ವಿಬುರ್ನಮ್ ಪಂಕ್ಟೇಟಮ್ Ham. ex G.Don - ಕ್ಯಾಪ್ರಿಫೋಲಿಯೇಸಿ

Synonym : ವಿಬುರ್ನಮ್ ಅಕ್ಸುಮಿನೇಟಮ್ Wall.

ಕನ್ನಡದ ಪ್ರಾದೇಶಿಕ ಹೆಸರು : ಹೆಲ್ಲುಸುಂಡೆ, ನೊನ್ನ, ಕಂಪಾರಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 8 ಮೀ. ವರೆಗೆ ಬೆಳೆಯುವ ಸಣ್ಣ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ತೆಳುವಾಗಿರುತ್ತದೆ ಹಾಗೂ ಕಂದು ಬಣ್ಣ ಹೊಂದಿರುತ್ತದೆ ಮತ್ತು ವಾಯುವಿನಿಮಯ ಬೆಂಡುರಂಧ್ರ ಸಮೇತವಾಗಿರುತ್ತದೆ; ಕಚ್ಚು ಮಾಡಿದ ಜಾಗ ಹಸಿರು ಬಣ್ಣದಲ್ಲಿರುತ್ತವೆ.
ಕವಲುಗಳು ಮತ್ತು ಕಿರುಕೊಂಬೆಗಳು : ಬಲಿತ ಕಿರುಕೊಂಬೆಗಳು ವಾಯುವಿನಿಮಯ ಬೆಂಡುರಂಧ್ರ ಸಮೇತವಾಗಿ-ರುತ್ತದೆ. ಎಳೆಯ ಕಿರು ಕೊಂಬೆಗಳು ಹೊಳಪುಳ್ಳ, ಮಧ್ಯತೊಟ್ಟುಳ್ಳ ಶಲ್ಕೆಗಳಿಂದ ಅವೃತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಕತ್ತರಿಯಾಕಾರದ ಅಭಿಮುಖ ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ಎಲೆ ತೊಟ್ಟುಗಳು 0.7 ರಿಂದ 1.5 ಸೆಂ.ಮೀ. ಉದ್ದವಿದ್ದು, ಮೇಲ್ಭಾಗದಲ್ಲಿ ಕಾಲುವೆಗೆರೆ ಸಮೇತವಾಗಿರುತ್ತವೆ ಹಾಗೂ ಮಧ್ಯ ತೊಟ್ಟುಳ್ಳ ಶಲ್ಕೆಗಳಿಂದ ಕೂಡಿರುತ್ತವೆ.ಪತ್ರಗಳು 4–10 x2 – 4.5 ಸೆಂ.ಮೀ. ಗಾತ್ರ ಹೊಂದಿರುತ್ತವೆ ಹಾಗೂ ಆಕಾರದಲ್ಲಿ ಸಾಮಾನ್ಯವಾಗಿ ಅಂಡವೃತ್ತ ಕೆಲವು ಸಂದರ್ಭದಲ್ಲಿ ಸಂಕುಚಿತವಾದ ಬುಗುರಿಯನ್ನು ಹೋಲುತ್ತವೆ, ಚೂಪಾದ ಎಲೆಬುಡ, ಹಿಂಸುರುಳಿಯಾಗುವ ಅಂಚು ಹೊಂದಿದ ಪತ್ರಗಳು ಕಾಗದವನ್ನೋಲುವ ಮಾದರಿಯವು ಮತ್ತು ತಳಭಾಗದಲ್ಲಿ ಮಧ್ಯತೊಟ್ಟುಳ್ಳ ಶಲ್ಕೆಗಳನ್ನೊಳಗೊಂಡ ಮೇಲ್ಮೈ ಹೊಂದಿರುತ್ತವೆ, ಮಧ್ಯ ನಾಳಗಳು ಪತ್ರದ ಮೇಲ್ಭಾಗದಲ್ಲಿ ಕಾಲುವೆಗೆರೆ ಸಮೇತವಿರುತ್ತದೆ; ಎರಡನೇ ದರ್ಜೆಯ ನಾಳಗಳು 5 ರಿಂದ ಜೋಡಿಗಳದ್ದು ಪತ್ರದ ಮೇಲ್ಭಾಗದಲ್ಲಿ ತುಸು ಅಚ್ಚೊತ್ತಿದಂತಿರುತ್ತವೆ; ಮೂರನೇ ದರ್ಜೆಯ ನಾಳಗಳು ಅಸ್ಪಷ್ಟವಾಗಿ ಜಾಲಬಂಧ ಹಾಗೂ ಎಲೆದಿಂಡಿಗೆ ಅಡ್ಡವಾಗಿ ಸೇರುವಂತಹ ಮಾದರಿಯವು.
ಪುಷ್ಪಮಂಜರಿ/ಹೂಗಳು : ಪುಷ್ಪಮಂಜರಿ ಸಂಯುಕ್ತ ಪೀಠಛತ್ರ ರೀತಿಯವು ಹಾಗೂ ನೀಳಛತ್ರ ರೂಪಿಗಳು; ಹೂಗಳು ಶ್ವೇತ ವರ್ಣದವು.
ಕಾಯಿ /ಬೀಜ : ಡ್ರೂಪುಗಳು ಚತುರಸ್ರ – ಅಂಡವೃತ್ತ ಕೆಲವು ವೇಳೆ ಸಂಕುಚಿತ ಬುಗುರಿಯಾಕಾರದವು. ಉದ್ದ 1 ಸೆಂ.ಮೀ. ನಷ್ಟಿದ್ದು ಮಧ್ಯದಲ್ಲಿ ತೊಟ್ಟುಳ್ಳ ಶಲ್ಕೆಗಳಿಂದ ಅವೃತ್ತವಾಗಿದ್ದು ಒಂದು ಬೀಜವನ್ನೊಳ-ಗೊಂಡಿರುತ್ತವೆ.

ಜೀವಪರಿಸ್ಥಿತಿ :

200 ಮತ್ತು 2400 ಮೀ. ವರೆಗಿನ ಮಧ್ಯಮ ಮತ್ತು ಅತಿಹೆಚ್ಚು ಎತ್ತರದ ಪ್ರದೇಶಗಳ ನಿತ್ಯಹರಿದ್ವರ್ಣ ಕಾಡುಗಳ ಒಳಛಾವಣಿಗಳಲ್ಲಿ ಈ ಪ್ರಭೇದ ಕಂಡು ಬರುತ್ತದೆ.

ವ್ಯಾಪನೆ :

ಇಂಡೋಮಲೇಶಿಯ, ಪಶ್ಚಿಮ ಘಟ್ಟದ ದಕ್ಷಿಣ ಮತ್ತು ಮಧ್ಯ ಸಹಾದ್ರಿಯ ಪ್ರದೇಶಗಳು.

ಗ್ರಂಥ ಸೂಚಿ :

Don, Prodr. Fl. Nep. 142. 1825; Keshava Murthy and Yoganarasimhan, Fl. Coorg (Kodagu) 213. 1990; Gamble, Fl. Madras 1:575. 1997 (re.ed); Sasidharan, Biodiversity documentation for Kerala Flowering Plants, part 6:209. 2004.

Top of the Page