ಆಂಟಿಡೆಸ್ಮ ಮೊಂಟಾನ Blume - ಯೂಫೊರ್ಬಿಯೇಸಿ

Synonym : ಆಂಟಿಡೆಸ್ಮ ಪ್ಯೂಬೆಸೆನ್ಸ್ Roxb. var. ಮೆಣಸು Tul.; ಆಂಟಿಡೆಸ್ಮ ಮೆಣಸು Miq. ex Tul.

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ಅಂದಾಜು 10 ಮೀ. ಎತ್ತರದವರೆವಿಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ವಯಸ್ಸಾದ ಮರಗಳಲ್ಲಿತೆಳು ಚಕ್ಕೆ ರೂಪದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು ಮೃದುತುಪ್ಪಳವನ್ನು ಹೊಂದಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು, ಪರ್ಯಾಯ ಮತ್ತು ಸುತ್ತು ಜೋಡನಾ ಮಾದರಿ ಹೊಂದಿದ್ದು ಕಾಂಡದ ಎರಡೂ ಕಡೆ ಎದುರು ಬದರಿನ ಲಂಬ ಸಾಲಿನಲ್ಲಿರುತ್ತವೆ. ಕಾವಿನೆಲೆಗಳು ರೇಖಾತ್ಮಕ-ಭರ್ಜಿಯ ಆಕಾರದಲ್ಲಿದ್ದು ಚೂಪಾಗಿದ್ದು, ಮೃದು ತುಪ್ಪಳ ಹೊಂದಿದ್ದು 1.2 ಸೆಂ.ಮೀ ಉದ್ದವಿರುತ್ತವೆ ಹಾಗೂ ಉಪ-ಶಾಶ್ವತವಾಗಿರುತ್ತವೆ; ತೊಟ್ಟುಗಳು ಅಂದಾಜು 0.25-0.7(-1.2) ಸೆಂ.ಮೀ. ಉದ್ದವಿದ್ದು ದುಂಡಾಗಿರುತ್ತವೆ ಕೆಲವು ವೇಳೆ ಉಪ-ಕಾಲುವೆಗೆರೆಗಳನ್ನು ಹೊಂದಿರುತ್ತವೆ ಹಾಗೂ ಮೃದುತುಪ್ಪಳ ಸಮೇತವಾಗಿರುತ್ತವೆ; ಪತ್ರಗಳು 8-22 X2.5- 7.7 ಸೆಂ ಮೀ. ವರೆಗಿನ ಗಾತ್ರ; ಸಾಮಾನ್ಯವಾಗಿ ಚತುರಸ್ರದಿಂದ ಅಂಡವೃತ್ತ ಅಥವಾ ಬುಗುರಿ - ಭರ್ಜಿವರೆಗಿನ ಮಾದರಿಯ ಆಕಾರ, ಅಗ್ರದಲ್ಲಿ ಮೊನಚು ಮುಳ್ಳನ್ನು ಹೊಂದಿದ ಕ್ರಮೇಣ ಚೂಪಾಗುವ ತುದಿ, ಚೂಪಾದುದರಿಂದ ಹಿಡಿದು ದುಂಡಗಿನ ಅಥವಾ ಬೆಣೆಯಾಕಾರದ ಬುಡ, ನಯವಾದ ಅಂಚು, ಕಾಗದವನ್ನೋಲುವ ಮೇಲ್ಮೈ ಹೊಂದಿರುತ್ತವೆ, ಮಧ್ಯನಾಳವನ್ನು ಹೊರತು ಪಡಿಸಿ ಮಿಕ್ಕೆಲ್ಲಾ ಭಾಗಗಳು ರೋಮರಹಿತವಾಗಿರುತ್ತವೆ;ಎರಡನೇ ದರ್ಜೆಯ ನಾಳಗಳು 5 ರಿಂದ 9 ಜೋಡಿಗಳಿರುತ್ತವೆ ಮತ್ತು ಆರೋಹಣಮಾದರಿಯಲ್ಲಿರುತ್ತವೆ; ಮೂರನೇ ದರ್ಜೆಯ ನಾಳಗಳು ವಿಶಾಲ ಜಾಲಬಂಧ ನಾಳ ವಿನ್ಯಾಸ ಹೊಂದಿರುತ್ತವೆ.
ಪುಷ್ಪಮಂಜರಿ/ಹೂಗಳು : ಪುಷ್ಪಮಂಜರಿಗಳು ಅಕ್ಷಾಕಂಕುಳಿನಲ್ಲಿ ಅಥವಾ ತುದಿಯಲ್ಲಿರುತ್ತವೆ; ಹೂಗಳು ಏಕಲಿಂಗಿಗಳಾಗಿದ್ದು ಗಂಡು ಮತ್ತು ಹೆಣ್ಣು ಹೂಗಳು ಪ್ರತ್ಯೇಕ ಸಸ್ಯಗಳಲ್ಲಿರುತ್ತವೆ; ಗಂಡು ಹೂಗಳ ಗುಚ್ಛಗಳು ಹೆಣ್ಣು ಹೂಗಳ ಗುಚ್ಛಗಳಿಗಿಂತ ಹೆಚ್ಚು ಅಂತರದಲ್ಲಿರುತ್ತವೆ.
ಕಾಯಿ /ಬೀಜ : ಡ್ರೂಪ್ಗಳು ಅಂಡವೃತ್ತಾಕಾರದಲ್ಲಿದ್ದು ಸ್ವಲ್ಪ ಮಟ್ಟಿಗೆ ಓರೆಯಾಗಿರುತ್ತವೆ ಹಾಗೂ ಕೆಂಪು ಬಣ್ಣಕ್ಕೆ ತಿರುಗುತ್ತವೆ ಮತ್ತುಒಂದು ಬೀಜವನ್ನು ಹೊಂದಿರುತ್ತವೆ.

ಜೀವಪರಿಸ್ಥಿತಿ :

1900 ಮೀ. ವರೆಗಿನ ಎತ್ತರದ ಪ್ರದೇಶಗಳಲ್ಲಿನ ಭಂಗಗೊಂಡ ನಿತ್ಯಹರಿದ್ವರ್ಣ ಕಾಡುಗಳ ಒಳಛಾವಣಿ ಮರಗಳಾಗಿ ಈ ಸಸ್ಯ ಕಂಡುಬರುತ್ತದೆ.

ವ್ಯಾಪನೆ :

ಇಂಡೋಮಲೇಶಿಯಾ; ಪಶ್ಚಿಮ ಘಟ್ಟಗಳಲ್ಲಿನ ದಕ್ಷಿಣ, ಮಧ್ಯ ಸಹ್ಯಾದ್ರಿ ಮತ್ತು ಮಹಾರಾಷ್ಟ್ರದ ಸಹ್ಯಾದ್ರಿಯಲ್ಲಿ ಈ ಪ್ರಭೇದ ಕಂಡುಬರುತ್ತದೆ.

ಗ್ರಂಥ ಸೂಚಿ :

Bijdr. 1134.1826; Gamble, Fl. Madras 2:1297.1993(rep.ed.); Sasidharan, Biodiversity documentation for Kerala – Flowering plants, part 6. 409.2004;Saldanha, Fl. Karnataka 2:117.1996.

Top of the Page