ಸಿಂಪ್ಲೊಕಾಸ್ ಅನಮಲ್ಲಯಾನ Bedd. - ಸಿಂಪ್ಲೊಕೇಸಿ

:

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಸ್ಥಿತಿ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 7 ಮೀ ಎತ್ತರದವರೆಗಿನ ಗಾತ್ರದ ಮರಗಳು.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ತೆಳುವಾಗಿದ್ದು,ಸಂಕುಚಿತವಾಗಿರುವ ರೀತಿಯಿಂದ ದುಂಡಾಗಿರುವರೆಗಿನ ಮಾದರಿಯಲ್ಲಿರುತ್ತವೆ,ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ತೊಟ್ಟುಗಳು 0.2 – 0.3 ಸೆಂ.ಮೀ. ಉದ್ದವಿದ್ದು,ಕಾಲುವೆಗೆರೆ ಸಮೇತವಿರುತ್ತವೆ, ರೋಮರಹಿತವಾಗಿರುತ್ತವೆ; ಪತ್ರಗಳು 2.5 – 4.5 X 1.7 – 2.5 ಸೆಂ.ಮೀ. ಗಾತ್ರ, ಅಂಡವೃತ್ತದ ಆಕಾರ ಹೊಂದಿದ್ದು, ಚೂಪಾದುದರಿಂದ ದುಂಡಾದ ಮಾದರಿವರೆಗಿನ ತುದಿ, ಮತ್ತು ಬೆಣೆಯಾಕಾರದಿಂದ ಒಳಬಾಗಿದ ಆಕಾರವರೆಗಿನ ಮಾದರಿಯ ಬುಡ, ದಂತಿತ ಮತ್ತು ಹಿಂಸುರುಳಿಗೊಂಡ ಅಂಚು ಹೊಂದಿದ್ದು,ರೋಮರಹಿತವಾಗಿದ್ದು ತಳಭಾಗ ಮಾಸಲು ಬೂದು ಹಸಿರು ಬಣ್ಣದಲ್ಲಿರುತ್ತದೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಕಾಲುವೆಗೆರೆ ಸಮೇತವಿರುತ್ತದೆ;ಎರಡನೇ ದರ್ಜೆಯ ನಾಳಗಳು 5 - 7 ಜೋಡಿಗಳಿರುತ್ತವೆ;ಅಂತರ ಅಂಚಿನ ನಾಳಗಳು ಇರುತ್ತವೆ;ಮೂರನೇ ದರ್ಜೆಯ ನಾಳಗಳು ವಿಶಾಲ ಜಾಲಬಂಧ ನಾಳ ವಿನ್ಯಾಸದಲ್ಲಿರುತ್ತವೆ.
ಪುಷ್ಪಮಂಜರಿ / ಹೂಗಳು : ಹೂಗಳು ಒಂಟಿಯಾಗಿ, ಅಕ್ಷಾಕಂಕುಳಿನಲ್ಲಿರುತ್ತವೆ;ತೊಟ್ಟುಗಳು 1.2 ಸೆಂ.ಮೀ ವರೆಗಿನ ಉದ್ದವಿರುತ್ತವೆ.
ಕಾಯಿ / ಬೀಜ : ಡ್ರೂಪ್ಗಳು ವರ್ತುಲ ಸ್ಥಂಭಾಕೃತಿ ಹೊಂದಿದ್ದು ಮುಕುಟದಲ್ಲಿ ಪುಷ್ಪ ಪಾತ್ರೆಯ ಎಸಳುಗಳ ಸಮೇತವಿರುತ್ತವೆ; ಬೀಜಗಳ ಸಂಖ್ಯೆ 1 – 3.

ಜೀವಪರಿಸ್ಥಿತಿ :

1800 ಮತ್ತು 2200 ಮೀ.ನಡುವಿನವರೆಗಿನ ಅತಿಎತ್ತರದ ಪ್ರದೇಶಗಳ ನಿತ್ಯ ಹರಿದ್ವರ್ಣ ಕಾಡುಗಳ ಒಳಛಾವಣಿಯಲ್ಲಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ನೈರುತ್ಯ ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಭೇದ ಅಣ್ಣಾಮಲೈ ಮತ್ತು ಪಳನಿ ಬೆಟ್ಟ ಪ್ರದೇಶಗಳಲ್ಲಿ ವ್ಯಾಪಿಸಿದೆ.

ಸ್ಥಿತಿ :

ಉಳಿವಿನ ಆತಂಕಕಾರಿ ಸ್ಥಿತಿ (IUCN,2000).

ಗ್ರಂಥ ಸೂಚಿ :

Beddome, For. Man. Bot. 150. 1872 & Ic. t. 116. 1868-1874; Gamble, Fl. Madras 2: 784. 1993 (re.ed.); Sasidharan, Biodiversity documentation for Kerala- Flowering Plants, part 6: 273. 2004; Nootboom, Rev. Symplocac. 124. 1975.

Top of the Page