ವಿಬುರ್ನಮ್ ಎರುಬೆಸೆನ್ಸ್ Wall. ex DC - ಕ್ಯಾಪ್ರಿಫೋಲಿಯೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 8 ಮೀ. ಎತ್ತರ ಬೆಳೆಯುವ ಸಣ್ಣ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಅಡ್ಡವಾಗಿ ಜೋಡಣೆಗೊಂಡ ವಾಯುವಿನಿಮಯ ಬೆಂಡು ರಂಧ್ರಗಳ ಸಮೇತವಾಗಿರುತ್ತದೆ; ಕಚ್ಚು ಮಾಡಿದ ಜಾಗ ಹೆಚ್ಚೂಕಡಿಮೆ ಕೆಂಪು ಮಿಶ್ರಿತ ಕಂದು ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಎಲೆಯ ಕಿರುಕೊಂಬೆಗಳು ದುಂಡಾಗಿದ್ದು ಉದ್ದವಾದ ಮೃದು ಕೂದಲುಗಳ ಸಮೇತವಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು, ಅಭಿಮುಖಿ ಮತ್ತು ಕತ್ತಯಾಕಾರದಲ್ಲಿ ಜೋಡನೆಯಾಗಿರುತ್ತವೆ; ಕಾವಿನೆಲೆಗಳು ಭರ್ಜಿಯಾಕಾರದಲ್ಲಿದ್ದು ಉದುರಿ ಹೋಗುವಂತಹವುಗಳಾಗಿರುತ್ತವೆ; ತೊಟ್ಟು ಕೆಂಪಾಗಿದ್ದು, ಕಾಲುವೆಗೆರೆಗಳ ಸಮೇತವಿದ್ದು 3 ಸೆಂ.ಮೀ.ವರೆಗಿನ ಉದ್ದ ಹೊಂದಿರುತ್ತದೆ; ಪತ್ರಗಳ ಗಾತ್ರ 12 x 8 ಸೆ.ಮೀ., ವಿಶಾಲವಾದ ಅಂಡವೃತ್ತದಿಂದ ಹಿಡಿದು ಬುಗುರಿಯ ಆಕಾರವನ್ನು ಹೊಂದಿರುವ ಪತ್ರಗಳು ಚೂಪಾದ – ಕ್ರಮೇಣ ಚೂಪಾಗುವ ಮಾದರಿಯ ಬುಡ ಹೊಂದಿರುತ್ತವೆ, ಅಂಚು ಅಂತರ ಹೊಂದಿದ ಗರಗಸ ದಂತಿತ ಅಥವಾ ದಂತಿತವಾದ ಮಾದರಿಯಲ್ಲಿರುತ್ತದೆ. ಎಲ್ಲಾ ನಾಳಗಳು ಪತ್ರದ ಮೇಲ್ಭಾಗದಲ್ಲಿ ಅಚ್ಚೊತ್ತಿದಂತಿರುತ್ತವೆ;ಮಧ್ಯನಾಳಗಳು ಕಾಲುವೆಗೆರೆ ಸಮೇತವಿರುತ್ತವೆ. ಎರಡನೇ ದರ್ಜೆಯ ನಾಳಗಳು ಉಪ-ಅಭಿಮುಖಿಗಳಾಗಿದ್ದು 5 ರಿಂದ 7 ಜೋಡಿಗಳಿರುತ್ತವೆ; ಮೂರನೇ ದರ್ಜೆಯ ನಾಳಗಳು ಎಲೆದಿಂಡಿಗೆ ಅಡ್ಡವಾಗಿ ಕೂಡುತ್ತವೆ.
ಪುಷ್ಪಮಂಜರಿ/ಹೂಗಳು : ಪುಷ್ಪಮಂಜರಿಗಳು ಇಳಿ ಬೀಳುವ, ಕವಲೊಡೆದ ಮಂಜರಿ ಮಾದರಿಯವು; ಹೂಗಳು ಶ್ವೇತ ವರ್ಣದವು.
ಕಾಯಿ /ಬೀಜ : ಡ್ರೂಪುಗಳು ಕೆಂಪಾಗಿದ್ದು, ಚತುರಸ್ರಾಕಾರ ಹೊಂದಿದ್ದು, ಗಾತ್ರದಲ್ಲಿ 1.5 x 0.8 ಸೆಂ.ಮೀ. ಇರುತ್ತದೆ; ಬೀಜ ಒಂದಿದ್ದು ಚತುರಸ್ರಾಕಾರ ಹಾಗೂ 1 ಸೆಂ.ಮೀ. ಗಾತ್ರ ಹೊಂದಿದ್ದು ಸಂಕುಚಿತವಾಗಿದ್ದು, ಮಧ್ಯಜನಿತವಾದ ‘T ‘ಆಕಾರದ ತೋಡು ಗುರುತನ್ನು ಹೊಂದಿರುತ್ತದೆ.

ಜೀವಪರಿಸ್ಥಿತಿ :

ಅತಿ ಹೆಚ್ಚು ಎತ್ತರ ಪ್ರದೇಶಗಳ (1800 ರಿಂದ 2200 ಮೀ.) ನಿತ್ಯಹರಿದ್ವರ್ಣ ಕಾಡುಗಳ ಅಂಚಿನಲ್ಲಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ಭಾರತ ಮತ್ತು ಶ್ರೀಲಂಕಾ ; ಪಶ್ಚಿಮ ಘಟ್ಟದ ಅಣ್ಣಾಮಲೈ, ಪಳನಿ ಹಾಗೂ ನೀಲಗಿರಿ.

ಗ್ರಂಥ ಸೂಚಿ :

Candolle, Prodr. 4:329. 1830 ; Gamble, Fl. Madras 1:576. 1997 (re.ed); Sasidharan, Biodiversity documentation for Kerala - Flowering Plants, part 6:209. 2004.

Top of the Page