ಟಬರ್ನೆಮೊಂಟಾನ ಹೇನಿಯಾನ Wall. - ಅಪೋಸೈನೇಸಿ

Synonym : ಎರ್ವಟಾಮಿಯ ಹೇನಿಯಾನ (Wall.) Cooke

ಕನ್ನಡದ ಪ್ರಾದೇಶಿಕ ಹೆಸರು : ಬಿಳಿಕೊಡಸಲು, ಹಾಲ್ಮೇಟಿ, ಮದ್ದರಸಗಿಡ, ಮದ್ಲೆಮರ, ನಾಗರಕುಡ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಸ್ಥಿತಿ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 8ಮೀ ಎತ್ತರದವರೆಗೆ ಬೆಳೆಯುವ ಎಲೆಯುದುರ ಸ್ವಭಾವವುಳ್ಳ ಪೊದೆಗಳು.
ಕಾಂಡ ಮತ್ತು ತೊಗಟೆ : ತೊಗಟೆ ಬೂದು ಬಣ್ಣ ಹೊಂದಿದ್ದು ಚಕ್ಕೆಯುಕ್ತ ಮಾದರಿಯಲ್ಲಿರುತ್ತವೆ. ಕಚ್ಚು ಮಾಡಿದ ಜಾಗ ನಸುಗೆಂಪು ಬಣ್ಣವಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ಗುಂಡಾಕಾರದಲ್ಲಿದ್ದು ರೋಮರಹಿತವಾಗಿರುತ್ತವೆ.
ಜಿನುಗು ದ್ರವ : ಜಿನುಗುದ್ರವ ಹಾಲಿನ ಶ್ವೇತ ಬಣ್ಣದ್ದಾಗಿರುತ್ತದೆ.
ಎಲೆಗಳು : ಎಲೆಗಳು ಸರಳ ಹಾಗೂ ಅಸಮರೂಪಿಗಳಾಗಿದ್ದು ಅಭಿಮುಖಗಳಾಗಿ ಕತ್ತರಿ ಮಾದರಿಯ ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ಎಲೆತೊಟ್ಟು 0.6 ರಿಂದ 2 ಸೆಂ.ಮೀ. ಉದ್ದವಿದ್ದು ಬುಡದಲ್ಲಿ ಕಿರಿದಾದ ಅಪ್ಪು ಒರೆಯನ್ನು ಹೊಂದಿರುತ್ತದೆ; ಪತ್ರ 10-25 x 3-8.5 ಸೆಂ.ಮೀ. ಗಾತ್ರ ಹೊಂದಿದ್ದು ಅಂಡವೃತ್ತಾಕೃತಿಯಲ್ಲಿದ್ದು ಬಾಲರೂಪಿಯಾಗಿ ಕ್ರಮೇಣ ಚೂಪಾಗುವ ತುದಿ ಹಾಗೂ ಚೂಪಾದ ಅಥವಾ ಒಳಬಾಗಿದ ಮತ್ತು ಕಾಂಡದವರೆವಿಗೂ ವಿಸ್ತರಿಸುವ ಎಲೆಬುಡ ಹೊಂದಿರುತ್ತದೆ. ಎಲೆಯಂಚು ನಯವಾಗಿದ್ದು, ಮೇಲ್ಮೈ ಕಾಗದವನ್ನು ಹೋಲುತ್ತದೆ ಹಾಗೂ ರೋಮರಹಿತವಾಗರುತ್ತದೆ; ಎರಡನೇ ದರ್ಜೆಯ ನಾಳಗಳು 8 ರಿಂದ 15 ಜೋಡಿಗಳಿರುತ್ತವೆ; ಮೂರನೇ ದರ್ಜೆಯ ನಾಳಗಳು ಜಾಲಬಂಧನಾಳ ವಿನ್ಯಾಸದವು.
ಪುಷ್ಪಮಂಜರಿ/ಹೂಗಳು : ಹೂಗಳು ಸುವಾಸನಾಯುಕ್ತ ಹಾಗೂ ಶ್ವೇತ ಬಣ್ಣ ಹೊಂದಿದ್ದು ತುದಿಯಲ್ಲಿನ ಮಧ್ಯಾರಂಭಿ ಪುಷ್ಪಮಂಜರಿಯಲ್ಲಿರುತ್ತವೆ.
ಕಾಯಿ /ಬೀಜ : ಕಾಯಿಗಳು ಫಾಲಿಕಲ್ ಪುಂಜಫಲ ಮಾದರಿಯವು. ಆಕಾರದಲ್ಲಿ ನಾವೆಯನ್ನು ಹೋಲುವಂತ-ಹವುಗಳಾಗಿದ್ದು ಕಿತ್ತಳೆ-ಹಳದಿ ಬಣ್ಣವನ್ನು ಹೊಂದಿರುತ್ತವೆ. ಕಾಯಿಗಳಲ್ಲಿ ಹಲವಾರು ಬೀಜಗಳಿದ್ದು ಪತ್ರೆಯಿಂದ ಆವೃತ ಹೊಂದಿರುತ್ತವೆ.

ಜೀವಪರಿಸ್ಥಿತಿ :

850ಮೀ ಎತ್ತರದ ಪ್ರದೇಶಗಳಲ್ಲಿನ ನಿತ್ಯಹರಿದ್ವರ್ಣ ಕಾಡುಗಳ ಅಂಚಿನಲ್ಲಿ ಹಾಗೂ ಸಾಮಾನ್ಯವಾಗಿ ತೇವಾಂಶವುಳ್ಳ ಎಲೆಯುದುರು ಕಾಡುಗಳಲ್ಲಿ ಈ ಪ್ರಬೇಧ ಕಾಣಸಿಗುತ್ತದೆ.

ವ್ಯಾಪನೆ :

ಪಶ್ಚಿಮಘಟ್ಟಗಳಿಗೆ ಸೀಮಿತವಾಗಿರುವ ಈ ಪ್ರಬೇಧ ದಕ್ಷಿಣ ಸಹ್ಯಾದ್ರಿಯಿಂದ ಮಹಾರಾಷ್ಟ್ರದ ದಕ್ಷಿಣ ಸಹ್ಯಾದ್ರಿ ಪ್ರದೇಶಗಳಲ್ಲಿ ಕಂಡು ಬರುತ್ತವೆ.

ಸ್ಥಿತಿ :

ಕಡಿಮೆ ಅಪಾಯದಂಚಿನ ಸ್ಥಿತಿ: ನಶಿಸುವ ಭೀತಿಗೆ ಹತ್ತಿರದಲ್ಲಿನ ಸ್ಥಿತಿ (IUCN, 2000)

ಗ್ರಂಥ ಸೂಚಿ :

Edward’s Bot. Reg. 15. 1273. 1829; Gamble, Fl. Madras 2: 813. 1997 (re. ed); Sasidharan, Biodiversity documentation for Kerala- Flowering Plants, part 6: 285. 2004; Keshava Murthy and Yoganarasimhan, Fl. Coorg (Kodagu) 277. 1990; Cook, Fl. Bombay 2: 134. 1902.

Top of the Page