ವ್ಯಾಕ್ಸೀನಿಯಮ್ ಲೆಶೆನಾಲ್ಟಿಯೈ Wt. - ವ್ಯಾಕ್ಸೀನಿಯೇಸಿ

:

Vernacular names : Tamil: ಕಟವು,ಕಲವು,ಕೇಲಮರಂMalayalam: ಅಂಡುವಾಣ,ಕಲಾ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 7 ಮೀ. ಎತ್ತರದವರೆಗಿನ ಸಣ್ಣ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕಂದು ಬಣ್ಣದಲ್ಲಿದ್ದು,ಅನಿಯತವಾಗಿ ಚಕ್ಕೆ ರೂಪದಲ್ಲಿರುತ್ತದೆ;ಕಚ್ಚು ಮಾಡಿದ ಜಾಗ ಹಳದಿ ಛಾಯೆ ಹೊಂದಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ಕೋನಯುಕ್ತವಾದ ರೀತಿಯಿಂದ ಉಪದುಂಡಾಗಿರುವರೆಗಿನ ರೀತಿಯವರೆಗಿನ ಆಕಾರದಲ್ಲಿರುತ್ತವೆ, ಮೃದುತುಪ್ಪಳದ ಸಮೇತವಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ತೊಟ್ಟುಗಳು 0.5 – 1 ಸೆಂ.ಮೀ. ಉದ್ದವಿದ್ದು, ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯದ ಆಕಾರ ಹೊಂದಿರುತ್ತವೆ ಎಳೆಯದಾಗಿದ್ದಾಗ ಮೃದುತುಪ್ಪಳದಿಂದ ಕೂಡಿರುತ್ತವೆ;ಪತ್ರಗಳು 4.5 - 6.5 X 2.5–3 ಸೆಂ.ಮೀ. ಗಾತ್ರ, ಅಂಡಾಕಾರ,ಚತುರಸ್ರ ಅಥವಾ ಚತುರಸ್ರ-ಬುಗುರಿಯವರೆಗಿನ ಆಕಾರ ಹೊಂದಿದ್ದು,ಕೆಲವು ವೇಳೆಯಲ್ಲಿ ಉಪ ವೃತ್ತಾಕಾರದಲ್ಲಿರುತ್ತವೆ,ಪತ್ರಗಳ ತುದಿ ಚೂಪಾಗಿ ಅಥವಾ ಕ್ರಮೇಣ ಚೂಪಾಗುವ ಮಾದರಿಯಲ್ಲಿದ್ದು, ಬುಡ ಒಳಬಾಗಿದ ಮಾದರಿಯಿಂದ ಚೂಪಾದ ಅಥವಾ ಚೂಪಲ್ಲದ ಮಾದರಿಯಲ್ಲಿರುತ್ತದೆ,ಅಂಚು ಗರಗಸ ದಂತಿತವಾಗಿರುತ್ತವೆ,ಪತ್ರಗಳು ರೋಮರಹಿತವಾಗಿದ್ದು, ತೊಗಲನ್ನೋಲುವ ಮೇಲ್ಮೈ ಹೊಂದಿರುತ್ತವೆ,ಪತ್ರಗಳ ತಳಭಾಗದ ಮಧ್ಯ ನಾಳದ ಮೇಲೆ ರಸಗ್ರಂಥಿಗಳಿರುತ್ತವೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಸ್ವಲ್ಪಮಟ್ಟಿಗೆ ಮೇಲೆದ್ದಿರುತ್ತದೆ ಅಥವಾ ಚಪ್ಪಟೆಯಾಗಿರುತ್ತದೆ; ಎರಡನೇ ದರ್ಜೆಯ ನಾಳಗಳು 4 ರಿಂದ 6 ಜೋಡಿಗಳಿರುತ್ತವೆ; ಮೂರನೇ ದರ್ಜೆಯ ನಾಳಗಳು ವಿಶಾಲ ಜಾಲಬಂಧ ನಾಳ ವಿನ್ಯಾಸದಲ್ಲಿದ್ದು ಪ್ರಮುಖವಾಗಿರುವುದಿಲ್ಲ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿ ಅಕ್ಷಾಕಂಕುಳಿನಲ್ಲಿ ಮತ್ತು ತುದಿಯಲ್ಲಿನ ಮಧ್ಯಾಭಿಸರ ಮಾದರಿಯವು;ಹೂಗಳು ಹೂಜಿಯ ಆಕಾರದಲ್ಲಿದ್ದು,ನಸುಗೆಂಪಾಗಿರುತ್ತವೆ, ಅಪರೂಪವಾಗಿ ಬಿಳಿ ಬಣ್ಣದಲ್ಲಿರುತ್ತವೆ;ಪುಷ್ಪ ದಳಗಳುರೋಮರಹಿತ;ಕೇಸರಗಳು ಊಬಿನ ಸಮೇತ ವಿರುತ್ತವೆ;ತೊಟ್ಟು ಅಂದಾಜು 0.3 ಸೆಂ.ಮೀ. ಉದ್ದವಾಗಿರುತ್ತವೆ.
ಕಾಯಿ / ಬೀಜ : ಬೆರ್ರಿಗಳು ನಯವಾಗಿದ್ದು,ಗೋಳಾಕಾರದಲ್ಲಿರುತ್ತವೆ;ಬೀಜಗಳ ಸಂಖ್ಯೆ ಹಲವಾರು.

ಜೀವಪರಿಸ್ಥಿತಿ :

1600 ಮತ್ತು 2000 ಮೀ. ನಡುವಿನ ಅತಿಎತ್ತರದ ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಈ ಸಸ್ಯ ಬೆಳೆಯುತ್ತದೆ.

ವ್ಯಾಪನೆ :

ಭಾರತ,ಮ್ಯಾನ್ಮಾರ್ ಮತ್ತು ಶ್ರೀಲಂಕಾ; ಪಶ್ಚಿಮ ಘಟ್ಟದ ದಕ್ಷಿಣ ಸಹ್ಯಾದ್ರಿಯಲ್ಲಿ ಈ ಪ್ರಭೇದ ಕಂಡುಬರುತ್ತದೆ.

ಗ್ರಂಥ ಸೂಚಿ :

Wight, Ic. t. 1188. 1848; Gamble, Fl. Madras 2: 742. 1993 (re.ed.); Sasidharan, Biodiversity documentation for Kerala- Flowering Plants, part 6: 263. 2004.

Top of the Page