ಆರ್ಕಿಡೆಂಡ್ರಾನ್ ಕ್ಲೈಪೆಯಾರಿಯ (Jack) Nielson - ಫ್ಯಾಬೇಸಿ- ಮಿಮೋಸಾಯ್ಡಿ

ಪರ್ಯಾಯ ನಾಮ : ಇಂಗ ಕ್ಲೈಪೆಯಾರಿಯ Jack; ಪಿತೆಸೆಲ್ಲೋಬಿಯಂ ಸಬ್ಕೋರಿಯಾಸಿಯಂ Thw.

Vernacular names : Tamil: ಅತ್ತ ಬೆರಂತ; ಮಳವಕ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ಪೊದೆಗಳು ಅಥವಾ 10 ಮೀ. ಎತ್ತರದವರೆಗೆ ಬೆಳೆಯುವ ಸಣ್ಣ ಮರಗಳು.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ಕೋನಯುಕ್ತವಾಗಿದ್ದು ಕಿಲುಬು ಬಣ್ಣದ ದಟ್ಟ ಮೃದು ತುಪ್ಪಳದಿಂದ ಕೂಡಿರುತ್ತವೆ.
ಎಲೆಗಳು : ಎಲೆಗಳು ಸಂಯುಕ್ತ, ದ್ವಿಗರಿ ಹಾಗೂ ಸಮ ಸಂಖ್ಯಾ ಗರಿ ರೂಪಿಗಳಾಗಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ ;ಕಾವಿನೆಲೆಗಳು ಅಸ್ಥಿರವಾಗಿರುತ್ತವೆ;ನಡುಕಾಂಡ 5 -6 ಸೆಂ.ಮೀ.ಉದ್ದವಿದ್ದು,ಉಬ್ಬಿದ ಎಲೆ ಬುಡವನ್ನು ಹೊಂದಿದ್ದು ಮೇಲ್ಭಾಗದಲ್ಲಿ ದುಂಡಾದ, ತೊಟ್ಟುರಹಿತವಾದ ರಸಗ್ರಂಥಿಗಳ ಸಮೇತವಿದ್ದು ತುಕ್ಕು ಬಣ್ಣದ ದಟ್ಟ ಮೃದು ತುಪ್ಪಳದಿಂದ ಕೂಡಿರುತ್ತವೆ; ಗರಿಗಳು 3 ರಿಂದ 12 ಜೋಡಿಗಳಿದ್ದು ಅಭಿಮುಖಿಗಳಾಗಿದ್ದು ದಟ್ಟ ಮೃದು ತುಪ್ಪಳ ಸಹಿತವಿರುತ್ತವೆ;ಕಿರು ಎಲೆಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು,ಚಿಕ್ಕ ಗಾತ್ರದವು ಹಾಗೂ ತೊಟ್ಟು ರಹಿತವಾಗಿರುತ್ತಮತ್ತು 0.6-0.9 X 0.2 ಸೆಂ.ಮೀ ಗಾತ್ರ, ಚತುರಸ್ರದಿಂದ ಚತುರಸ್ರ – ವಿಷಮ ಸಮಾನಾಂತರ ಚತುರ್ಭುಜದ ಆಕಾರ , ಚೂಪಾದ ಮತ್ತು ಸೂಕ್ಷ್ಮ ಮೊನಚು ಮುಳ್ಳುಳ್ಳ ತುದಿ ಅಸಮ್ಮಿತಿಯಾದ ಬುಡ,ನಯವಾದ ಮತ್ತು ಹಿಂಬಾಗಿದ ಅಂಚು ಚರ್ಮವನ್ನೋಲುವ ಮೇಲ್ಮೈ, ಕಂದು ಮಿಶ್ರಿತಹಳದಿ ಬಣ್ಣದ ಉದ್ದವಾದ ಮೃದುಗೂದಲಿಂದ ಕೂಡಿದ ತಳಭಾಗ ಹೊಂದಿರುತ್ತವೆ; ಮಧ್ಯನಾಳ ಕಾಲುವೆ ಗೆರೆ ಸಮೇತವಿರುತ್ತದೆ;ಎರಡನೇ ದರ್ಜೆಯ ನಾಳಗಳು 4 ರಿಂದ 6;ಮೂರನೇ ದರ್ಜೆಯ ನಾಳಗಳು ಅಸ್ಪಷ್ಟ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ಗುಚ್ಛಗೊಂಡ ಗೋಳಾಕಾರ ಮಂಜರಿ ಮಾದರಿಯವು;ಹೂಗಳು ತೊಟ್ಟು ರಹಿತವಾಗಿದ್ದು ಹಸಿರು ಮಿಶ್ರಿತ ಬಿಳಿ ಬಣ್ಣ ಹೊಂದಿರುತ್ತವೆ,ಕೇಸರಗಳು ಬಿಳಿ ಬಣ್ಣ ಹೊಂದಿದ್ದು ಹೆಚ್ಚಿನ ಸಂಖ್ಯೆಯಲ್ಲಿರುತ್ತವೆ.
ಕಾಯಿ / ಬೀಜ : ಕಾಯಿಗಳು ಪಾಡ್ ಮಾದರಿಯವುಗಳಾಗಿದ್ದು 7.5 ರಿಂದ 10 ಸೆಂ.ಮೀ. ಉದ್ದ ಮತ್ತು ಚರ್ಮವನ್ನು ಹೋಲುವ ಮೇಲ್ಮೈ ಹೊಂದಿದ್ದು ತಿರುಚಿಕೊಂಡಿರುತ್ತವೆ..

ಜೀವಪರಿಸ್ಥಿತಿ :

1300 ಮತ್ತು2200ಮೀ.ಎತ್ತರದವರೆಗಿನ ಪ್ರದೇಶಗಳಲ್ಲಿನ ನಿತ್ಯ ಹರಿದ್ವರ್ಣ ಕಾಡುಗಳ ಅಂಚಿನಲ್ಲಿ ಈ ಪ್ರಭೇದ ಕಂಡು ಬರುತ್ತದೆ.

ವ್ಯಾಪನೆ :

ಭಾರತ ಮತ್ತು ಶ್ರೀಲಂಕಾ; ಪಶ್ಚಿಮ ಘಟ್ಟದಲ್ಲಿನ ದಕ್ಷಿಣ ಸಹ್ಯಾದ್ರಿಯಲ್ಲಿ ಈ ಪ್ರಭೇದ ವ್ಯಾಪಿಸಿದೆ.

ಗ್ರಂಥ ಸೂಚಿ :

Adansonia 19:15.1979; J.Econ.Tax. Bot. 17:688.1993;Gamble,Fl. Madras 1:434. 1997(rep.ed.);Sasidharan, Biodiversity documentation for Kerala- Flowering Plants, part 6:162.2004.

Top of the Page