ಸುರೆಗಡ ಅಂಗುಸ್ಟಿಫೋಲಿಯ (Baill. ex Muell.-Arg.) Airy Shaw - ಯೂಫೊರ್ಬಿಯೇಸಿ

Synonym : ಗೆಲೋನಿಯಂ ಅಂಗುಸ್ಟಿಫೋಲಿಯಮ್ Baill. ex Muell.-Arg; ಗೆಲೋನಿಯಂ ಲ್ಯಾನ್ಸಿಯೋಲೇಟಂ sensu J. Hk.

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 6 ಮೀ. ಎತ್ತರದವರೆಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಬೂದು ಬಣ್ಣದಲ್ಲಿದ್ದು ನಯವಾಗಿರುತ್ತದೆ; ಕಚ್ಚು ಮಾಡಿದ ಜಾಗ ಕೆನೆ ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ಕಾವಿನೆಲೆಗಳು ಉದುರಿ ಹೋಗುವಂತವು; ತೊಟ್ಟುಗಳು 0.3-0.5 ಸೆಂ.ಮೀ.ಉದ್ದವಿದ್ದು ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯದ ಆಕಾರದಲ್ಲಿರುತ್ತವೆ ಮತ್ತು ರೋಮರಹಿತವಾಗಿರುತ್ತವೆ ; ಪತ್ರಗಳು 3.5 -10.2 X 2-4 ಸೆಂ. ಮೀ. ಗಾತ್ರದಲ್ಲಿದ್ದು,ಬುಗುರಿ ಅಥವಾ ಬುಗುರಿ-ಭರ್ಜಿಯ ಆಕಾರ ಹೊಂದಿರುತ್ತವೆ; ಪತ್ರಗಳು ಚೂಪಲ್ಲದ ಮಾದರಿಯ ತುದಿ ಹೊಂದಿರುತ್ತವೆ ,ಬುಡ ಬೆಣೆಯಾಕಾರದ ಮಾದರಿಯಲ್ಲಿರುತ್ತದೆ ಕೆಲವು ವೇಳೆ ಅಸಮವಾಗಿರುತ್ತದೆ;ಪತ್ರದ ಮೇಲ್ಭಾಗದಲ್ಲಿ ಮಧ್ಯ ನಾಳ ಚಪ್ಪಟೆಯಾಗಿರುತ್ತದೆ; ಎರಡನೇ ದರ್ಜೆಯ ನಾಳಗಳು ಅಂದಾಜು 6 ಜೋಡಿಗಳಿರುತ್ತವೆ ಮತ್ತು ಅಪ್ರಮುಖವಾಗಿರುತ್ತವೆ; ಮೂರನೇ ದರ್ಜೆಯ ನಾಳಗಳು ಅಸ್ಪಷ್ಟವಾಗಿರುತ್ತವೆ.
ಪುಷ್ಪಮಂಜರಿ/ಹೂಗಳು : ಹೂಗಳು ಏಕಲಿಂಗಿಗಳಾಗಿದ್ದು ಗಂಡು ಮತ್ತು ಹೆಣ್ಣು ಹೂಗಳು ಪ್ರತ್ಯೇಕ ಸಸ್ಯಗಳಲ್ಲಿರುತ್ತವೆ; ಗಂಡು ಹೂಗಳು ಸಣ್ಣ ಗಾತ್ರ ಹೊಂದಿರುತ್ತವೆ ಮತ್ತು ಅಕ್ಷಾಕಂಕುಳಿನಲ್ಲಿನ ಗುಚ್ಛಗಳಲ್ಲಿರುತ್ತವೆ; ಹೆಣ್ಣು ಹೂಗಳು ಒಂಟಿಯಾಗಿದ್ದು ಅಕ್ಷಾಕಂಕುಳಿನಲ್ಲಿರುತ್ತವೆ.
ಕಾಯಿ /ಬೀಜ : ಸಂಪುಟ ಫಲಗಳು 0.6 ಸೆಂ.ಮೀ. ವ್ಯಾಸ ಹೊಂದಿದ್ದು ನಯವಾಗಿರುತ್ತವೆ ಮತ್ತು ಆಳವಾದ ಹಾಲೆಗಳನ್ನೊಳಗೊಂಡಿರುತ್ತವೆ ಮತ್ತು ಹಾಲೆಗಳು ಬಿಲ್ಲಿನ ತುದಿಯಾಕಾರದ ರಚನೆಯನ್ನು ಹೊಂದಿರುತ್ತವೆ;ಪ್ರತಿ ಹಾಲೆಯಲ್ಲಿ ಒಂದು ಬೀಜವಿರುತ್ತದೆ.

ಜೀವಪರಿಸ್ಥಿತಿ :

ಕರಾವಳಿ ಪ್ರದೇಶದಲ್ಲಿನ ನಿತ್ಯಹರಿದ್ವರ್ಣ ಕಾಡುಗಳು ಮತ್ತು ಒಣ ನಿತ್ಯಹರಿದ್ವರ್ಣ ಕಾಡುಗಳ ಬೆಟ್ಟದ ಗಾಳಿಮರೆಯ ಪಕ್ಕದ ದಿಕ್ಕಿನಲ್ಲಿ ಬೆಳೆಯುವ ಮರಗಳಾಗಿ ಈ ಪ್ರಭೇದ ಕಂಡುಬರುತ್ತದೆ.

ವ್ಯಾಪನೆ :

ಭಾರತದ ಪರ್ಯಾಯ ದ್ವೀಪ;ಪಶ್ಚಿಮ ಘಟ್ಟದ ಮಲಬಾರಿನ ಕರಾವಳಿ ಮತ್ತು ದಕ್ಷಿಣ ಸಹ್ಯಾದ್ರಿಯ ಬೆಟ್ಟದ ಗಾಳಿಮರೆಯ ಪಕ್ಕದ ದಿಕ್ಕಿನಲ್ಲಿನ ಪ್ರದೇಶಗಳು.

ಗ್ರಂಥ ಸೂಚಿ :

Kew Bull. 23:128.1969; Gamble, Fl.Madras 2:1343.1993 (rep.ed.) ; Sasidharan, Biodiversity documentation for Kerala – Flowering plants, part 6, 429.2004.

Top of the Page