ವಿಬುರ್ನಮ್ ಕೋರಿಯಾಸಿಯಮ್ Bl. - ಕ್ಯಾಪ್ರಿಫೋಲಿಯೇಸಿ

Synonym : ವಿಬುರ್ನಮ್ ಕ್ಯಾಪಿಟೆಲ್ಲೇಟಮ್ Wt. & Arn.

ಕನ್ನಡದ ಪ್ರಾದೇಶಿಕ ಹೆಸರು : ಎಲೆಸಾಂಡೆ, ಹೆಲಸುಂಡೆ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 8 ಮೀ. ಎತ್ತರದವರೆಗೆ ಬೆಳೆಯುವ ಸಣ್ಣ ಮರಗಳು.
ಎಲೆಗಳು : ಎಲೆಗಳು ಸರಳ, ಕತ್ತರಿಯಾಕಾರದ ಅಭಿಮುಖ ಜೋಡಣಾ ವ್ಯವಸ್ಥೆಯಲ್ಲಿರುತ್ತವೆ; ಕಾವಿನೆಲೆಗಳು 2 ರಿಂದ 3 ಸೆ.ಮೀ. ಉದ್ದವಿದ್ದು ಕಾಲುವೆಗೆರೆಗಳನ್ನು ಹೊಂದಿರುತ್ತವೆ; ಪತ್ರ 5 – 13 2.5 – 4 ಸೆ.ಮೀ., ಅಂಡ-ಭರ್ಜಿಯಾಕಾರದಲ್ಲಿದ್ದು, ಉದ್ದವಾದ ಕ್ರಮೇಣ ಚೂಪಾಗುವ ಮಾದರಿಯ ತುದಿಭಾಗ, ಚೂಪಾದುದರಿಂದ ಹಿಡಿದು ಸ್ವಲ್ಪಮಟ್ಟಿಗೆ
ಪುಷ್ಪಮಂಜರಿ/ಹೂಗಳು : ಪುಷ್ಪಮಂಜರಿ ಸಂಯುಕ್ತ ಪೀಠಛತ್ರ ಮಾದರಿಯವು ಹಾಗೂ ನೀಳಛತ್ರ ರೂಪಿಗಳು; ಹೂಗಳು ಹಸಿರು ಮಿಶ್ರಿತ ಶ್ವೇತ ವರ್ಣದವು, ಪರಾಗಶಯ ನೇರಳೆ ಬಣ್ಣ ಹೊಂದಿರುತ್ತವೆ.
ಕಾಯಿ /ಬೀಜ : ಕಾಯಿಗಳು ಡ್ರೂಪ್ ಮಾದರಿಯವಾಗಿದ್ದು ಅಂಡವೃತ್ತಾಕೃತಿಯಲ್ಲಿದ್ದು ರೋಮರಹಿತವಾಗಿರುತ್ತವೆ. ಡ್ರೂಪುಗಳು ಅದುಮಿದಂತಿದ್ದು ಒಂದು ಬೀಜವನ್ನೊಳಗೊಂಡಿರುತ್ತದೆ.

ಜೀವಪರಿಸ್ಥಿತಿ :

ಸಾಮಾನ್ಯವಾಗಿ 1600 ರಿಂದ 1800 ಮೀ.ವರೆಗಿನ ಅತಿ ಎತ್ತರ ಪ್ರದೇಶಗಳ ನಿತ್ಯಹರಿದ್ವರ್ಣ ಕಾಡುಗಳ ಅಂಚಿನಲ್ಲಿ ಈ ಪ್ರಭೇದ ಕಂಡುಬರುತ್ತದೆ.

ವ್ಯಾಪನೆ :

ಭಾರತ, ಭೂತಾನ್, ಮ್ಯಾನ್ಮಾರ್ ಮತ್ತು ಇಂಡೋನೇಸಿಯ ; ಪಶ್ಚಿಮ ಘಟ್ಟದ ಅಣ್ಣಾಮಲೈ ಮತ್ತು ಪಳನಿ ಬೆಟ್ಟ ಸಾಲುಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಈ ಸಸ್ಯ ಕೊಡಗಿನ ತಲಕಾವೇರಿಯಲ್ಲಿಯೂ ದಾಖಲಿಸ್ಪಟ್ಟಿದೆ.

ಗ್ರಂಥ ಸೂಚಿ :

Blume, Bijdr. 656. 1826; Keshava Murthy and Yoganarasimhan, Fl. Coorg (Kodagu) 213. 1990; Gamble, Fl. Madras 1:576. 1997 (re.ed); Sasidharan, Biodiversity documentation for Kerala - Flowering Plants, part 6:209. 2004.

Top of the Page