ಸಿಂಪ್ಲೊಕಾಸ್ ಮ್ಯಾಕ್ರೋಫಿಲ್ಲ Wall. ex DC ssp. - ಸಿಂಪ್ಲೊಕೇಸಿ

:

Vernacular names : Tamil: ಮಲನ್ಕುರ್ವಿMalayalam: ಸಂಕಣಿ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 10 ಮೀ. ಎತ್ತರದವರೆಗಿನ ಮರಗಳು.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದೃಢವಾಗಿದ್ದು ದುಂಡಾಗಿರುತ್ತವೆ ಮತ್ತು ತುಂಬಾ ದಟ್ಟವಾದ ತುಕ್ಕು ಬಣ್ಣದ ಮೃದುತುಪ್ಪಳದಿಂದ ಕೂಡಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ, ಕೆಲವು ವೇಳೆ ತುದಿಯಲ್ಲಿ ಗುಂಪಾಗಿರುತ್ತವೆ;ತೊಟ್ಟುಗಳು 1 – 2.5 ಸೆಂ.ಮೀ. ಉದ್ದವಿದ್ದು, ಅಡ್ಡಸೀಳಿದಾಗ ಸಪಾಟ ಪೀನ ಮಧ್ಯದ ಆಕಾರದಲ್ಲಿರುತ್ತವೆ, ತುಕ್ಕು ಬಣ್ಣದ ದಟ್ಟ ಮೃದುತುಪ್ಪಳದಿಂದ ಕೂಡಿರುತ್ತವೆ;ಪತ್ರಗಳು 6.5 – 20 X 3 – 9 ಸೆಂ.ಮೀ. ಗಾತ್ರ, ಅಂಡವೃತ್ತದ ಆಕಾರ ಹೊಂದಿದ್ದು, ತಿರುಚಿಕೊಂಡ ಅಗ್ರವನ್ನುಳ್ಳ ಕ್ರಮೇಣ ಚೂಪಾಗುವ ಮಾದರಿಯ ತುದಿ, ಮತ್ತು ಚೂಪಾದ ಅಥವಾ ದುಂಡಾದ ಬುಡ, ಗರಗಸ ದಂತಿತವಾದ ಅಂಚು ಹೊಂದಿದ್ದು ಬಲಿತಾಗ ಹಿಂಸುರುಳಿಯನ್ನು ಹೊಂದಿರುತ್ತವೆ, ಪತ್ರಗಳ ಮೇಲ್ಮೈ ತೊಗಲನ್ನೋಲುವ ಮಾದರಿಯಲ್ಲಿದ್ದು ಒಣಗಿದಾಗ ಹಳದಿ ಛಾಯೆಯನ್ನು ಹೊಂದಿರುತ್ತದೆ,ಪತ್ರಗಳ ಮೇಲ್ಭಾಗ ರೋಮರಹಿತವಾಗಿದ್ದು, ತಳಭಾಗ ವಿರಳವಾದ ರೋಮಗಳ ಸಮೇತವಿದ್ದು, ಮಧ್ಯನಾಳ ಮತ್ತು ಎರಡನೇ ದರ್ಜೆಯ ನಾಳಗಳು ತುಂಬಾ ಸಂದಣಿಗೊಂಡ ದಟ್ಟ ಮೃದುತುಪ್ಪಳ ಹೊಂದಿರುತ್ತವೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಕಾಲುವೆಗೆರೆ ಸಮೇತವಿರುತ್ತದೆ;ಎರಡನೇ ದರ್ಜೆಯ ನಾಳಗಳು 8 – 12 ಇದ್ದು ಪತ್ರದ ತಳಭಾಗದಲ್ಲಿ ಪ್ರಮುಖವಾಗಿರುತ್ತವೆ;ಮೂರನೇ ದರ್ಜೆಯ ನಾಳಗಳು ಲಂಬ ರೇಖೆಗೆ ಸಮಕೋನದಲ್ಲಿದ್ದು ಜಾಲಬಂಧ ನಾಳ ವಿನ್ಯಾಸದಲ್ಲಿದ್ದು ಎಲೆ ದಿಂಡಿಗೆ ಅಡ್ಡವಾಗಿ ಕೂಡುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿ ಅಕ್ಷಾಕಂಕುಳಿನಲ್ಲಿನ ಕದಿರು ಮಂಜರಿ ಮಾದರಿಯವುಗಳಾಗಿದ್ದು 7 ಸೆಂ.ಮೀ.ವರೆಗಿನ ಉದ್ದ ಹೊಂದಿರುತ್ತವೆ;ಹೂಗಳು ತೊಟ್ಟುರಹಿತ.
ಕಾಯಿ / ಬೀಜ : ಡ್ರೂಪ್ಗಳು ವರ್ತುಲ ಸ್ಥಂಭಾಕೃತಿಯಲ್ಲಿದ್ದು, 2 ಸೆಂ.ಮೀ.ವರೆಗಿನ ಉದ್ದವಿದ್ದು ,ಹಸಿರು ಮಿಶ್ರಿತ ಬಿಳಿ ಬಣ್ಣ ಹೊಂದಿರುತ್ತವೆ.

ಜೀವಪರಿಸ್ಥಿತಿ :

1100 ಮತ್ತು 2000 ಮೀ. ನಡುವಿನ ಅತಿ ಎತ್ತರದ ಪ್ರದೇಶಗಳ ನಿತ್ಯ ಹರಿದ್ವರ್ಣ ಕಾಡುಗಳ ಒಳಛಾವಣಿಯಲ್ಲಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ಭಾರತ ಮತ್ತು ಶ್ರೀಲಂಕಾ;ಪಶ್ಚಿಮ ಘಟ್ಟದ ದಕ್ಷಿಣ ಮತ್ತು ಮಧ್ಯ (ಚಿಕ್ಕಮಗಳೂರಿನ ವರೆಗೆ)ಸಹ್ಯಾದ್ರಿ ಪ್ರದೇಶಗಳಲ್ಲಿ ಈ ಪ್ರಭೇದ ವ್ಯಾಪಿಸಿದೆ.

ಗ್ರಂಥ ಸೂಚಿ :

DC, Prodr. 8: 257.1844; Gamble, Fl. Madras 2: 784. 1993 (re.ed.); Sasidharan, Biodiversity documentation for Kerala- Flowering Plants, part 6: 273. 2004; Nootboom, Rev. Symplocac. 227. 1975.

Top of the Page