ವೈಟೆಕ್ಸ್ ಆಲ್ಟಿಸ್ಸಿಮ L.f. - ವೆರ್ಬೆನೇಸಿ

:

Vernacular names : Tamil: ಮೈಯಿಲ,ಮೈಲೆಲ್ಲುMalayalam: ಮೈರೊಳೆ,ನವಿಲಾಡಿ,ನವುಲಾಡಿ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 20 ಮೀ. ಎತ್ತರದ ದೊಡ್ಡ ಗಾತ್ರದ ಎಲೆಯುದುರುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಬೂದು ಬಣ್ಣದಲ್ಲಿದ್ದು,ವಾಯುವಿನಿಮಯ ಬೆಂಡು ರಂಧ್ರಗಳ ಸಮೇತವಿದ್ದು ಬಲಿತಾಗ ಚಕ್ಕೆ ರೂಪದಲ್ಲಿರುತ್ತದೆ;ಕಚ್ಚು ಮಾಡಿದ ಜಾಗ ಹಳದಿ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು 4-ಕೋನಯುಕ್ತವಾಗಿದ್ದು ಮೃದುತುಪ್ಪಳದಿಂದ ಕೂಡಿದ್ದು ವಾಯುವಿನಿಮಯ ಬೆಂಡು ರಂಧ್ರಗಳ ಸಮೇತವಿರುತ್ತವೆ.
ಎಲೆಗಳು : ಎಲೆಗಳು ಸಂಯುಕ್ತ ಮಾದರಿಯವುಗಳಾಗಿದ್ದು ಸಾಮಾನ್ಯವಾಗಿ 3-ಕೂಡೆಲೆಗಳನ್ನು ಅಥವಾ ಅಪರೂಪವಾಗಿ 5-ಕೂಡೆಲೆಗಳನ್ನು(2 ಚಿಕ್ಕ ಕಿರುಪತ್ರಗಳನ್ನೊಳಗೊಂಡು) ಹೊಂದಿದ್ದು, ಅಭಿಮುಖ, ಕತ್ತರಿಯಾಕಾರದ ಜೋಡನಾ ವ್ಯವಸ್ಥೆಯಲ್ಲಿರುತ್ತವೆ;ವೃಂತಗಳು ಬುಡದಲ್ಲಿ ಉಬ್ಬಿರುತ್ತದೆ, ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯದ ಆಕಾರ ಹೊಂದಿರುತ್ತವೆ ,ರೆಕ್ಕೆಗಳ ಸಮೇತವಿದ್ದು ಸೂಕ್ಷ್ಮವಾದ ಮೃದುತುಪ್ಪಳದಿಂದ ಕೂಡಿರುತ್ತವೆ;ಕಿರುಪತ್ರಗಳು ತೊಟ್ಟುರಹಿತವಾಗಿದ್ದು,7 – 17 X 2 – 6.5 ಸೆಂ.ಮೀ. ಗಾತ್ರ ಹೊಂದಿದ್ದು ಸಂಕುಚಿತ ಅಂಡವೃತ್ತ- ಅಥವಾ ಅಂಡವೃತ್ತ - ಭರ್ಜಿಯ ಆಕಾರ ಹೊಂದಿದ್ದು, ಕ್ರಮೇಣ ಚೂಪಾಗುವ ತುದಿ, ಬೆಣೆಯಾಕಾರದ ಬುಡ, ಗರಗಸ ದಂತಿತವಾದ ಅಥವಾ ನಯವಾದ ಅಂಚು,ಕಾಗದವನ್ನೋಲುವ ಮೇಲ್ಮೈ ಹೊಂದಿದ್ದು ತಳಭಾಗದಲ್ಲಿ ಮಾಸಲು ಬೂದು ಹಸಿರು ಬಣ್ಣ ಮತ್ತು ಸೂಕ್ಷ್ಮವಾದ ಮೃದುತುಪ್ಪಳದಿಂದ ಕೂಡಿರುತ್ತವೆ ಅಥವಾ ರೋಮರಹಿತವಾಗಿರುತ್ತವೆ;ಮಧ್ಯನಾಳ ಮೇಲ್ಭಾಗದಲ್ಲಿ ಕಾಲುವೆಗೆರೆ ಸಮೇತವಿರುತ್ತದೆ;ಎರಡನೇ ದರ್ಜೆಯ 10 ರಿಂದ 20 ಜೋಡಿಗಳಿರುತ್ತವೆ; ಮೂರನೇ ದರ್ಜೆಯ ನಾಳಗಳು ಜಾಲಬಂಧ ನಾಳ ವಿನ್ಯಾಸದಲ್ಲಿದ್ದು ಎಲೆಯ ದಿಂಡಿಗೆ ಅಡ್ಡವಾಗಿ ಕೂಡುವ ಮಾದರಿಯಲ್ಲಿರುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿ ತುದಿಯಲ್ಲಿನ ಪುನರಾವೃತ್ತಿಯಾಗಿ ಕವಲೊಡೆಯುವ ಮಾದರಿಯವುಗಳಾಗಿದ್ದು ಸೂಕ್ಷ್ಮವಾದ ಮೃದುತುಪ್ಪಳದಿಂದ ಕೂಡಿರುತ್ತವೆ; ಹೂಗಳು ಉಭಯ ಪಾರ್ಶ್ವ ಅಸಮಾಂಗತೆಯುಳ್ಳ ಮಾದರಿಯಲ್ಲಿದ್ದು ಬಿಳಿ ನೀಲಿ ಛಾಯೆ ಹೊಂದಿರುತ್ತವೆ.
ಕಾಯಿ / ಬೀಜ : ಡ್ರೂಪ್ಗಳು ನಯವಾಗಿದ್ದು, ಗೋಳಾಕಾರದಲ್ಲಿದ್ದು,0.9 ಸೆಂ.ಮೀ. ಅಡ್ಡಗಲತೆ ಹೊಂದಿರುತ್ತವೆ, ಕೆನ್ನೀಲಿ ಮಿಶ್ರಿತ ಕಪ್ಪು ಬಣ್ಣ ಹೊಂದಿರುತ್ತವೆ;ಬೀಜಗಳ ಸಂಖ್ಯೆ 4.

ಜೀವಪರಿಸ್ಥಿತಿ :

1200 ಮೀ. ಎತ್ತರದ ಪ್ರದೇಶಗಳಲ್ಲಿನ ನಿತ್ಯ ಹರಿದ್ವರ್ಣದಿಂದ ಅರೆನಿತ್ಯ ಹರಿದ್ವರ್ಣ ಕಾಡುಗಳ ಮೇಲ್ಛಾವಣಿಯಲ್ಲಿ ಈ ಸಸ್ಯ ಬೆಳೆಯುತ್ತದೆ.

ವ್ಯಾಪನೆ :

ಇಂಡೋಮಲೇಸಿಯ ; ಪಶ್ಚಿಮ ಘಟ್ಟದ ಎಲ್ಲಾ ಪ್ರದೇಶಗಳಲ್ಲಿ ಈ ಪ್ರಭೇದ ಕಂಡುಬರುತ್ತದೆ.

ಗ್ರಂಥ ಸೂಚಿ :

Suppl. Pl. 294. 1781; Gamble, Fl. Madras 2: 1102. 1993 (re.ed.); Sasidharan, Biodiversity documentation for Kerala- Flowering Plants, part 6: 363. 2004.

Top of the Page