ಹೊಂದಿರುತ್ತವೆ.
ಜಿನುಗು ದ್ರವ : ಸಸ್ಯಕ್ಷೀರ ಜಲರೂಪಿಯಾಗಿದ್ದು ಖಾರ ಹಾಗೂ ಕಹಿ ಮಿಶ್ರಿತವಾಗಿರುತ್ತದೆ. ಗಾಳಿಗೆ ಒಡ್ಡಿದ ನಂತರ ಕಪ್ಪುಬಣ್ಣಕ್ಕೆ ತಿರುಗುತ್ತದೆ.
ಎಲೆಗಳು : ಎಲೆಗಳು ಸರಳವಾಗಿದ್ದು, ಪರ್ಯಾಯ ಸುತ್ತು ಚೋದನಾ ವ್ಯವಸ್ಥೆಯಲ್ಲಿರುತ್ತವೆ. ಎಲೆತೊಟ್ಟುಗಳು 5-10ಸೆ.ಮೀ. ಉದ್ದವಾಗಿರುತ್ತವೆ, ಎಲೆ ಪತ್ರಗಳು (25) 45-100 × (6) 15-22 ಸೆ.ಮೀ. ಗಾತ್ರ ಹೊಂದಿದ್ದು, ಚತುರಸ್ರಾಕಾರ ಈಟಿ ಅಥವಾ ಬುಗುರಿಯಾಕಾರದಲ್ಲಿರುತ್ತವೆ. ಪತ್ರಗಳು ಚೂಪಾಗಿಲ್ಲದ, ಏಕಾಏಕಿಯಾಗಿ ಕ್ರಮೇಣ ಚೂಪಾದ ತುದಿಭಾಗ, ಓರೆಯಾಗಿ ಬೆಣೆಯಾಕಾರದ ಬುಡಭಾಗ ಹಾಗೂ ನಯವಾದ ಅಲೆಯಾಕಾರದ ಅಂಚನ್ನು ಹೊಂದಿರುತ್ತವೆ. ಎರಡನೇ ದರ್ಜೆಯ ನಾಳಗಳು ಸುಮಾರು 20 ಜೋಡಿಗಳಿದ್ದು, ತೃತೀಯ ದರ್ಜೆಯವು ಜಾಲಬಂಧ ನಾಳ ವಿನ್ಯಾಸದಲ್ಲಿರುತ್ತವೆ.
ಪುಷ್ಪಮಂಜರಿ/ಹೂಗಳು : ಪುಷ್ಪಮಂಜರಿ ಪುನರಾವೃತ್ತಿಯಾಗಿ ಕವಲೊಡೆಯುವ, ಅಕ್ಷಾಕಂಕುಳಿನಲ್ಲಿರುವ ಮಾದರಿಯಾಗಿದ್ದು ಏಕಲಿಂಗಿಗಳಾದ ಹಾಗೂ ಹಸಿರು ಬಣ್ಣದ ಹೂಗಳನ್ನೊಳಗೊಂಡಿರುತ್ತದೆ. ಗಂಡು ಹೂಗಳನ್ನುಳ್ಳ ಪುಷ್ಪಮಂಜರಿ 30 ರಿಂದ 50 ಸೆಂ.ಮೀ. ಉದ್ದವಿರುತ್ತದೆ. ಹೆಣ್ಣು ಹೂಗಳನ್ನುಳ್ಳ ಪುಷ್ಪಮಂಜರಿ 5 ರಿಂದ 15 ಸೆಂ.ಮೀ. ಉದ್ದವಿದ್ದು, ಕಿಲುಬು ಬಣ್ಣದ, ಸೂಕ್ಷ್ಮವಾದ ಮೃದು ತುಪ್ಪಳದಿಂದ ಆವೃತವಾಗಿರುತ್ತದೆ.
ಕಾಯಿ /ಬೀಜ : ಕಾಯಿಗಳು 3 ಸೆಂ.ಮೀ. ಗಾತ್ರದವು ಹಾಗೂ ಒಂದು ಬೀಜವನ್ನೊಳಗೊಂಡಿರುವಂತಹವು, ಓರೆಯಾದ ಮೂತ್ರಪಿಂಡದ ಆಕಾರ ಹೊಂದಿದ್ದು ಚಪ್ಪಟೆಯಾಗಿರುತ್ತವೆ.

ಜೀವಪರಿಸ್ಥಿತಿ :

ತೆರೆವ ನಿತ್ಯಹರಿದ್ವರ್ಣ ಕಾಡುಗಳ ಜೌಗು ಪ್ರದೇಶದ ಸುತ್ತಮುತ್ತ ಈ ಪ್ರಭೇದ ಕಾಣಸಿಗುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಭೇದ ಈವರೆವಿಗೆ ಮಧ್ಯಸಹ್ಯಾದ್ರಿಯ ಶಿವಮೊಗ್ಗದ ಕತ್ತಲೆಕಾನ್ ಪ್ರದೇಶದಿಂದ ಮಾತ್ರ ವರದಿಯಾಗಿದೆ.

ಗ್ರಂಥ ಸೂಚಿ :

Indian For. 126: 78.2000

Top of the Page